ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ವಯಂ ಜನಗಣತಿ ಆರಂಭ ತಹಶೀಲ್ದಾರ್ ಮಂಜುನಾಥ್ ರವರಿಂದ ಮಾಹಿತಿ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತಾಲೂಕು ಕಚೇರಿಯಲ್ಲಿ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ರವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆ ಜನಗಣತಿ ಕಾರ್ಯವನ್ನು ಸುಗಮವಾಗಿ ನಡೆಸಲು ಸರ್ಕಾರವು ಸ್ವಯಂ ಜನಗಣತಿಯನ್ನು ಮಾಡಲು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು ನಾಗರಿಕರು ತಮ್ಮ ಮಾಹಿತಿಯನ್ನು ತಾವುಗಳು ಖುದ್ದಾಗಿ ಆನ್ಲೈನ್ ಮುಖಾಂತರ ಸಲ್ಲಿಸುವ ವ್ಯವಸ್ಥೆಯು ಇದ್ದು ಸ್ವಯಂ ಜನಗಣತಿ ವ್ಯವಸ್ಥೆ ಜನರಿಗೆ ಸುಲಭವಾಗಿದ್ದು ತಮ್ಮ ಮನೆ ಕುಟುಂಬ ಸದಸ್ಯರ ವಿವರಗಳು ಶಿಕ್ಷಣ ಉದ್ಯೋಗ ವಲಸೆ ಅನೇಕ ಮಾಹಿತಿಗಳನ್ನು ತಾವೇ ನಿಖರವಾಗಿ ನೀಡುವುದು ಅತ್ಯಂತ ಉತ್ತಮವಾದ ತಂತ್ರಜ್ಞಾನ ವಾಗಿದ್ದು ನಿಖರ ಮಾಹಿತಿಯು ಜನರಿಗೆ ನೀಡಲು ಸರ್ಕಾರವು ಈ ತಂತ್ರಜ್ಞಾನವನ್ನು ಬಳಸಿದೆ
ಇದೇ ಸಮಯದಲ್ಲಿ ಜನರು ಸರಿಯಾದ ಮಾಹಿತಿಯನ್ನು ನೀಡುವುದು ಅತ್ಯಂತ ಮುಖ್ಯವಾಗಿ ಯಾವುದೇ ತಪ್ಪು ಮಾಹಿತಿ ಅಥವಾ ಅಪೂರ್ಣ ಮಾಹಿತಿಯನ್ನು ನೀಡುವುದರಿಂದ ಮುಂದೆ ಸರ್ಕಾರದ ಯೋಜನೆಗಳಿಗೆ ತೊಂದರೆಯಾಗಬಹುದು ಸರ್ಕಾರವು ಜನಗಣತಿ ಮಾಹಿತಿಯನ್ನು ಆದರಿಸಿ ಅಭಿವೃದ್ಧಿ ಕಾರ್ಯಗಳನ್ನು ರೂಪಿಸುತ್ತದೆ ಆದ್ದರಿಂದ ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿಯಿಂದ ತಮ್ಮ ಮಾಹಿತಿಯನ್ನು
ದಾಖಲಿಸಬೇಕು ಎಂದು ತಹಶೀಲ್ದಾರ್ ಮಂಜುನಾಥ್ ಪತ್ರಿಕಾ ಮಾಧ್ಯಮದೊಂದಿಗೆ ಎಲ್ಲರಿಗೂ ಮಾಹಿತಿ ನೀಡಿದರು.
ಸ್ವಯಂ ಜಯನಗಣತಿ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು ಎಲ್ಲರೂ ಸಹಕರಿಸಿ ನಿಖರ ಮಾಹಿತಿ ನೀಡಿ ಸರ್ಕಾರದ ಈ ಯೋಜನೆಗೆ ಮತ್ತು ಸರ್ಕಾರದಿಂದ ಬರುವ ಯೋಜನೆಯ ಕಾರ್ಯಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಆದ್ದರಿಂದ ತಾಲೂಕಿನ ಎಲ್ಲಾ ಜನರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಾಶಿಲ್ದಾರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಸ್ಥರಾದ ಉಮೇಶ್ ರವರು ಎಲ್ಲಾ ವಾರ್ಡ್ ಗಳಲ್ಲಿ ಜನಗಣತಿಗೆ ಬರುವ ಪ್ರತಿನಿಧಿಗಳಿಗೆ ಖಚಿತ ಮಾಹಿತಿ ನೀಡಿ ಸಹಕರಿಸಬೇಕಾಗಿ ಮತ್ತು ಕೇವಲ ಮೂರೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ನೀವೇ ಸ್ವಯಂ ಗಣತಿ ಮಾಡಿಕೊಳ್ಳುವ ರೀತಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ವಿವರವಾಗಿ ತಿಳಿಸಿದರು.

ವರದಿ ಪ್ರಸನ್ನ ಕುಮಾರ್ ಎಸ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!