ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸುಗೂರ ಎನ್ ಗ್ರಾಮದ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ನೂತನ ದೇವಸ್ಥಾನದ ಭವ್ಯ ಕಟ್ಟಡದ ಲೋಕಾರ್ಪಣೆಗೆ ಸಿದ್ದರಾಮಯ್ಯ ಆಗಮನ

ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಸಕಲ ಸಿದ್ದತೆ.

ಸುಗೂರ ಶ್ರೀ ಮಠಕ್ಕೆ ತಹಶೀಲ್ದಾರರ ಭೇಟಿ.


ಚಿತ್ತಾಪುರ: ತಾಲೂಕು ಸುಗೂರ ಎನ್ ಗ್ರಾಮದ ಪವಾಡ ಪುರುಷ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ , ಸ್ವಯಂ ಸಿದ್ಧ ಶರಣ ಶ್ರೀ ಭೋಜಲಿಂಗೇಶ್ವರ ವಿನೂತನವಾಗಿ ನಿರ್ಮಾಣಗೊಂಡ ದೇವಸ್ಥಾನದ ಕಟ್ಟಡ ಲೋಕಾರ್ಪಣೆ ಮತ್ತು ನೂತನ ಕಲ್ಯಾಣ ಮಂಟಪ ಮತ್ತು ಬೆಳ್ಳಿ ರಥೋತ್ಸವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ರಾಮಯ್ಯನವರು ಇದೇ ಏಪ್ರಿಲ್ ೧೧ ರಂದು ಶ್ರೀಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಸಿದ್ಧತೆಗಳ ಕುರಿತು ಮಾನ್ಯ ತಹಶೀಲ್ದಾರರು ಶ್ರೀ ನಾಗಯ್ಯ ಹಿರೇಮಠ ಸ್ವಾಮಿಗಳು, ಶ್ರೀ ಭೋಜಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಜೊತೆಗೆ ಸಂಭಾಷಣೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದರು.
ಈ ಭೇಟಿಯ ಪ್ರಮುಖ ಅಂಶಗಳು ಇಲ್ಲಿವೆ:
ಸಿ.ಎಂ. ಅವರ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ, ತಹಶೀಲ್ದಾರರು ಶ್ರೀಮಠದ ಆವರಣದಲ್ಲಿ ಭದ್ರತೆ, ವಾಹನ ನಿಲುಗಡೆ ಮತ್ತು ಕಾರ್ಯಕ್ರಮದ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಅಧಿಕಾರಿಗಳಿಗೆ ಸೂಚನೆ: ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಮತ್ತು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಹಶೀಲ್ದಾರರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವ್ಯವಸ್ಥೆಗಳ ಅವಲೋಕನ: ವೇದಿಕೆ ಸಿದ್ಧತೆ, ಅನೇಕ ರಾಜಕೀಯ ಗಣ್ಯರು.ಮತ್ತು ಈ ನಾಡಿನ ಅನೇಕ ಮಠಾಧೀಶರ ಆಗಮನದ ದಾರಿ ಮತ್ತು ಮಠದ ಆಡಳಿತ ಮಂಡಳಿಯೊಂದಿಗೆ ಸಮನ್ವಯದ ಕುರಿತು ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಹಜರತ್ (ತಲಾಟಿ) ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಮಲಿಂಗಯ್ಯ ಸ್ವಾಮಿ,ಮಹೇಶ್ ಪಾಟೀಲ ಸುಗೂರ ಎನ್, ಶರಣಗೌಡ ಬೆನಕನಹಳ್ಳಿ, ಭೀಮರೆಡ್ಡಿ ಗೌಡ ಕುರಾಳ. ವಿಶ್ವನಾಥ ರೆಡ್ಡಿ ಪಾಟೀಲ ಸುಗೂರ ಎನ್. ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ , ಶರಣಗೌಡ ವಕೀಲರು, ಈರಣ್ಣ ಬಲಕಲ್ ಎಲ್ ಐ.ಸಿ. ಮಹಿಪಾಲ್ ರೆಡ್ಡಿ ಕರಣಗಿ. ಸಿದ್ರಾಮರೆಡ್ಡಿಗೌಡ ಬೆನಕನಹಳ್ಳಿ, ಸುರೇಶ್ ಕೊಟಿಮನಿ ಯಾದಗಿರ, ಮಲ್ಲಪ್ಪ ಅರಿಕೇರಿ ಮಾಸ್ತರ. ಶಂಕರಗೌಡ ಮಾಸ್ತರ ಲಿಂಗಸುಗೂರ. ಡಾ.ಸುರೇಶ್ ಮಾಘನೂರ.ಮಹಾದೇವಪ್ಪ ಸಾಹುಕಾರ್ ಕುರಕುಂದಿ. ಬಸ್ಸುಗೌಡ ಮಾಲಿ ಪಾಟೀಲ್. ಸಿದ್ದುಗೌಡ ಕುರಾಳ,ಬಾಬು ಪಾಟೀಲ. ಬಸವರಾಜ ಹಡಪದ ಸುಗೂರ ಎನ್, ರಾಜೇಂದ್ರ ನಾಯ್ಕೊಡಿ,ಪ್ರಭು ಹೂಗಾರ. ಸಿದ್ದು ಸಾಹುಕಾರ್ ಕುಂಬಾರ.ಯಮನಪ್ಪ ತಳವಾರ. ಸಾಬ್ಬಣ್ಣ ಬೇನಿಗಿಡ , ಸೋಮು ಮಂಡ್ನಾಳ ಸೇರಿದಂತೆ ಸುಗೂರ ಎನ್ ಗ್ರಾಮಸ್ಥರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ಎಂದು ಶ್ರೀಮಠದ ಸದ್ಬಕ್ತರಾದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಈ ಪತ್ರಿಕೆಯಲ್ಲಿ ತಿಳಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!