ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೈನುಗಾರಿಕೆಯಲ್ಲಿ ಮಹಿಳೆಯರೇ ಮೇಲುಗೈ ತುಮಕೂರು ಹಾಲು ಒಕ್ಕೂಟ ಸಂಘದ ನಿರ್ದೇಶಕ ಸಿದ್ದಗಂಗಯ್ಯ ಮೆಚ್ಚುಗೆ

ಬೋಡಬಂಡೇನಹಳ್ಳಿ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ.

ಹೆಚ್ಚು ಹಾಲು ಸರಬರಾಜು ಮಾಡಿದ ಮಹಿಳಾ ರೈತರಿಗೆ ಸನ್ಮಾನ.

ಕೊರಟಗೆರೆ: ಗ್ರಾಮೀಣ ಆರ್ಥಿಕತೆಗೆ ಹೈನುಗಾರಿಕೆ ಪ್ರಮುಖ ಆಧಾರವಾಗಿದ್ದು, ಹಾಲು ಉತ್ಪಾದನೆ ಮತ್ತು ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸಿದ್ದಗಂಗಯ್ಯ ಹೇಳಿದರು.

ಅವರು ಕೊರಟಗೆರೆ ತಾಲೂಕಿನ ಬೋಡಬಂಡೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025–26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆ ರೈತ ಕುಟುಂಬಗಳಿಗೆ ವರ್ಷಪೂರ್ತಿ ಆದಾಯ ತಂದುಕೊಡುವ ಲಾಭದಾಯಕ ಉಪ ಕಸುಬಾಗಿದೆ. ಮಹಿಳೆಯರು ಜಾನುವಾರುಗಳ ಆರೈಕೆ, ಗುಣಮಟ್ಟದ ಹಾಲು ಉತ್ಪಾದನೆ ಹಾಗೂ ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜಾನುವಾರುಗಳಿಗೆ ಸಮತೋಲಿತ ಮೇವು, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಸ್ವಚ್ಛ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದರೆ ಉತ್ಪಾದನೆ ಮತ್ತು ರೈತರ ಆದಾಯ ಎರಡನ್ನೂ ಹೆಚ್ಚಿಸಬಹುದು ಎಂದು ಅವರು ತಿಳಿಸಿದರು.

ಸಭೆಯ ಅಂಗವಾಗಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಮೂರು ಮಹಿಳಾ ರೈತರನ್ನು ಸಿದ್ದಗಂಗಯ್ಯ ಬಹುಮಾನ ನೀಡಿ ಸನ್ಮಾನಿಸಿದರು. ಈ ರೀತಿಯ ಪ್ರೋತ್ಸಾಹದಿಂದ ಇನ್ನಷ್ಟು ಮಹಿಳೆಯರು ಹೈನುಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದು, ಹಾಲು ಉತ್ಪಾದನೆಯೂ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಿಸ್ತರಣಾಧಿಕಾರಿ ಶ್ರೀಮತಿ ಬಶೀರ ಮಾತನಾಡಿ, 2025–26ನೇ ಸಾಲಿನ ವಾರ್ಷಿಕ ನಡವಳಿಕೆ ವರದಿ, ಆಡಿಟ್ ವರದಿ, ಜಮಾ–ಖರ್ಚಿನ ವಿವರ, ಲಾಭ–ನಷ್ಟದ ಲೆಕ್ಕ, ಲಾಭ ಹಂಚಿಕೆ, 2026–27ನೇ ಸಾಲಿನ ಲೆಕ್ಕಪರಿಶೋಧಕರ ನೇಮಕ ಹಾಗೂ ಅಂದಾಜು ಬಜೆಟ್ ಸೇರಿದಂತೆ ವಿವಿಧ ವಿಷಯಗಳನ್ನು ಸರ್ವ ಸದಸ್ಯರಿಗೆ ವಿವರಿಸಿದರು. ಸದಸ್ಯರು ಸಂಘದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೋಡ ಬಂಡೆನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಉಮಾದೇವಿ, ಉಪಾಧ್ಯಕ್ಷೆ ಶ್ರೀಮತಿ ರಂಗಮ್ಮ, ನಿರ್ದೇಶಕರಾದ ರೇಣುಕಮ್ಮ, ಅನುಸೂಯಮ್ಮ, ಮಧು, ಶ್ರೀದೇವಿ, ರಾಜೇಶ್ವರಿ, ಮಂಜಮ್ಮ, ಜ್ಯೋತಿ, ಜಯಮ್ಮ ಹಾಗೂ ಆರತಿ ಉಪಸ್ಥಿತರಿದ್ದರು.

ಸಭೆಯಲ್ಲಿ ಕೊರಟಗೆರೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಗುರುರಾಜ್, ತುಮಕೂರು ಹಾಲು ಒಕ್ಕೂಟದ ತಾಲೂಕು ಮುಖ್ಯಸ್ಥೆ ಪುಷ್ಪಲತಾ, ತಾಲೂಕು ವಿಸ್ತರಣಾಧಿಕಾರಿಗಳಾದ ರಂಜಿತ್ ಹಾಗೂ ಬಶೀರ, ವಿಸ್ತರಣಾ ಸಮಾಲೋಚಕ ಹನುಮಂತರಾಜು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮ್ಯಾ ಅರುಣ್, ಹಾಲು ಪರೀಕ್ಷಕಿ ನೇತ್ರಮ್ಮ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಹಾಗೂ ಮುಖಂಡರು ಭಾಗವಹಿಸಿದ್ದರು.

ವರದಿ. ಪ್ರಸನ್ನಕುಮಾರ್. ಎಸ್ . ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!