ಕಂಪ್ಲಿ : ಪಟ್ಟಣದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಕಂಪ್ಲಿ ತಾಲೂಕು ಘಟಕ ರಚಿಸಿ, ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಇ.ಧನಂಜಯ್ಯ, ಗೌರವಾಧ್ಯಕ್ಷರಾಗಿ ಜಯಣ್ಣ, ನಾನಾಪಾಟಿ, ಉಪಾಧ್ಯಕ್ಷರಾಗಿ ಓಬಳೇಶ, ಪ್ರಧಾನ ಕಾರ್ಯದರ್ಶಿಯಾಗಿ ನೀಲಪ್ಪ ಪೇಂಟರ್, ಖಜಾಂಚಿಯಾಗಿ ಸುಂಕಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಪರಶುರಾಮ, ರಾಮಾಂಜನೇಯಲು, ಮೋಹನ್, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಶ್ರೀಕಾಂತ, ಶಿವುಕುಮಾರ ಹೆಚ್.ಪಿ, ರೇಣುಕಾ, ವೀರಾಂಜಿನೇಯಲು, ಆಂಥೋನಿ, ಹೆಚ್.ಹುಲುಗಪ್ಪ, ಅಬ್ರಹಂ, ಸಾಮಾನ್ಯ ಸದಸ್ಯರಾಗಿ ಆಲೂರು ಶ್ರೀನಿವಾಸಲು, ಚಿನ್ನರಾಮಾಂಜಿನಿ, ಬಲರಾಮ, ದೊಡ್ಡಬಸಪ್ಪ ಗೋನಾಳ್, ವಿರುಪಾಕ್ಷಿ, ಶಾಂತಪ್ಪ, ಈಶ್ವರ, ರಾಮದಾಸ ಇವರನ್ನು ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಅವರ ಅಧ್ಯಕ್ಷತೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕ ಆದೇಶ ಪ್ರತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















