ಬಳ್ಳಾರಿ / ಕಂಪ್ಲಿ : ಸತ್ಯನಿಷ್ಠೆ ಹಾಗೂ ಮಾನವೀಯತೆ ಬೆಳೆಸುವ ಪವಿತ್ರ ರಂಜಾನ್ ಆಚರಣೆಯಾಗಿದೆ ಎಂದು ಮುಸ್ಲಿಂ ಸಮಾಜದ ಹಿರಿಯ ಮುಖಂಡ ಕರಡಿ ವಲಿಸಾಬ್ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹಿಂದೂ ಮುಸ್ಲಿಂ ಏಕತೆ ಚಿರಾಯುವಾಗಲಿ, ಸೌಹಾರ್ದ ರಂಜಾನ್ ಮತ್ತು ಯುಗಾದಿ ಹಬ್ಬವನ್ನು ಜೊತೆಯಾಗಿ ಆಚರಿಸುತ್ತಿರುವುದು ಖುಷಿ ತಂದಿದೆ.
ರಂಜಾನ್ ಮಾಸಾಚರಣೆಯಲ್ಲಿ ಉಪವಾಸ ಕೇವಲ ಆಹಾರ ತ್ಯಾಗವಲ್ಲ, ಅದು ಆತ್ಮನಿಯಂತ್ರಣ, ಸತ್ಯನಿಷ್ಠೆ ಹಾಗೂ ಮಾನವೀಯತೆ ಬೆಳೆಸುವ ಪವಿತ್ರ ಆಚರಣೆಯಾಗಿದೆ. ರಂಜಾನ್ ತಿಂಗಳು ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಪವಿತ್ರವಾಗಿದ್ದು, ಉಪವಾಸದ ಮೂಲಕ ಮನಸ್ಸು ಹಾಗೂ ದೇಹ ಪರಿಶುದ್ಧಗೊಳಿಸುವುದು ಶ್ಲಾಘನೀಯ ಕಾರ್ಯವಾಗಿದೆ. ಉಪವಾಸದಿಂದ ಮಾನಸಿಕ ನಿಯಂತ್ರಣ ಹಾಗೂ ದೈಹಿಕ ಆರೋಗ್ಯವೂ ಉತ್ತಮವಾಗುತ್ತದೆ. ರಂಜಾನ್ ಪ್ರಯುಕ್ತ ಮೂವತ್ತು ದಿನಗಳ ಉಪವಾಸ ಕೈಗೊಂಡು ಕೆಡುಕಿನಿಂದ ಪರಿವರ್ತನೆ ಹೊಂದಿ ಒಳಿತನ್ನು ಬದುಕಿಗೆ ಅಳವಡಿಸಿಕೊಂಡಿದ್ದೇವೆ. ಶಾಂತಿ, ಪ್ರೀತಿ, ಸಹೋದರತ್ವದಿಂದ ಸರ್ವ ಸಮುದಾಯವನ್ನು ಗೌರವಿಸಿ ಸಹಬಾಳ್ವೆ ನಡೆಸೋಣ’ ಎಂದರು.
ಕಂಪ್ಲಿ ತಾಲೂಕಿನ ಸಮಸ್ತ ಜನತೆಗೆ ಹಾಗೂ ವಿವಿಧ ಇಲಾಖಾ ಅಧಿಕಾರಿಗಳಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.
ವರದಿ : ಜಿಲಾನಸಾಬ್ ಬಡಿಗೇರ್




















