ತುಂಬಿರುವ ಮನೆಯು ನನ್ನದು
ಸಂಸ್ಕಾರ ಸೆಲೆಯ ಸಿಹಿ ಗೂಡಿದು
ಸಿಹಿ ಮಧುರತೆಯು ತುಂಬಿಹುದು
ಆನಂದ ಸಾಗರದಿ ತೇಲುತಿಹುದು.
ಹೆತ್ತವರ ಪಾಲಿಸುವ ದೈವ ಭಕ್ತಿ
ಇದುವೇ ನಮ್ಮ ಸಂಸಾರದ ಶಕ್ತಿ
ಹಿರಿಯರ ಸಂಭಾಳಿಸುವ ಯುಕ್ತಿ
ಜಗಳ ವೈಷಮ್ಯಕ್ಕೆ ನೀಡಿದೆ ಮುಕ್ತಿ.
ಗಟ್ಟಿ ಬಾಂಧವ್ಯಕ್ಕೆ ಬೆಸುಗೆ ಇಲ್ಲಿದೆ
ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದೆ
ಅರಿತು ಸಾಗುವ ನೀತಿ ಸೂತ್ರವಿದೆ
ಕಿರುನಗೆ ಅಲೆಯಲಿ ಸಿಹಿ ಅಡಗಿದೆ.
ಯಾರು ಪಡಲಾರರು ಇಲ್ಲಿ ವೇದನೆ
ಎಲ್ಲರಿಗೂ ಉಂಟು ಶುದ್ಧತೆ ಚಿಂತನೆ
ಒಮ್ಮೆ ಇಣುಕಲು ಕೇಡಿನ ಯೋಚನೆ
ಒಮ್ಮತದಿಂದ ಸಿದ್ಧವು ನವ ಯೋಜನೆ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ : 9740199896.




















