ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವರಾತ್ರಿ ಜಾಗರಣ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ವಿ. ವೆಂಕಟೇಶ್ ಪ್ರೇರಣಾದಾಯಕ ನುಡಿಗಳು

ಪಾವಗಡ: “ಆಧುನಿಕತೆಯ ನಡುವೆ ನಮ್ಮ ಭಾರತೀಯ ಯೋಗ ಪರಂಪರೆ ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯಗಳು ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಶಾಸಕರಾದ ಹೆಚ್.ವಿ. ವೆಂಕಟೇಶ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಹೆಲ್ಪ್ ಸೊಸೈಟಿ ಮತ್ತು ಶಮೀ ವೃಕ್ಷ ಅಭಿವೃದ್ಧಿ ಸಮಿತಿಯ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಟ್ಟಣದ ಎಸ್.ಎಸ್.ಕೆ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ದುರ್ಗಾ ಯೋಗ ಮಹಾ ಶಿವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ, ಜಾಗರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಹಾ ಶಿವರಾತ್ರಿಯು ಕೇವಲ ಜಾಗರಣೆಯಲ್ಲ, ಅದು ಅಂತರಂಗದ ಶುದ್ಧೀಕರಣದ ಪರ್ವ. ಹೆಲ್ಪ್ ಸೊಸೈಟಿ ಮತ್ತು ಶಮೀ ವೃಕ್ಷ ಸಮಿತಿಯವರು ಸತತ ಏಳು ವರ್ಷಗಳಿಂದ ಯೋಗ ಮತ್ತು ಶಿವರಾತ್ರಿಯನ್ನು ಮೇಳೈಸಿ ಇಂತಹ ಅರ್ಥಪೂರ್ಣ ಕಾರ್ಯಕ್ರಮ ನಡೆಸುತ್ತಿರುವುದು ಸಂತಸದ ವಿಷಯ, ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುತ್ತವೆ, ನನಗೆ ದೇವರು ಶಿವ ಎಂದರೆ ಅತ್ಯಂತ ಪ್ರೀತಿ ಶಿವನ ಮಕ್ಕಳಾದ ಗಣೇಶ, ಸುಬ್ರಹ್ಮಣ್ಯ ರನ್ನು ಪೂಜಿಸುತ್ತೇನೆ ಪಾವಗಡ ತಾಲೂಕಿನಲ್ಲಿರುವ ನಾಗಲಮಡಿಕೆಯ ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವನ್ನು 34 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು, ಮಕ್ಕಳು ಚೆನ್ನಾಗಿ ಓದಿ ತಂದೆ ತಾಯಿಗಳಿಗೆ ಶಿಕ್ಷಕರಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ತಿಳಿಸಿದರು

ಮಕ್ಕಳ ನೃತ್ಯಕ್ಕೆ ಮನಸೋತ ಶಾಸಕರು ವಿಶೇಷ ಪ್ರದರ್ಶನ ನೀಡಿದ ತಂಡಗಳಿಗೆ ಪ್ರತಿ ತಂಡಕ್ಕೆ 5 ಸಾವಿರ ರೂ. ಬಹುಮಾನ ಘೋಷಿಸಿ, ವಿತರಿಸಿದರು.
ಪಟ್ಟಣದ ಸರ್ಕಾರಿ ಶಾಲೆಯ ಮಕ್ಕಳೆ ಹೆಚ್ಚು ಭಾಗವಹಿಸಿ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಮನರಂಜಿಸಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾದ ಮಾನಂ ವೆಂಕಟಸ್ವಾಮಿ ಮುಖಂಡರಾದ ವೀರಮ್ಮನಹಳ್ಳಿ ಪರಮೇಶ್ವರ್, ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಶಮೀ ವೃಕ್ಷ ಸಮಿತಿಯ ಕಾರ್ಯದರ್ಶಿ ಸತ್ಯ ಲೋಕೇಶ್, ಪಾವಗಡ ಪೊಲೀಸ್ ಠಾಣಾ ಸಿ.ಐ.ಸುರೇಶ್ ಅಮಲಿನೇನಿ ಮೂರ್ತಿ, ಗುಟ್ಟಹಳ್ಳಿ ಅಂಜಪ್ಪ, ನಿವೃತ್ತ ಶಿಕ್ಷಕರಾದ ನಾರಾಯಣಪ್ಪ, ಶಮಿ ವೃಕ್ಷ ಸಮಿತಿಯ ಉಪಾಧ್ಯಕ್ಷರಾದ ರಾಘವೇಂದ್ರ ಗುರಪ್ಪ, ಗೌರವ ಸಲಹೆಗಾರರಾದ ಪಿ. ಡಿ.ಓ.ಅಕ್ಕಲಪ್ಪ ಬೇಕರಿ ನಾಗರಾಜ್, ಸಂಧ್ಯಾ ಮಾನಂ ಶಶಿಕಿರಣ್, ಭವ್ಯ, ಶಿಕ್ಷಕರಾದ ಹನುಮಂತ ರಾಯಪ್ಪ,ನರೇಂದ್ರ ನಾಯಕ್,ಕಾಂತರಾಜು, ಅಂಗನವಾಡಿ ಸುಶೀಲಮ್ಮ, ಬ್ರೈಟ್ ಫ್ಯೂಚರ್ ಶ್ರೀಧರ್ ಗುಪ್ತ ಸುಮ ಶ್ರೀಧರ್ ಗುಪ್ತ ಮತ್ತು ಶಾಲಾ ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.

ವರದಿ ಪೃಥ್ವಿರಾಜು ಜಿ.ವಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!