ಅಮ್ಮ ಎಂದರೆ ಮೌನದ ಪ್ರಾರ್ಥನೆ
ನಿದ್ದೆಯ ರಾತ್ರಿಗಳಲ್ಲಿಹೆ ನಿನ್ನ ಕಾವಲು
ಬೇಸರದ ದಿನದಲ್ಲು ಆಸರೆ ನಿನ್ನ ಒಲವು
ಅಮ್ಮ ನೀನೆ ನನ್ನ ಮೊದಲ ಭಜನೆ
ನೀನೆ ಅಲ್ಲವೇ ಮಹಾನ್ ತ್ಯಾಗದೇವತೆ
ನೋವ ನುಂಗಿ ಕೊಟ್ಟ ಅಭಯಹಸ್ತ
ಅಡುಗೆ ಮನೆಯಲ್ಲೇ ಬದುಕಿನ ಸೂತ್ರ
ಬಿಸಿಲು ಮಳೆಗೂ ಸರಿಸಮಾನ ದೇವತೆ
ನೀನೆ ನನ್ನ ಬದುಕಿಗೆ ಮೊದಲ ಗುರು
ಪಾಠಕ್ಕಿಂತ ಮೊದಲು ಕಲಿಸಿದೆ ಅಕ್ಕರೆ
ನಿನ್ನ ನೆರಳಲ್ಲಿ ನಾನು ಎಂದಿಗೂ ಮಗು
ಅಮ್ಮ ನಿನ್ನ ಉಸಿರೇ ನನಗೆ ಸ್ವರ
ಕಷ್ಟ ಬಂದಾಗ ಸಿಗುವ ಅಭಯವ
ಪ್ರತಿ ಉಸಿರಲ್ಲೂ ನಿನ್ನ ಆಶೀರ್ವಾದವ
ನಿ ಇಲ್ಲದ ಮನೆ ಶೂನ್ಯ ದೇವಾಲಯ
ಮುತ್ತಿನಂಥ ಮಾತು ಮೌನದ ಭಾವವ
ನೋವನ್ನು ನುಂಗಿ ನಕ್ಕ ನಿನ್ನದನಿ
ನನ್ನ ತಪ್ಪಿಗೆ ನೀ ಕೊಟ್ಟ ಕ್ಷಮಾಛಂದ
ನಿನಗೆ ಈ ಜೀವದ ಹಾಡು ಅರ್ಪಣೆ
ಎಂದಿಗೂ ತೀರಿಸಲಾರೆನು ನಿನ್ನ ಋಣ
- ಶಿವಸುತೆ ಡಾ ವೇದಾವತಿ ಬಿ ರಾವ್
ರಾಮಕೃಷ್ಣಪುರ ಚಂದಾಪುರ, ಬೆಂಗಳೂರು.





















3 Responses
ತುಂಬಾ ತುಂಬಾ ಧನ್ಯವಾದಗಳು ಪ್ರೀತುನ್ ಪುವಣ್ಣ ಮಗ ಹಾಗೂ ಬಸವರಾಜ್ ಸಹೋದರ ಅವರಿಗೆ ನನ್ನ ಅಮ್ಮನಿಗಾಗಿ ಕವನವನ್ನು ನಿಮ್ಮ ಪೇಪರ್ ನಲ್ಲಿ ಹಾಕಿರುವುದಕ್ಕೆ ಹೃದಯದಿಂದ ತುಂಬಾ ಧನ್ಯವಾದಗಳು ನಿಮ್ಮ ಪೇಪರ್ ಇನ್ನು ಹೆಚ್ಚು ಎಲ್ಲಾ ಕಡೆ ಪ್ರಸಾರ ಆಗಲಿ ಈಗಾಗಲೇ ಆಗಿದೆ ಇನ್ನು ಜಾಸ್ತಿ ಆಗಲಿ ಎಶಸ್ವಿಯಾಗಲಿ ನಿಮಗೆ
ಇದು ನಮ್ಮ ಕರ್ತವ್ಯ ಸಹೋದರಿ
ನಿಮ್ಮ ಪ್ರೀತಿಗೆ ಅಭಾರಿ ಎಂದಿಗೂ ಸಹೋದರ ಒಳ್ಳೆಯದಾಗಲಿ ನಿಮಗೆ