ಮುಂಜಾನೆಯ ಬೆಳಕು ಮೂಡುವ ಮುನ್ನವೇ ಪಾದಯಾತ್ರೆ ಮೂಲಕ ಬರುವುದು ಭಕ್ತರ ಸಾಲು ಸಾಗರದಂತೆ ಸನ್ನಿಧಾನಕ್ಕೆ
ಬರೆಗಾಲಿನ ಹೆಜ್ಜೆಯಲ್ಲಿ
ಕಲ್ಲು ಮುಳ್ಳು ಲೆಕ್ಕಿಸದೆ
ಭಕ್ತಿಯಿಂದ ಬರುವುದು
ನಿನ್ನ ನಾಮವು ಸ್ಮರಿಸುತ್ತಾ
ಭಕ್ತಿಯ ತುಂಬು ಜಗಕೆ
ಹೂವು ಹಣ್ಣು ಅರ್ಪಿಸಿ
ಕಾಯಿ ಕರ್ಪೂರ ಬೆಳಗಿಸಿ
ನಿನ್ನ ಕೃಪೆಯನ್ನು ಸ್ವೀಕರಿಸಿ
ಮಹಾ ಪ್ರಸಾದವ ಸೇವಿಸಿ
ಧನ್ಯರಾಗುವರು ನಮಿಸಿ
ಮಂತ್ರಘೋಷಣೆ ಮಾಡಿ
ಭಾವೈಕ್ಯತೆಗಳು ಕೂಡಿ
ನೋವು ಸಂಕಷ್ಟವ ದೂರದಿ ದೂಡಿ
ಎಲ್ಲರೂ ರಥವ ಎಳೆದು
ಎಲ್ಲರೂ ಅವರವರ ಮನೆಗೆ ಕ್ಷೇಮದಿ ತಲುಪಲಿ
ಇದು ಗವಿಸಿದ್ದಪ್ಪ ಅಜ್ಜನವರ ಆಶೀರ್ವಾದ…
- ಅಕ್ಕಮಹಾದೇವಿ ಶ್ರೀಶೈಲಪ್ಪ ಅಂಗಡಿ
ಆಕಾಶವಾಣಿ ಕಲಾವಿದರು
ಸಾ. ರಾಜೂರು
ತಾ. ಕುಕುನೂರು
ಜಿ. ಕೊಪ್ಪಳ.




















