ಬಸವಕಲ್ಯಾಣ : ನಗರದ ಸದ್ಗುರು ಸದಾನಂದ ಸ್ವಾಮಿ ಮಠದ ಆವರಣದಲ್ಲಿ ರವಿವಾರ ಸಂಜೆ 05 ಗಂಟೆಗೆ, ಜೂನ್ 28 ರಂದು ನಗರದ ಅಕ್ಕಮಹಾದೇವಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಕಣ್ಣೀರಿ ಮಠದ ಮಾಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪರಮ ಪೂಜ್ಯ ಶ್ರೀ ಪ್ರಣವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಮತ್ತು ಬೀದರ ಜಿಲ್ಲಾ ಎಲ್ಲಾ ಮಠಾಧೀಶರ ಒಕ್ಕೂಟದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ದ್ವೀತಿಯ ಪೂರ್ವಭಾವಿ ಸಭೆ ಕರೆದು ಎಲ್ಲಾ ಸಮಾಜದ ಪ್ರಮುಖರು, ಗಣ್ಯರು, ಮಠಾಧೀಶರು ಹಾಗೂ ಎಲ್ಲಾ ಸಮಾಜಪರ, ಕನ್ನಡಪರ, ಹೋರಾಟಗಾರರು ಅದರಂತ ನೂರಾರು ಹಿಂದೂ ಸಮಾಜದ ಯುವಕರು ಎಲ್ಲರೂ ಸೇರಿ ಬೃಹತ್ ಹಿಂದೂ ಸಮಾವೇಶದ ಭಿತ್ತಿಪತ್ರ ಮತ್ತು ಕರಪತ್ರ ಬಿಡುಗಡೆಗೊಳಿಸಲಾಯಿತು.
ಇದೇ ಸಂಧರ್ಭದಲ್ಲಿ ಎಲ್ಲರ ಸರ್ವಾನುಮತದಿಂದ ಈ ಬೃಹತ್ ಕಾರ್ಯಕ್ರಮದ ಕಾರ್ಯಾಧ್ಯಕ್ಷರಾಗಿ ಶ್ರೀಯುತ ಗುಂಡುರೆಡ್ಡಿ ಕಮಲಾಮರ, ಉಪಾಧ್ಯಕ್ಷರಾಗಿ ಸಿದ್ದಾಮ ಗುದಗೆ, ಅನೀಲ ಭುಸಾರೆ, ಶಿವರಾಜ ತಾಟೆ, ಪ್ರಧಾನ ಕಾರ್ಯದರ್ಶಿಗಳಾಗಿ ರವಿ ನಾವದ್ದೇಕರ್, ಲೋಕೇಶ ಮೋಳಕೇರೆ, ಪ್ರವೀಣ ಚಳಕಾಪುರೆ, ಹಣಕಾಸು ಸಮಿತಿಯ ನಿರ್ವಹಣೆಗಾಗಿ ಮುಚಳಂಬನ ಶ್ರೀಗಳು ಮತ್ತು ಬಸವಕಲ್ಯಾಣ ಗವಿ ಮಠದ ಶ್ರೀಗಳನ್ನು ಆಯ್ಕೆ ಮಾಡಿ ಹೀಗೆ ವ್ಯವಸ್ಥಾಪನಾ ಸಮಿತಿ, ಆಹ್ವಾನ ಸಮಿತಿ, ಸ್ವಾಗತ ಸಮಿತಿ ವೇದಿಕೆ ಸಮಿತಿ, ಪ್ರಸಾದ ಸಮಿತಿ, ಪ್ರಚಾರ ಸಮಿತಿ, ಹಣಕಾಸು ಸಮಿತಿ ಹಾಗೂ ಶಿಸ್ತು ತಾಂತ್ರಿಕ, ನೊಂದಣೆ, ಸಾರಿಗೆ, ವಸತಿ, ದಾಸ್ತಾವೇಜು, ಸ್ವಚ್ಛತಾ ಸಲಹಾ ಹೀಗೆ ಹಲವಾರು ಸಮಿತಿಗಳನ್ನು ಎಲ್ಲರ ಸರ್ವಾನುಮತದಿಂದ ರಚಿಸಿ ಜವಾಬ್ದಾರಿಗಳನ್ನು ನೀಡಲಾಯಿತು.
