ಬಳ್ಳಾರಿ / ಕಂಪ್ಲಿ : ಪಟ್ಟಣದ 10 ನೇವಾರ್ಡಿನ ಬಸವ ಶ್ರೀ ನಿಲಯದಲ್ಲಿ ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯರಾದಎ.ಸಿ ದಾನಪ್ಪ ರವರ 61ನೇವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಪೆನ್ನು ಪೆನ್ಸಿಲ್ ವಿತರಿಸಿದರು.
ನಂತರ ರಾಜ್ಯ ದಿಶಾ ಸಮಿತಿ ಸದಸ್ಯರಾದ ಎ.ಸಿ. ದಾನಪ್ಪ ಮಾತನಾಡಿ ಗುಣಮಟ್ಟದ ಶಿಕ್ಷಣ ನೀಡಲು ಪೋಷಕರು ಜಾಗೃತಿ ವಹಿಸಬೇಕು ತಂತ್ರಜ್ಞಾನ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು ಕಲಿಕಾ ಹಂತದಲ್ಲಿ ಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ಅಧ್ಯತೆ ನೀಡಬೇಕು ಸಮಾಜದಲ್ಲಿ ನಿರಂತರವಾಗಿ ಸೇವೆ ಮಾಡುವುದರ ಜೊತೆಗೆ ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲಿ ಪರಹಾರ ಒದಗಿಸಿದ್ದವೆ ಸರ್ಕಾರ ಇನ್ನು ಹೆಚ್ಚಿನ ಉನ್ನತ ಹುದ್ದೆ ನೀಡಿದರೆ ಸರ್ಕಾರದ ಸೌಲಭ್ಯಗಳು ಗ್ರಾಮೀಣ ಭಾಗದ ಬಡವರಿಗೆ ತಲುಪಿಸಲು ಶ್ರಮಿಸುತ್ತೇವೆ ಎಂದರು. ರಾಜ್ಯ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ಪುರಸೃತರಾದ ಎ.ಸಿ ಅಂಡಿ ಹುಲಿಗೆಮ್ಮ ದಾನಪ್ಪ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸದಸ್ಯರಾದ ಮೋಹನ್ ಕುಮಾರ ದಾನಪ್ಪ ಬೌದ್ದ ಸಮಾಜದ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಮುಖಂಡರಾದ ಅಂಜಿನಪ್ಪ ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















