ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರೊಫೆಸರ್ ರೂಪೇಶ್ ಪುತ್ತೂರ್ ಅವರಿಂದ ಕನ್ನಡ ನಾಡು- ನುಡಿಯ ಸೌಹಾರ್ದ- ಬಾಂಧವ್ಯ ಪಾದಯಾತ್ರೆ

ಬೀದರ್ ನಿಂದ ಬೆಂಗಳೂರು ತನಕ ಜುಲೈ 11 ರಂದು ಪ್ರಾರಂಭವಾಗಿರುವ ಏಕಾಂಗಿ ಪಾದಯಾತ್ರೆಯು ಪ್ರತಿದಿನವೂ 40 ರಿಂದ 50 ಕಿಲೋಮೀಟರ್ ಗಳ ಕನ್ನಡದ ಹೆಜ್ಜೆಗಳ ಮೂಲಕ ಇಂದು ಮಧ್ಯಾಹ್ನ 1 ಗಂಟೆಗೆ ಹರಪನಹಳ್ಳಿ ಪಟ್ಟಣಕ್ಕೆ ಆಗಮಿಸಿದರು.
ಈ ಕನ್ನಡಿಗ ನನ್ನ ಹರಪನಹಳ್ಳಿ ಕರವೇ ತಾಲೂಕು ಘಟಕದ ವತಿಯಿಂದ ಹೃತ್ಪೂರ್ವಕವಾಗಿರತಕ್ಕಂತ ಸ್ವಾಗತವನ್ನು ಬಯಸುತ್ತಾ, ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ “ಸೌಹಾರ್ದದ ಹೆಜ್ಜೆ.. ಸಮಾಜದ ಬೆಳಕು ” ಎಂಬ ಸಂಕಲ್ಪದ ಪಾದಯಾತ್ರೆಯ ನಡಿಗೆಯ ಉದ್ದೇಶ ಮತ್ತು ಕನ್ನಡಿಗರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಜಾಗೃತ ಅಭಿಯಾನವನ್ನು ರೂಪೇಶ್ ಪುತ್ತೂರು ಅವರು ಮಕ್ಕಳಿಗೆ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ನಾಗರಾಜ್ ಗಿರಜ್ಜಿ ಯವರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡು ಸಂಘಟನಾ ಪ್ರೇರಣಾ ಜೊತೆಗೆ ಕೃತಜ್ಞ ನುಡಿಯನ್ನು ಸಲ್ಲಿಸುವುದರ ಮೂಲಕ ರೂಪೇಶ್ ರವರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಿದರು.
ಕರವೇ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಶಿವಕುಮಾರ್ ಬಾಗಳಿ ಉಪನ್ಯಾಸಕರು ಪ್ರಾಸ್ತಾವಿಕ ನುಡಿಯಲ್ಲಿ ಪ್ರೊಫೆಸರ್ ರೂಪೇಶ್ ಪುತ್ತೂರವರ ಪಾದಯಾತ್ರೆಯ ಕನ್ನಡದ ಹೆಜ್ಜೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ತಾಲೂಕು ಕ್ರೀಡಾ ಅಧಿಕಾರಿ ಶ್ರೀ ಷಣ್ಮುಖಪ್ಪ ಅವರು ಕನ್ನಡಿಗರ ವಾಸ್ತು ಸ್ಥಿತಿಯ ಬಗ್ಗೆ ವಿಷಾದ ಸಂಗತಿಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯೋಪಾಧ್ಯಾಯರಾದ ಬಿ. ಎಂ ಶಿವಾಜಿ ಸರ್ ರವರು ಕನ್ನಡ ನಾಡು ನುಡಿಗಾಗಿ ಶ್ರಮಿಸುವ ಕನ್ನಡ ಸಂಘಟನೆಗಳಿಗೆ ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೀಲಗುಂದ ಗ್ರಾಮ ಘಟಕದ ಅಧ್ಯಕ್ಷರಾದ ಅಶೋಕ್ ಮತ್ತು ಉಪಾಧ್ಯಕ್ಷರಾದ ಹಾಲೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಶಿಕಲಾ ಮೇಡಂ ರವರು ನಡೆಸಿಕೊಡುವ ಮೂಲಕ ಎಲ್ಲಾ ಸಹ ಶಿಕ್ಷಕರ ಸಿಬ್ಬಂದಿ ವರ್ಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!