ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎರಡು ದಿನದ ಕಂಪ್ಲಿ ಉತ್ಸವಕ್ಕೆ ತೆರೆ : ಪೊಗರು.. ಅಣ್ಣನಿಗೆ ..ಪೊಗರು” ಎಂಬ ಹಾಡಿಗೆ ಶಾಸಕ ಗಣೇಶ್ ಡ್ಯಾನ್ಸ್ : ಉತ್ಸವದಲ್ಲಿ ಮಿಂದೆದ್ದ ಜನಸಾಗರ

ಬಳ್ಳಾರಿ / ಕಂಪ್ಲಿ: ಎರಡು ದಿನಗಳ ಕಾಲ ಜನಸಾಗರದ ನಡುವೆ ಜರುಗಿದ ಗತವೈಭವ ಸಾರುವ ಐತಿಹಾಸಿಕ ಕಂಪ್ಲಿ ಉತ್ಸವಕ್ಕೆ ಗುರುವಾರ ರಾತ್ರಿ ವಿದ್ಯುಕ್ತ ತೆರೆ ಬಿದ್ದಿದೆ.
ಪಟ್ಟಣದ ಸಕ್ಕರೆ ಕಾರ್ಖಾನೆ ಆವರಣದಲ್ಲಿನ ವೀರ ಕಂಪಲಿರಾಯ ವೇದಿಕೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಶಾಸಕ ಜೆ.ಎನ್.ಗಣೇಶ್ ಅವರ ಅಧ್ಯಕ್ಷತೆಯ ಕಂಪ್ಲಿ ಉತ್ಸವವು ಗುರುವಾರ ಯಶಸ್ವಿಗೊಂಡಿತು. ಚಳಿ ಲೆಕ್ಕಿಸದೇ ಜನಸಮೂಹವೇ ಉತ್ಸವಕ್ಕೆ ಹರಿದು ಬಂದಿರುವುದು ಕಂಡು ಬಂತು.
ವೇದಿಕೆ ಸಮಾರಂಭದ ಉದ್ಘಾಟನೆಯ ನಂತರದಲ್ಲಿ ಸಂಗೀತ ಗಾಯಕರಾದ ಬಾಳು ಬೆಳಗುಂಡಿ, ಹನುಮಂತ, ಚನ್ನಪ್ಪಾ, ಅಶ್ವಿನಿ ಇವರ ಇಂಪಾದ ಹಾಡುಗಳಿಂದ ನೆರೆದಿದ್ದ ಜನರಿಗೆ ಸಂಗೀತ ರಸದೌತಣ ಉಣಬಡಿಸಿದರು. ನಂತರ ಕಿಲಾಡಿಗಳಾದ ಪ್ರವೀಣ್‌ಕುಮಾರ, ಶಿವರಾಜ ಸೇರಿದಂತೆ ಇತರರು ಕಾಮಿಡಿ ಮೂಲಕ ಜನರನ್ನು ನಗೆಗೆಡಲಲ್ಲಿ ತೇಲಾಡುವಂತೆ ಮಾಡಿದರು. ಇಲ್ಲಿನ ಸಂಗೀತ, ಕಾಮಿಡಿ ಕಲಾವಿದರನ್ನು ಆಹ್ವಾನಿಸುವ ಮೂಲಕ ನಿರೂಪಣೆಯೊಂದಿಗೆ ಖ್ಯಾತ ನಿರೂಪಕಿ ಅನುಶ್ರೀ ಜನರ ಮನ್ನಣೆ ಪಡೆದರು. ವೇದಿಕೆ ಮುಂಭಾಗಕ್ಕೆ ಅನುಶ್ರೀ ಬರುತ್ತಿದ್ದಂತೆ ಜನರು ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಕೊನೆ ಹಂತದಲ್ಲಿ ವೇದಿಕೆಗೆ ಗಾಯಕ ಚಂದನ್ ಶೆಟ್ಟಿ ಆಗಮಿಸುತ್ತಿದ್ದಂತೆ ನೆರೆದಿದ್ದ ಜನರ ಶಿಳ್ಯೆ, ಕೇಕೆ, ಚಪ್ಪಾಳೆಗೆ ಪಾರವೇ ಇಲ್ಲದಂತಾಗಿತ್ತು. ವಿಭಿನ್ನ ಹಾಡುಗಳ ಮೂಲಕ ಜನರನ್ನು ಸಂಗೀತ ಲೋಕಕ್ಕೆ ಕೊಂಡೊಯ್ದದರು. ಚಂದನ್‌ಶೆಟ್ಟಿ ಇವರು ಪೊಗರು’ ಚಿತ್ರದ ಪೊಗರು.. ಅಣ್ಣನಿಗೆ ..ಪೊಗರು ಎಂಬ ಹಾಡಿನ ಮೂಲಕ ಶಾಸಕ ಗಣೇಶ್ ಅವರನ್ನು ವೇದಿಕೆ ಮೇಲೆಯೇ ಹೆಜ್ಜೆ ಹಾಕುವಂತೆ ಮಾಡಿದರು. ಈ ಹಾಡಿಗೆ ಶಾಸಕ ಗಣೇಶ್ ಅದ್ಭುತವಾಗಿ ಡ್ಯಾನ್ಸ್ ಮಾಡುವ ಮೂಲಕ ಜನರನ್ನು ಉರಿದೆಬ್ಬಿಸುವಂತೆ ಮಾಡಿದರು. ಇವರ ಸಂಗೀತಕ್ಕೆ ಮಣಿದ ಜನ ಸಹ ಅವರಿದ್ದ ಸ್ಥಳದಲ್ಲಿಯೇ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಈ ವೇಳೆ ಜನರ ಹರ್ಷೊದ್ಘಾರ, ಕೇಕೆ ಮುಗಿಲು ಮುಟ್ಟಿತ್ತು. ಅದರೊಂದಿಗೆ ಎರಡು ದಿನಗಳ ಅದ್ದೂರಿ ಕಂಪ್ಲಿ ಉತ್ಸವಕ್ಕೆ ವರ್ಣರಂಜಿತ ತೆರೆ ಬಿತ್ತು. ಒಟ್ನಲ್ಲಿ ಕಂಪ್ಲಿ ಉತ್ಸವ ಜನೋತ್ಸವವಾಗಿ ಮಾರ್ಪಾಟಾಗಿರುವುದು ಕಂಡು ಬಂತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!