ಕೊಡಗು : ಆನೆ ದಾಳಿಯಿಂದ ಜೀವ ಹಾನಿ ಆಗುತ್ತಿರುವುದನ್ನು ಅರಣ್ಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ, ರೈತ ಸಂಘದ ವತಿಯಿಂದ ತಿತಿಮತಿಯಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಿಷಯ ತಿಳಿದ ಮಾನ್ಯ ಶಾಸಕರಾದ ಶ್ರೀ ಎ ಎಸ್ ಪೊನ್ನಣ್ಣರವರು ತಮ್ಮ ಬೆಂಗಳೂರು ಕಾರ್ಯಕ್ರಮವನ್ನು ಮುಂದೂಡಿ ಪ್ರತಿಭಟನಾ ಸ್ಥಳಕ್ಕೆ ಬಂದು ಮಾತನಾಡಿಸಿದರು. ನಂತರ ಸಂಸದರಾದ ಶ್ರೀ ಯದುವೀರ್ ಒಡೆಯರವರು ಧಾವಿಸಿದರು.
ಶಾಸಕ ಪೊನ್ನಣ್ಣರವರು ಅರಣ್ಯ ಸಚಿವರಾಗಲಿ ಎಂದು ಇಚ್ಚಿಸಿದ ಪ್ರತಿಭಟನಾಕಾರರು ಹಾಗೂ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯನವರು ಪ್ರತಿಭಟನೆ ಉದ್ದೇಶವನ್ನು ವಿವರಿಸುತ್ತಾ, ಶಾಸಕ ಪೊನ್ನಣ್ಣ ರವರು ಅರಣ್ಯ ಸಚಿವರಾಗಿ ಬಂದಲ್ಲಿ ತಮ್ಮ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಹೇಳಿದರು.
ಮನುಸೋಮಯ್ಯ ರವರು, ಪ್ರತಿಭಟನಾಕಾರರ ಪರವಾಗಿ ಮಾನ್ಯ ಶಾಸಕರಲ್ಲಿ, ಪದೇ ಪದೇ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಬರಲೇಬೇಕೆಂದು ಹಠ ಹಿಡಿದರು. ಕೂಡಲೇ ಮಾನ್ಯ ಶಾಸಕರು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಕರೆ ಮೂಲಕ ಸಂಪರ್ಕಿಸಿ, ಕೂಡಲೇ ಸಿಸಿಎಫ್ ರವರನ್ನು ಸ್ಥಳಕ್ಕೆ ಬರುವಂತೆ ಸೂಚಿಸಲು ತಿಳಿಸಿದರಲ್ಲದೆ, ಸಮಸ್ಯೆಯನ್ನು ಬಗೆಹರಿಸಿ ತನಗೆ ವರದಿ ನೀಡುವಂತೆ ಸೂಚಿಸಿದರು.
ನಂತರ ಮಾತನಾಡಿದ ಸಂಸದರು ಕೂಡಲೇ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕೇಂದ್ರಕ್ಕೆ ತಾನು ಈ ಗಂಭಿರ ಸಮಸ್ಯೆಯನ್ನು ಪ್ರಸ್ತಾಪ ಇಡುತ್ತೇನೆಂದು ಆಶ್ವಾಸನೆ ನೀಡಿದರು. ರಾಜ್ಯಸರ್ಕಾರವು ಇದರ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಕಾರ್ಯ ಪ್ರವೃತ್ತರಾಗಬೇಕೆಂದು ಈ ತಿಂಗಳಲ್ಲೆ ಆರು ಜನರ ಬಲಿಯಾಗಿದೆಯೆಂದು ವಿಷಾದ ವ್ಯಕ್ತಪಡಿಸಿದರು.
ವರದಿ : ಪ್ರಿತುನ್ ಪೂವಣ್ಣ




















