ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಂಪಾದೇವನಹಳ್ಳಿಯಲ್ಲಿ ಅಪರೂಪದ ಶಾಸನ ಪತ್ತೆ

ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯ ಕಾಲದ 16ನೇ ಶತಮಾನದ ಅಪರೂಪದ ಶಾಸನ ಪತ್ತೆಯಾಗಿದೆ. ಗ್ರಾಮದ ಪಶ್ಚಿಮ ಭಾಗದಲ್ಲಿರುವ ನಾರಿಹಳ್ಳ ದಂಡೆಯ ಬಳಿ ಈ ಅಪ್ರಕಟಿತ ಶಾಸನ ಕಂಡುಬಂದಿದ್ದು, ಇತಿಹಾಸಕ್ತರಲ್ಲಿ ಕುತೂಹಲ ಮೂಡಿಸಿದೆ.

ಕೊಪ್ಪಳ ತಾಲೂಕಿನ ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆ. ಅಂಜಿನಯ್ಯ ಅವರು ಶಾಸನವನ್ನು ಪತ್ತೆಹಚ್ಚಿ, ಪ್ರಾಥಮಿಕವಾಗಿ ಓದಿ ಅರ್ಥೈಸಿದ್ದಾರೆ. ಕನ್ನಡ ಲಿಪಿಯಲ್ಲಿ ಇರುವ ಈ ಶಾಸನವು ಶ್ರೀಕೃಷ್ಣದೇವರಾಯ ಅವರ ಆಡಳಿತಕಾಲಕ್ಕೆ ಸೇರಿದ್ದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಶಾಸನದಲ್ಲಿ ಹಂಪಾದೇವನಹಳ್ಳಿಯನ್ನು “ ಕೃಷ್ಣರಾಯಪುರ ” ಎಂದು ಮರುನಾಮಕರಣ ಮಾಡಿ ದಾನ ನೀಡಿರುವ ಉಲ್ಲೇಖ ಕಂಡು ಬಂದಿದೆ. ಶಾಸನದ ಮೇಲ್ಬಾಗದಲ್ಲಿ ಸೂರ್ಯ-ಚಂದ್ರ ಚಿಹ್ನೆಗಳು ಹಾಗೂ ಕೆಳಭಾಗದಲ್ಲಿ ವಿಷ್ಣುವಿನ ವಾಮನ ಅವತಾರದ ಚಿತ್ರ ಕೆತ್ತಲಾಗಿದ್ದು, ಇದು ವೈಶಿಷ್ಟ್ಯತೆಯನ್ನು ತೋರಿಸುತ್ತದೆ. ಕಾಲದ ಶಿಲ್ಪಕಲೆಯ

ಸುಮಾರು 5 ಅಡಿ ಎತ್ತರದ ಗ್ರಾನೈಟ್ ಶಾಸನವು ವಿಜಯನಗರ ಯುಗದ ಮಹತ್ವದ ಪುರಾವೆಯಾಗಿದ್ದು, ಇತಿಹಾಸದ ದೃಷ್ಟಿಯಿಂದ ಅಮೂಲ್ಯವಾದ ದಾಖಲೆ ಎಂದು ಪರಿಗಣಿಸಲಾಗಿದೆ. ಶಾಸನ ಪತ್ತೆಗೆ ಗ್ರಾಮದ ಯುವಕರಾದ ಕರಿಬಸವ, ಉಮೇಶ್ ಮತ್ತು ಪ್ರವೀಣ್ ಸಹಕರಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!