ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಹಿಂಸೆ ಮತ್ತು ಶಾಂತಿಯ ಸಂದೇಶಗಳ ಪಾಲನೆ ಅತ್ಯಂತ ಅಗತ್ಯ : ಜವೇರಿಲಾಲ್ ಬಾಗ್ರೇಚಾ

ಬಳ್ಳಾರಿ / ಕಂಪ್ಲಿ : ಭಗವಾನ್ ಮಹಾವೀರರ ಅಹಿಂಸೆ ಮತ್ತು ಶಾಂತಿಯ ಸಂದೇಶಗಳ ಪಾಲನೆ ಪ್ರಸ್ತುತ ದಿನಮಾನಗಳಲ್ಲಿ ಅತ್ಯಂತ ಅಗತ್ಯವಾಗಿವೆ ಎಂದು ಕಂಪ್ಲಿ ಶ್ರೀ ಮುನಿಸುವ್ರತ್ ಸ್ವಾಮಿ ಶ್ವೇತಾಂಬರ ಸಂಘದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ ತಿಳಿಸಿದರು. ಪಟ್ಟಣದ ಶ್ರೀಮುನಿಸ್ರುವತ್ ಸ್ವಾಮಿ ಜೈನ್ ಮಂದಿರದಲ್ಲಿ ಭಗವಾನ್ ಮಹಾವೀರರ ಜಯಂತಿ ಆಚರಣೆ ಅಂಗವಾಗಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಮಹಾವೀರರ ಆದರ್ಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ ಎಂದರು. ಜೈನ್ ಸಮಾಜದ ಉಪಾಧ್ಯಕ್ಷ ಶಾಂತಿ ಲಾಲ್ ಬಾಲಾರ್ ಹಾಗೂ ಶಾಂತಿ ಲಾಲ್ ಸಿಂಘ್ವಿ ಮಾತನಾಡಿ, ಭಗವಾನ್ ಮಹಾವೀರರು ಜಗತ್ತಿಗೇ ಸಾರಿದ ಅಹಿಂಸೆ,ಶಾAತಿ, ತ್ಯಾಗದ ತತ್ವಗಳು ಪ್ರತಿಯೊಬ್ಬರ ಜೀವನಕ್ಕೂ ದಾರಿದೀಪವಾಗಿವೆ. ಸತ್ಯವೇ ಮೋಕ್ಷಕ್ಕೆ ದಾರಿ, ಅಹಿಂಸೆಯೇ ಧರ್ಮದ ಮಾರ್ಗ, ಭಗವಾನ್ ಮಹಾವೀರರ ಬೋಧನೆಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಭಗವಾನ್ ಮಹಾವೀರರ ಪಲ್ಲಕ್ಕಿ ಉತ್ಸವ ಮತ್ತು ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ವಿವಿದ ಜಾನಪದ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಮೆರವಣಿಗೆಯಲ್ಲಿ ಜೈನ್ ಸಮಾಜದ ಮುಖಂಡರಾದ ಶಾಂತಿಲಾಲ್ ಸಿಂಘ್ವಿ, ಮನೋಹರ್ ಬಾಗ್ರೇಚಾ, ರಾಕೇಶ್ ಬಾಗ್ರೇಚಾ, ಫತೇಕುಮಾರ್ ಭಾಫಣಾ, ಶಾಂತಿಲಾಲ್ ಬಾಲಾರ್, ಆಮೃತ್ ಲಾಲ್ ದಂತೇವಾಡಿಯಾ, ರಾಜು ಜೈನ್, ಜೈನ್ ಸಮಾಜದ ಯುವಕ, ಯುವತಿಯರ ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!