ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ 2026 ಕ್ಕೆ ಮಹೇಶ್ ಬಾಬು ಸುರ್ವೇ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ತಂಡದ ನೃತ್ಯ ರೂಪಕ ಆಯ್ಕೆ

ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ
ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವವು 2026 ಫೆಬ್ರುವರಿ 28 ಮತ್ತು ಮಾಚ೯ 1ರಂದು ವೀರರಾಣಿ ಬೆಳವಡಿ ಮಲ್ಲಮ್ಮ ವೇದಿಕೇಯ ಉತ್ಸವದಲ್ಲಿ ಮಹೇಶ್ ಬಾಬು ಸುರ್ವೆ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡವು ನೃತ್ಯ ರೂಪಕ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು ಈ ನೃತ್ಯರೂಪಕದಲ್ಲಿ 12ಕ್ಕೂ ಹೆಚ್ಚು ಕಲಾವಿದರು ವೈವಿಧ್ಯಮಯ ವಿಶಿಷ್ಟವಾದ ಕಥೆಯನ್ನು ಹೇಳುವ ನೃತ್ಯರೂಪಕ ಪ್ರದರ್ಶನವನ್ನು ಉತ್ಸವದ ವೇದಿಕೆಯಲ್ಲಿ
ಮಾರ್ಚ್ 1ರಂದು ಸಂಜೆ 6.50 ರಿಂದ 7.00 ರವರೆಗೆ ಮಹೇಶ್ ಬಾಬು ಸುರ್ವೆ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.
ಮಹೇಶ್ ಬಾಬು ಸುರ್ವೆ ನೇತೃತ್ವ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಈಗಾಗಲೇ ಎರಡು ಬಾರಿ ಹಂಪಿ ಉತ್ಸವ ಎರಡು ಬಾರಿ ಕನಕಗಿರಿ ಉತ್ಸವ,
3 ಬಾರಿ ಆನೆಗುಂದಿ ಉತ್ಸವ,
ಎರಡು ಬಾರಿ ಮೈಸೂರು ದಸರಾ,
2010 ರಿಂದಲೂ ನಿರಂತರವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನೃತ್ಯ ಪ್ರದರ್ಶನ.
ಕಿತ್ತೂರು ಉತ್ಸವ ,
ಇಟಗಿ ಉತ್ಸವ,
ಗೋವಾ ಕನ್ನಡಿಗರ ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ.
ಇಲಾಖೆಯ ಒನಕೆ ಓಬವ್ವನ ಜಯಂತಿ.
ಕೊಪ್ಪಳ ಜಿಲ್ಲಾ ಉತ್ಸವ.
ಮಂತ್ರಾಲಯದಲ್ಲಿ ಕನ್ನಡಿಗರ ಸಮ್ಮೇಳನ.
ಕಲ್ಯಾಣ ಕರ್ನಾಟಕ ಉತ್ಸವ.
ಕಾಶಿ ಕನ್ನಡ ಸಮ್ಮೇಳನ. ರಾಯಚೂರು ಜಿಲ್ಲಾ ಉತ್ಸವ
ಅಲ್ಲದೆ ಕೊಪ್ಪಳ ಜಿಲ್ಲಾ ಮಹೋತ್ಸವ.
ಇನ್ನೂ ಮುಂತಾದ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ಕಳೆದ ಎರಡು ದಶಕಗಳಿಂದಲೂ ನೀಡುತ್ತಾ ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಗೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಬೇಕಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೊಪ್ಪಳ ಜಿಲ್ಲೆಯನ್ನು ನಿರಂತರವಾಗಿ ಅನೇಕ ಉತ್ಸವಗಳಲ್ಲಿ ಪ್ರತಿನಿಧಿಸುತ್ತಾ ಬಂದಿರುವ ಮಹೇಶ್ ಬಾಬು ಸುರ್ವೆ ಅವರ
ಸಾಂಸ್ಕೃತಿಕ ಲೋಕದ ಪಯಣದ ಹೆಜ್ಜೆಯಲ್ಲಿ ಇದು ಒಂದು ಎಂಬ ಹೆಗ್ಗಳಿಕೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!