ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಟ್ಟುಕಥೆ – ಮಕ್ಕಳ ಕಥಾ ಸ್ಪರ್ಧೆ

ಕಳೆದ ವರ್ಷದಂತೆ ಈ ವರ್ಷವೂ ಬೇಸಿಗೆ ರಜಾದಿನಗಳಲ್ಲಿ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ‘ಕಟ್ಟುಕಥೆ’ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದೇವೆ.

ಮಕ್ಕಳ ಅಕ್ಷರ ಪ್ರೀತಿಗೆ ವೇದಿಕೆ ಕಲ್ಪಿಸುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ. ಮಕ್ಕಳಿಗೆ ಹೇಳಲು ಬಹಳಷ್ಟು ಅನುಭವಗಳಿರುತ್ತವೆ ಶಾಲೆಯ ದಿನಗಳು, ಸ್ನೇಹಿತರ ಜೊತೆಗಿನ ಆಟ-ಪಾಠ, ಮೊದಲ ಸಿನಿಮಾ ನೋಡಿದ ಸಂಭ್ರಮ, ಕೆರೆ-ಗದ್ದೆಗಳಲ್ಲಿ ಓಡಾಡಿದ ನೆನಪುಗಳು, ಅಪ್ಪ-ಅಮ್ಮನ ಮುದ್ದು, ಊರಿನ ಯಕ್ಷಗಾನ, ರಜಾದಿನಗಳಲ್ಲಿ ಕ್ರಿಕೆಟ್ ಆಟ, ಸ್ನೇಹಿತರ ಜೊತೆಗಿನ ಹುಟ್ಟುಹಬ್ಬದ ಸಂಭ್ರಮ… ಇಂತಹ ಸಿಹಿ ನೆನಪುಗಳನ್ನು ಕಥೆಯಾಗಿ ರೂಪಿಸಿ ಕಳುಹಿಸಲು ಆಹ್ವಾನಿಸುತ್ತಿದ್ದೇವೆ.

“ಕಥೆಯೊಂದನ್ನು ಕಟ್ಟೋಣ,
ನೆನಪುಗಳ ಹೆಕ್ಕೋಣ,
ಅಕ್ಷರಗಳ ಪುಂಜ ಸೃಷ್ಟಿಸೋಣ!”

ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಎಂಬ ವಿಭಜನೆ ಇಲ್ಲ. ಆಯ್ಕೆಯಾದ ಮೂರು ಉತ್ತಮ ಕಥೆಗಳಿಗೆ ಸಮಾನ ಗೌರವ ನೀಡಲಾಗುತ್ತದೆ. ಭಾಗವಹಿಸಲು ಆಸಕ್ತರು ತಮ್ಮ ಸ್ವರಚಿತ ಕಥೆಯನ್ನು ವಾಟ್ಸಾಪ್ ಮೂಲಕ 6360322392 ಸಂಖ್ಯೆಗೆ ಕಳುಹಿಸಬಹುದು.

ನಿಬಂಧನೆಗಳು:

1.ಕಥೆ 300 ಪದಗಳ ಮಿತಿಯಲ್ಲಿರಬೇಕು.
2.ಕಥೆ ಸ್ವರಚಿತವಾಗಿದ್ದು ಕೈಬರಹದಲ್ಲಿರಬೇಕು.
3.ಕೈಬರಹದಲ್ಲಿ ಬರೆದ ಕಥೆಯನ್ನು ಸ್ಪಷ್ಟವಾಗಿ ಫೋಟೋ ತೆಗೆದು ವಾಟ್ಸಾಪ್ ಮೂಲಕ ಕಳುಹಿಸಬೇಕು.
4.ಯಾವುದೇ ವಿಷಯವನ್ನು ಆಯ್ಕೆ ಮಾಡಬಹುದು.
5.ಕಥೆ ಎಲ್ಲಿಯೂ ಪ್ರಕಟವಾಗಿರಬಾರದು.
6.ಅಕ್ಷರ ದೋಷಗಳಿರುವ ಬರಹಗಳನ್ನು ಪರಿಗಣಿಸಲಾಗುವುದಿಲ್ಲ.
7.ಸ್ಪರ್ಧಾರ್ಥಿಗಳ ವಯಸ್ಸು 18 ವರ್ಷ ಮೀರಿರಬಾರದು.
8.ಕಥೆಯ ಕೊನೆಯಲ್ಲಿ ಹಸ್ತಾಕ್ಷರ, ಪೂರ್ಣ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
9.ಕಥೆ ಕಳುಹಿಸುವ ಕೊನೆಯ ದಿನಾಂಕ: 20-05-2026
10.ನಿಬಂಧನೆಗಳನ್ನು ಪಾಲಿಸದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.
11.ಕಥೆಯನ್ನು ಸ್ಪರ್ಧಾರ್ಥಿಯ ಅಥವಾ ಪೋಷಕರ ಮೊಬೈಲ್‌ನಿಂದ ಕಳುಹಿಸಬಹುದು.

ಇನ್ನೇಕೆ ತಡ?
ಇಂದೇ ಪೆನ್ನು-ಕಾಗದ ಹಿಡಿದು ನಿಮ್ಮ ಅನುಭವವನ್ನು ಕಥೆಯಾಗಿ ರೂಪಿಸಿ ಕಳುಹಿಸಿ! ನಿಮ್ಮ ಕಥೆಯನ್ನು ನಾವು ಓದುವಂತಾಗಲಿ.
ವಾಟ್ಸಾಪ್: 6360322392.

ಶಿವಪ್ರಸಾದ್ ಮಣಿಯೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!