ನೇತೃತ್ವ ವಹಿಸಿದ ಮುಚಳಂಬದ ಶ್ರೀ ಪ್ರಣವಾನಂದ ಹಾಗೂ ಬಸವಕಲ್ಯಾಣ ಗವಿಮಠದ ಅಭಿನವ ಶ್ರೀಗಳು ಮಾತನಾಡಿ ಇದು ಜಾತಿ ರಹಿತ, ರಾಜಕೀಯ ರಹಿತ ಭೇದಭಾವ ಇಲ್ಲದೇ ಹಿಂದೂ ಎಲ್ಲಾ ಸಮಾಜಗಳ ಒಕ್ಕೂಟದಲ್ಲಿ ಹಾಗೂ ಬೀದರ ಜಿಲ್ಲೆಯ ಎಲ್ಲಾ ಮಠಾಧೀಶರ ನೇತೃತ್ವದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಮಹಾಸಮಾವೇಶ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮಕ್ಕೆ ತನು ಮನ ಧನದಿಂದ ತಾಲೂಕಿನ ಅಷ್ಟೆ ಅಲ್ಲದೇ ಜಿಲ್ಲೆಯ ಎಲ್ಲಾ ಹಿಂದೂ ಭಾಂಧವರು ಭಾಗವಹಿಸಿ ಧರ್ಮದ ಜಾಗೃತೆಗಾಗಿ ಸೇರಿ ಯಶಸ್ವಿಗೊಳಿಸಬೇಕು. ಅಷ್ಟೇ ಅಲ್ಲದೇ ಎಲ್ಲಾ ಸಮಿತಿಯ ಪ್ರಮುಖರನ್ನ ಉದ್ದೇಶಿಸಿ, ಇದು ಧರ್ಮದ ಕಾರ್ಯ, ನಿಮ್ಮ ಮನೆಯ ಕಾರ್ಯಕ್ರಮದಂತೆ ಎಲ್ಲರೂ ಸತತವಾಗಿ ಈ ಕಾರ್ಯಕ್ರಮದ ಯಶಸ್ವಿಗಾಗಿ ಪಣತೊಟ್ಟು ಕಾರ್ಯಕ್ರಮ ಮುಗಿಯುವವರೆಗೂ ಹಗಲಿರುಳು ಸೇವೆ ಸಲ್ಲಿಸಿ ದೈವ ಕೃಪೆಗೆ ಪಾತ್ರರಾಗಬೇಕೆಂದು ನುಡಿದರು.
ಈ ದ್ವೀತಿಯ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ನಾನಾ ಕಡೆಯಿಂದ ಬಂದಂತಹ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ರಾಜೇಶ್ವರ, ಪೂಜ್ಯ ಶ್ರೀ ಮೃತಂಜಯ ಶಿವಾಚಾರ್ಯರು ಕಲ್ಲೂರ, ಮಜ್ಯ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಕಿಟ್ಟಾ ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಸದಲಾಪೂರ, ಪೂಜ್ಯ ಶ್ರೀ ಹೊನ್ನಲಿಂಗ ಮಹಾಸ್ವಾಮಿಗಳು ಸಿಂಧನಕೇರಾ, ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಖಟಕಚಿಂಬೊಳಿ, ಪೂಜ್ಯ ಶ್ರೀ ಕುಮಾರ ಮಹಾಸ್ವಾಮಿಗಳು ಭಾಲ್ಕಿ, ಹಾಗೂ ಪ್ರಮುಖರಾದ ಬಾಬು ಹೊನ್ನಾಯಕ, ಶ್ರೀಶೈಲ ವಾತಡೆ, ಸುರೇಶ ಸ್ವಾಮಿ ಕೃಷ್ಣಾರೆಡ್ಡಿ, ಗಿರೀಶ ತಾಂಬೋಳೆ, ಸುನೀಲ ಹೊಳಕುಂದೆ, ಚಂದ್ರಕಾಂತ ಗೊಗರೆ, ದೀಪಕ ಗಾಯಕವಾಡ, ಬಸವಣಪ್ಪಾ ಲವಾರೆ, ಬಸವರಾಜ ಕೋರಕೆ, ನಾರಾಯಣರಾವ ಬುನ್ನಾ, ಶರಣು ಗುದಗೆ, ವಿರೇಶ ಗುಡ್ಡಾ ಲಕ್ಷ್ಮೀಮಪ್ಪ ನಿಂಬಾಳ್ಯರ, ಬಂಡೆಪ್ಪಾ ಶಿವಪೂರ, ಶಾಮ ಹತ್ಯೆ ಸಾಗರ ದಂಡೋತಿ, ಸಂಜು ವಾಟೀಲ, ಸಂದೀಪ ಪಾಟಿಲ, ಸಂಗಾರೆಡ್ಡಿ ಗದಲೇಗಾಂವ, ಅಮರ ಬಡದಾಳೆ, ಸೂರ್ಯಕಾಂತ ರಾಜೋಳೆ, ದತ್ತು ಬೆಂಡೆ ಪ್ರಭು ಕಾಡಾದಿ ಸತೀಶ ಮೆಟಗೆ, ಅರ್ಜುನಸಿಂಗ್, ನವನಾಥ ಮೇತ್ರ ಪೋಪಟ ಜಮಾದಾರ, ಸುಮಿತ ನಿಪ್ಪಾಣಿ, ಸುನಿಲ ಡಿ.ಕೆ. ಜಗದೀಶ ಅವಸ ಮಹಾಂತೇಶ ಗೌರಕರ್, ಸಚಿನ ರೆಡ್ಡಿ, ಮಹೇಶ ಚಂದನಕೆರೆ, ಮೇಘರಾಜ ಚವ್ಹಾಣ, ಸುನೀಲ ಮೇಕಾಲೆ, ಸಂಗಮೇಶ ಸಜ್ಜನಶೆಟ್ಟಿ ಸುರೇಶ ಜಮ್ಮು, ದತ್ತಾತ್ರಿ ಧುರೆ, ಮಾತೇಯರಾದ ಉಮಾದೇವಿ ಮೆಟಗೆ, ರೇಣುಕಾ ಮಠಪತಿ, ಸವಿತಾ ಸ್ವಾಮಿ ಸಂಗಿತಾ ಚಿರಡೆ, ಇನ್ನು ಹಲವಾರು ಹಿರಿಯರು ಯುವಕರು ಮತ್ತು ಮಾತೆಯರು ಭಾಗಿಯಾಗಿದರು.
ವರದಿ: ಶ್ರೀನಿವಾಸ ಬಿರಾದಾರ




















