ಬಳ್ಳಾರಿ / ಕಂಪ್ಲಿ : ಪಟ್ಟಣದ ಹೇರೂರು ವಿರುಪಣ್ಣ ತಾತನ ಮಠದಲ್ಲಿ ನೀರು ಬಳಕೆದಾರರ ಸಹಕಾರ (ವಿಎನ್ಸಿ) ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಎ.ತಿಮ್ಮಪ್ಪ ಅವಿರೋಧ ಆಯ್ಕೆಗೊಂಡರು. ತದನಂತರ ನೂತನ ಅಧ್ಯಕ್ಷ ತಿಮ್ಮಪ್ಪ ಮಾತನಾಡಿ, ನೀರು ಬಳಕೆದಾರರ ಸಂಘಕ್ಕೆ ಅಧ್ಯಕ್ಷರನ್ನಾಗಿ ನಮ್ಮನ್ನು ಆಯ್ಕೆ ಮಾಡಿದ್ದು, ಸಂಘದ ಅಭಿವೃದ್ಧಿ ಜೊತೆಗೆ ರೈತರಿಗೆ ಅನುಕೂಲಚಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು. ನಂತರ ನೂತನ ಅಧ್ಯಕ್ಷಗೆ ಸನ್ಮಾನಿಸಿ ಗೌರವಿಸಿದರು. ಚುನಾವಣಾಧಿಕಾರಿ ಬಿ.ಎರ್ರಿಸ್ವಾಮಿ, ಸಂಘದ ಕಾರ್ಯದರ್ಶಿ ಎಂ.ಅಶೋಕ, ಉಪಾಧ್ಯಕ್ಷ ಟಿ.ಗಂಗಣ್ಣ, ನಿರ್ದೇಶಕರಾದ ಕಟ್ಟೆ ಮಾರೆಪ್ಪ, ಬಿ.ವೀರೇಶ, ಎಂ.ಹೊನ್ನೂರವಲಿ, ಎ.ಎಂ.ಪಕ್ಕೀರಪ್ಪ, ನಾಗರಾಜ ಶೆರೆಗಾರ, ಎಂ.ನವೀನ್, ಯು.ಜಂಬಿಕಾ, ಎಂ.ಸರಸ್ವತೆಮ್ಮ, ಶಾಂತಮ್ಮ, ನಾಯಕರ ಹುಲಿಗೆಮ್ಮೆ, ಪ್ರಮುಖರಾದ ಎಲಿಗಾರ ನಾಗರಾಜ, ಕೋಟೆಮೇಗಳ ನಾಗರಾಜ, ಕೊಟ್ಟೂರು ರಮೇಶ, ಅಳ್ಳಿ ನಾಗಪ್ಪ, ಕೆ.ಮನೋಹರ, ಕಂಬತ್ ರಮೇಶ್ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















