ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಅಭಿಯಾನ
ಬಳ್ಳಾರಿ / ಕಂಪ್ಲಿ : ನಶ ಮುಕ್ತ ಕರ್ನಾಟಕವನ್ನಾಗಿ ರೂಪಿಸುವ ಮೂಲಕ ಸ್ವಾಸ್ಥ್ಯ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಹೇಳಿದರು.
ಪಟ್ಟಣದ ಕಮ್ಮವಾರಿ ಭವನದಲ್ಲಿ ಕಂಪ್ಲಿ ಠಾಣೆವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಆಪರೇಷನ್ ರೈಸ್ ಹಾಗೂ ಬೇಡ ಬ್ರೋ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಶ್ಪರಿಣಾಮ ಬಗೆಗಿನ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಪರೇಷನ್ ರೈಸ್ ಎಂಬುದು ಯುವಜನತೆಯನ್ನು ಮಾದಕ ಪದಾರ್ಥಗಳ ಜಾಲದಿಂದ ರಕ್ಷಿಸಲು ಮತ್ತು ಮಾದಕ ವಸ್ತುಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮತ್ತು ರಾಜ್ಯ ಪೊಲೀಸ್ ಇಲಾಖೆ ಜಂಟಿಯಾಗಿ ರೂಪಿಸಿರುವ ಒಂದು ವಿಶೇಷ ಅಭಿಯಾನವಾಗಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣವಾಗಿ ಮಾದಕ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಮಾದಕ ವ್ಯಸನದಿಂದ ದೂರ ಉಳಿಯುವ ಮೂಲಕ ಇಂದಿನ ಯುವಕರು ನಾಡಿನ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಬೇಕು. ಸ್ವಾಸ್ಥ್ಯ ಸಮಾಜಕ್ಕೆ ಕಂಟಕವಾಗಿರುವ ಮಾದಕ ವಸ್ತುಗಳ ಬಗ್ಗೆ ಅತಿ ಹೆಚ್ಚಿನ ಜಾಗೃತಿವಹಿಸುವ ಜೊತೆಗೆ ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಸೇರಿದಂತೆ ಇಂತಹ ಘಟನೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೋಷಕರ, ಯುವಜನತೆಯ ಮತ್ತು ಸ್ಥಳೀಯ ಮುಖಂಡರ ಸಹಕಾರ ಅಗತ್ಯವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮಾದಕ ವಸ್ತುಗಳ ನಿರ್ಮೂಲನೆ ವಿದ್ಯಾರ್ಥಿಗಳಿಂದಲೂ ಸಾಧ್ಯ ಎಂದರು.
ತೋರಣಗಲ್ಲು ಉಪ ವಿಭಾಗದ ಡಿ ವೈ ಎಸ್ ಪಿ ಪ್ರಸಾದ್ ಗೋಖಲೆ, ಮಾತನಾಡಿ, ಮಾದಕ ದ್ರವ್ಯಗಳ ಬಳಕೆಯನ್ನು ಕಡ್ಡಾಯವಾಗಿ ತಿರಸ್ಕರಿಸುವುದು. ಡ್ರಗ್ಸ್ ಮಾರಾಟ ಅಥವಾ ಸಾಗಣೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು. ವ್ಯಸನಕ್ಕೆ ಒಳಗಾದವರಿಗೆ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಮೂಲಕ ಸಹಾಯ ಮಾಡುವುದು. ಮಾದಕ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಮುದಾಯಗಳನ್ನು ಸಬಲಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂಬದನ್ನ ತಿಳಿಸಿದರು.
ಪಿಐ ಕೆ.ಬಿ.ವಾಸುಕುಮಾರ ಸ್ವಾಗತಿಸಿ, ದುಶ್ಚಟಗಳಿಂದ ದೂರ ಇರುವ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ನಂತರ ರಂಗಲೋಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆವತಯಿಂದ ಮಾದಕ ವ್ಯಸನಮುಕ್ತ ಭಾರತ ಅರಿವು ಜಾಗೃತಿ ಉತ್ತಮ ನಾಟಕವೂ ಎಂ.ಮಹಾತೇಶ್ ತಂಡದಿಂದ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ರವೀಂದ್ರ ಕನಿಕೇರಿ, ಶಿಕ್ಷಣ ಇಲಾಖೆಯ ಇಸಿಒ ಟಿ.ಎಂ.ಬಸವರಾಜ, ಕಾಲೇಜು ಪ್ರಾಚಾರ್ಯ ಸಿದ್ದೇಶ ಪರಮೇಶ, ವಿವೇಕಾನಂದ ಸಂಸ್ಥೆಯ ಮುಖ್ಯಗುರು ಬಡಿಗೇರ್ ಜಿಲಾನಸಾಬ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ-ಕಾಲೇಜನ ಉಪನ್ಯಾಸಕರು ಸೇರಿದಂತೆವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















