ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾರ್ಥಿಗಳೇ ಜೀವನದ ನಿಜ ಸಂಪತ್ತು -ನಳಿನಿ ಭಟ್

ಬೆಂಗಳೂರು: ನಮ್ಮ ಬೋಧನಾ ವೃತ್ತಿ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ತೃಪ್ತಿ ನಮಗಿದೆ.
ಸರಳ ಜೀವನದಲ್ಲಿ ನಂಬಿಕೆಯುಳ್ಳ ನಾವು, ಅದರಿಂದಲೇ ಸಂತೃಪ್ತಿ ಹೊಂದಿದ್ದೇವೆ. ನಮಗೆ ಭಗವಂತ ಎಲ್ಲವನ್ನೂ ಕೊಟ್ಟಿದ್ದಾನೆ. ವಿದ್ಯಾರ್ಥಿಗಳೇ ನಮ್ಮ ಜೀವನದ ನಿಜ ಸಂಪತ್ತು ಎಂದು ನಳಿನಿ ಭಟ್ ನುಡಿದರು.
ಅವರು ನಿನ್ನೆ ಶಿರಸಿಯ ಗಾಯತ್ರಿ ಗೆಳೆಯರ ಬಳಗದಲ್ಲಿ, ಜಸ್ಟಿಸ್ ಜಿ ಎನ್ ಸಭಾಹಿತ ಜಸ್ಟಿಸ್ ವಿಷ್ಣು ಸಭಾಹಿತ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶಾ ಸಭಾಹಿತ ಹಾಗೂ
ಎಂ ಎಸ್ ಹೆಗಡೆ ದಂಪತಿಗಳು ಹಾಗೂ ಗಾಯತ್ರಿ ಗೆಳೆಯರ ಬಳಗದವರು ನೀಡಿದ
ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಅಭಿಮಾನದಿಂದ, ಪ್ರೀತಿಯಿಂದ ಗೌರವಿಸಿ, ಸನ್ಮಾನಿಸಿದರುವದಕ್ಕೆ ನಳಿನಿ ಭಟ್ ಹಾಗೂ ಲಕ್ಷ್ಮಿನಾರಾಯಣ ಭಟ್ಟ ತೆಪ್ಪ ದಂಪತಿಗಳು ಬಳಗದವರಿಗೆ ಕೃತಜ್ಞತೆ ಸಲ್ಲಿಸಿದರು.

ಅದಕ್ಕೂ ಮೊದಲು ನಡೆದ ಡಿಜಿಟಲ್ ಮಾದಕತೆ ಮತ್ತು ಸುಪ್ತ ಮಹಾಮಾರಿ
ಆರೋಗ್ಯ ಸಲಹೆ ಉಪನ್ಯಾಸ ಕಾರ್ಯಕ್ರಮದಲ್ಲಿ, ಡಾ.ದಿನೇಶ ಹೆಗಡೆಯವರು ಮಾತನಾಡುತ್ತಾ,
ವಿಪರೀತವಾಗುತ್ತಿರುವ ಮೊಬೈಲ್ ಮತ್ತಿತರ ಇಲೆಕ್ಟ್ರಾನಿಕ್ ಸಾಮಗ್ರಿಗಳ ಬಳಕೆ ಮತ್ತು ಜೀವನಶೈಲಿಯಿಂದಾಗಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ನಮ್ಮ ಪೆಥಾಲಜಿಯೊಂದರಲ್ಲೇ ನಿತ್ಯ 3-4 ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ವಿದ್ಯುತ್ಕಾಂತೀಯ ವಿಕಿರಣದಿಂದಾಗಿ ಹೆಚ್ಚೆಚ್ಚು ಅನಾಹುತ ಆಗುತ್ತಿವೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದಾಗಿ ಅಭಿಪ್ರಾಯಪಟ್ಟರು.
ಮುಂದುವರಿದು ಅವರು, ಮಕ್ಕಳಿಂದು ವಿಡಿಯೋ ಗೇಮ್ಸ್ ಮುಂತಾಗಿ ಸರಾಸರಿ ದಿನವೂ 7ಗಂಟೆಯಷ್ಟು ಸಮಯ ಮೊಬೈಲ್ ಬಳಸುತ್ತಾರೆ. ಆಟೋಟ, ನಿಸರ್ಗದೊಡನೆ ನಂಟು ಮುಂತಾದವನ್ನು ಸಂಪೂರ್ಣವಾಗಿ ಮರೆತು ಸಂಕಷ್ಟ ಹೊಂದುತ್ತಿದ್ದಾರೆ. ನಿದ್ದೆ ಸಮಸ್ಯೆ, ಕಣ್ಣು ಮತ್ತು ತಲೆ ನೋವು, ಶೀಘ್ರಕೋಪ, ಮೆದುಳಿನ ಸಮಸ್ಯೆ , ಬಂಜೆತನ ಮುಂತಾಗಿ ಅನೇಕ ತೊಂದರೆಗಳು ನಮ್ಮನ್ನು ಬಾಧಿಸುತ್ತಿವೆ. ಈಗಲಾದರೂ ಜಾಗೃತರಾಗಿ ಸೂಕ್ತ ಆಹಾರ, ಸಮಯ ಮತ್ತು ಜೀವನಶೈಲಿ ನಿರ್ವಹಣೆಯಿಂದ ನಮ್ಮನ್ನು ನಾವು ಪಾರು ಮಾಡಿಕೊಳ್ಳೋಣ ಎಂದು ವಿಚಾರ ಪೂರ್ಣ ಆರೋಗ್ಯ ಸಲಹೆ ಉಪನ್ಯಾಸವನ್ನು ನೀಡಿ ಸಭಿಕರ ಹಲವು ಸಂದೇಹಗಳಿಗೆ ಸಾಂತ್ವನ ನೀಡಿದರು.
ಸನ್ಮಾನಿತರ ಕುರಿತು ಶಂಕರ್ ಹೆಗಡೆ ಭದ್ರನ್, ಡಿ ಎಸ್ ಹೆಗಡೆ, ಪದ್ಮಾ ಕುಲಕರ್ಣಿ ಅವರು ತುಂಬಾ ಆತ್ಮೀಯವಾಗಿ ಮಾತನಾಡಿ, ದಂಪತಿಗಳ ಸೇವೆಯನ್ನು ಸ್ಮರಿಸಿ, ಅವರ ಆದರ್ಶಗುಣಗಳನ್ನು ಕೊಂಡಾಡಿದರು.
ರವಿ ಹೆಗಡೆ ಗಡಿಹಳ್ಳಿಯವರು ಉಪನ್ಯಾಸಕರಾದ ಡಾ. ದಿನೇಶ್ ಹೆಗಡೆ ಹಾಗೂ ಸನ್ಮಾನಿತ ದಂಪತಿಗಳನ್ನು ಪರಿಚಯಿಸಿದರು.
ಇಂದಿರಾ ಬೈಲಕೇರಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಪ್ರೊ. ಕೆ ಎನ್ ಹೊಸಮನಿ, ಡಾ. ಕೆ ವಿ ಶಿವರಾಂ, ಡಾ. ಆರ್ ಎನ್ ಹೆಗಡೆ ಬಂಡಿಮನೆ, ಸುಧಾ ಹೆಗಡೆ, ಕಮಲಾಕ್ಷಿ ಭಟ್, ಕೃಷ್ಣವೇಣಿ ಹೆಗಡೆ, ಮಹಾದೇವಿ ಮಾರ್ಕಾಂಡೆ, ಪದ್ಮಾವತಿ ಹೆಗಡೆ, ಎಸ್ ಎಸ್ ಹೆಗಡೆ, ಆರ್ ಜಿ ದೇಶಪಾಂಡೆ, ಶ್ರೀಪತಿ ಹೆಗಡೆ, ಆರ್ ಎಸ್ ಹೆಗಡೆ, ಲಕ್ಷ್ಮಣ ಶಾನಭಾಗ್, ಆರ್ ಎಸ್ ಬೈಲಕೇರಿ, ಎನ್ ಎಂ ಮಾರ್ಕಂಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!