ಬಳ್ಳಾರಿ / ಕಂಪ್ಲಿ : ಕಂಪ್ಲಿ ಗ್ರಾಮದ ಎಚ್.ಎಂ. ಗವಿಸಿದ್ದಯ್ಯ ಸ್ವಾಮಿಗಳು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಅವರ ಅಗಲಿಕೆಯಿಂದ ಕುಟುಂಬದವರು, ಬಂಧು–ಮಿತ್ರರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.
ದುಃಖದ ಈ ಸಂದರ್ಭದಲ್ಲಿ ಕೂಡ ಮಾನವೀಯತೆಯ ಮಹತ್ವವನ್ನು ಮೆರೆದಿರುವ ಅವರ ಕುಟುಂಬದವರು, ಮೃತರ ನೇತ್ರದಾನ ಮಾಡುವ ಮೂಲಕ ಶ್ರೇಷ್ಠ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ. ಸಾವಿನ ನಂತರವೂ ಇನ್ನೊಬ್ಬರ ಬದುಕಿಗೆ ಬೆಳಕಾಗುವ ಈ ಮಹತ್ವದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಪರಮಾತ್ಮ ನೀಡಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















