ಬೀದರ್/ಬಸವಕಲ್ಯಾಣ : ಕರ್ನಾಟಕ ರಾಜ್ಯದಲ್ಲಿ ಸರ್ಕಾರವು ಹಲವಾರು ನಗರ ಯೋಜನಾ ಪ್ರಾಧಿಕಾರಗಳು ಸ್ಥಾಪಿಸಿದ್ದು ಅದರಲ್ಲಿ ಬಹಳ ಹಳೆಯದಾದ ಬಸವಕಲ್ಯಾಣ ನಗರ ಯೋಜನಾ ಪ್ರಾಧಿಕಾರದ ಕುರ್ಚಿ ಸುಮಾರು ಮೂರು ವರ್ಷದಿಂದ ಖಾಲಿ ಇದ್ದು ಜನರ ಕೆಲಸ ಕಾರ್ಯಗಳು ಆಗುತ್ತಿಲ್ಲ , ಈ ಮೂರು ವರ್ಷಗಳ ಸಂಕಷ್ಟಕ್ಕೆ ಮುಕ್ತಿ ಸಿಗುವುದು ಯಾವಾಗ ? ಎಂದು ಜನರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗೊಣಗಾಡುತ್ತಿದ್ದಾರೆ ಬೇರೆ ತಾಲೂಕಗಳಲ್ಲಿ ನಗರ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ನಗರ ಅಭಿವೃದ್ಧಿ ಇಲಾಖೆಯ ದಿನಾಂಕ 7/4/2026 ರಂದು ಸಂಖ್ಯೆ ಯ ನ ಅ ಇ 54 ಗು ಅ ಪ್ರಾ 2026 ಇ ಆದೇಶ ಮಾಡಿರುತ್ತಾರೆ ಬಸವಕಲ್ಯಾಣ ಪ್ರಾಧಿಕಾರಕ್ಕೆ ಅಧ್ಯಕ್ಷ ಯಾರಾಗುತ್ತಾರೆ ಎಂಬುವುದು ಚರ್ಚೆಗಿಡಾಗಿದೆ ಸಾರ್ವಜನಿಕರಿಗೆ ಅನುಕೂಲಕರವಾಗಿ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಶೀಘ್ರವೇ ನೇಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಧನರಾಜ ಡಿ ರಾಜೋಳೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಲು ಹಲವಾರು ಕಾಂಗ್ರೆಸ್ ಮುಖಂಡರು ಲಾಭಿ ಮಾಡುತ್ತಿದ್ದಾರೆ ಅದರಲ್ಲಿ ಪ್ರಮುಖ ವಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ್ ಸ್ವಾಮಿ ಹಾಗೂ ಇನ್ನೋರ್ವರು ಕಾಂಗ್ರೇಸ ಮುಖಂಡರಾದ ದಲಿತ ಸಮಾಜದ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಅರ್ಜುನ ಕನಕ ಇವರಿಬ್ಬರಲ್ಲಿ ಒಬ್ಬರಿಗೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾಳೆ ಬೀದರ ನಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಘೋಷಣೆ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ಧನರಾಜ್ ಡಿ ರಾಜೋಳೆ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ




















