ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಥಣಿಯ ವಿದ್ಯಾರ್ಥಿ ಶಿವಾನಂದ ಭರ್ಜರಿ ಸಾಧನೆ – 595/600 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ ಸ್ಥಾನ

ಬೆಳಗಾವಿ:ಅಥಣಿಯ ಮಣ್ಣಿಗೆ ಮತ್ತೊಂದು ಹೆಮ್ಮೆಯ ಕ್ಷಣ…

ಒಂದು ಸಾಮಾನ್ಯ ಮನೆಯ ಕನಸು ಇಂದು ಅಸಾಮಾನ್ಯ ಸಾಧನೆಯಾಗಿ ಅರಳಿದೆ.

J.A. PU ಕಾಲೇಜಿನ ದ್ವಿತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ಶಿವಾನಂದ ಮುರಾಗೆಪ್ಪಾ ಬುರ್ಲಟ್ಟಿ… ಈ ಹೆಸರನ್ನು ಈಗ ಕೇವಲ ಒಂದು ಹೆಸರು ಅಂತ ಹೇಳೋದು ಕಷ್ಟ… ಇದು ಒಂದು ಪ್ರೇರಣೆ… ಒಂದು ಸಾಧನೆಯ ಪ್ರತೀಕ…

ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 595 ಅಂಕಗಳು… ಅಂದರೆ ಶೇಕಡಾ 99.16% ಫಲಿತಾಂಶ…!
ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ.
ಇದು ಕೇವಲ ಅಂಕಗಳ ಕಥೆ ಅಲ್ಲ…
ಇದು ಹಗಲು-ರಾತ್ರಿ ಪರಿಶ್ರಮದ ಕಥೆ…
ಇದು ಕನಸುಗಳನ್ನು ನಂಬಿದ ಹೃದಯದ ಜಯಗಾಥೆ…
ಪ್ರತಿ ಅಂಕದ ಹಿಂದೆ ಅವನ ಶ್ರಮ ಇದೆ…

ಪ್ರತಿ ಯಶಸ್ಸಿನ ಹಿಂದೆ ಕುಟುಂಬದ ಬೆಂಬಲ ಇದೆ…
ಪ್ರತಿ ಹೆಜ್ಜೆಯಲ್ಲೂ ಶಿಕ್ಷಕರ ಮಾರ್ಗದರ್ಶನ ಇದೆ…
ಇಂದು ಶಿವಾನಂದನ ಸಾಧನೆ, ಅವನ ಮನೆಯವರ ಕಣ್ಣಲ್ಲಿ ಸಂತಸದ ಕಣ್ಣೀರನ್ನು ತಂದಿದೆ…
ಕಾಲೇಜಿನ ಪ್ರಾಂಗಣದಲ್ಲಿ ಹೆಮ್ಮೆಯ ನಗೆ ಮೂಡಿಸಿದೆ…

ಮತ್ತು ಅಥಣಿಯ ಪ್ರತಿಯೊಬ್ಬರ ಹೃದಯದಲ್ಲಿ ಗೌರವದ ಘಳಿಗೆಯನ್ನು ಸೃಷ್ಟಿಸಿದೆ…
ರಾಜ್ಯಕ್ಕೆ, ಜಿಲ್ಲೆಗೆ ಹಾಗೂ J.A. PU ಕಾಲೇಜಿಗೆ ಕೀರ್ತಿ ತಂದ ಶಿವಾನಂದನಿಗೆ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ…

ಇಂತಹ ಯುವ ಸಾಧಕರು ನಮ್ಮ ಸಮಾಜದ ಬೆಳಕು…
ಅವರ ಕನಸುಗಳು ಇನ್ನಷ್ಟು ಎತ್ತರಕ್ಕೆ ಹಾರಲಿ…
ಶಿವಾನಂದ… ನೀನು ಸಾಧಿಸಿದ್ದು ಕೇವಲ ಗೆಲುವಲ್ಲ…
ಇದು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ದೀಪ…

ನಮ್ಮ ಕರುನಾಡ ಕಂದ ಪತ್ರಿಕೆಯ ವತಿಯಿಂದ ಕೂಡ ಈ ವಿದ್ಯಾರ್ಥಿಗೆ ಅಭಿನಂದನೆಗಳು.

ವರದಿ ವಿಠ್ಠಲ ಖೋಕಾಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!