ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯಾದಗಿರಿ : ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ರಿಫ್ರೆಶರ್-4 ಎಟಿಎಲ್ ಶಾಲಾ ಶಿಕ್ಷಕರಿಗೆ ತರಬೇತಿ

ಯಾದಗಿರಿ: ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ನೀತಿ ಆಯೋಗ ಮತ್ತು ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ಸಹಯೋಗದಲ್ಲಿ ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ರಿಫ್ರೆಶರ್-4 ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಗಾರವನ್ನು ಜುಲೈ 28, 2026 ರಂದು ಯಾದಗಿರಿ ಜಿಲ್ಲೆಯ ಸುರಪುರದ ಹೋಟೆಲ್ ಆದಿತಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ನಿಂಗಣ್ಣ ಸಿಂಪಿ, ಉಪ ನಿರ್ದೇಶಕರು (ಅಭಿವೃದ್ಧಿ), ಡಯಟ್ ಯಾದಗಿರಿ ಅವರು, ಎಟಿಎಲ್ ಶಾಲೆಗಳ ಶಿಕ್ಷಕರನ್ನು ಸಬಲೀಕರಣಗೊಳಿಸಿ ಮುಂದಿನ ಪೀಳಿಗೆಯ ನಾಯಕರನ್ನು ರೂಪಿಸುವಲ್ಲಿ ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಯುವಜನರಲ್ಲಿ ಸೃಜನಶೀಲತೆ ಮತ್ತು ಸುಸ್ಥಿರ ಚಿಂತನೆಯನ್ನು ಬೆಳೆಸುವ ಈ ಪ್ರಯಾಣ ಶಿಕ್ಷಕರಿಗೆ ಹೊಸ ಪ್ರೇರಣೆ ನೀಡುತ್ತದೆ. ಈ ತರಬೇತಿಯ ಸದುಪಯೋಗ ಪಡೆದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪ್ರಸ್ತುತ ಎಲ್ಲಾ ಎಟಿಎಲ್ ಶಾಲೆಗಳಲ್ಲಿ ಎಸ್ ಟಿ ಇ ಎಮ್ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ತನ್ನ ವಿಶೇಷ ಪಠ್ಯಕ್ರಮದ ಮೂಲಕ ಶಿಕ್ಷಕರಿಗೆ ತರಬೇತಿ ನೀಡಿ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತಿದೆ ಎಂದು ಅವರು ಹೇಳಿದರು.
ಈ ತರಬೇತಿ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳಿಗೆ ಪೂರಕವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಅಮರಣ್ಣ , ಎಟಿಎಲ್ ಶಾಲೆಗಳ ನೋಡಲ್ ಅಧಿಕಾರಿ, ಡಯಟ್ ಯಾದಗಿರಿ ಅವರು, ಈ ಕಾರ್ಯಕ್ರಮವು ಭಾರತಾದ್ಯಂತ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ 2024-25 ರಿಂದ 2026-27 ರವರೆಗೆ ಮುಂದುವರೆಯಲಿದೆ. ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ಮೂಲಕ ತರಬೇತಿ ಪಡೆಯುವ ಶಿಕ್ಷಕರು ತಾವೇ ಹೊಸತನವನ್ನು ಕಂಡುಕೊಂಡು, ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆ ಮತ್ತು ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬೇಕು. ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ರೂಪಿಸುವ ನವೀನ ಯೋಜನೆಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡರೆ ಅದು ಎ ಐ ಎಮ್ ಮತ್ತು ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ತಂಡಕ್ಕೂ ಹೆಮ್ಮೆ ತರುತ್ತದೆ ಎಂದರು.
ತರಬೇತಿಯಲ್ಲಿ ಎನ್‌ಎಕ್ಸ್‌ಪ್ಲೋರರ್ಸ್ ಸೀನಿಯರ್ ಫೌಂಡೇಶನ್ ಪಠ್ಯಕ್ರಮದ ಸಂಪೂರ್ಣ ಪರಿಚಯ ನೀಡಲಾಯಿತು.
ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ನಾಯಕರಾಗಿ ರೂಪಿಸಲು ಮತ್ತು ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಜ್ಞಾನ ಹಾಗೂ ಕೌಶಲ್ಯಗಳನ್ನು ಪಡೆದುಕೊಂಡರು.
ಈ ಕಾರ್ಯಗಾರದಲ್ಲಿ ಯಾದಗಿರಿ, ಕಲಬುರ್ಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ 26 ಶಾಲೆಗಳಿಂದ ಒಟ್ಟು 31 ಎಟಿಎಲ್ ಶಿಕ್ಷಕರು ಭಾಗವಹಿಸಿದ್ದರು.
ತರಬೇತಿಯ ಭಾಗವಾಗಿ ಸೀನಿಯರ್ ಫೌಂಡೇಶನ್ ಕುರಿತು ವಿಶೇಷ ಅವಧಿಯನ್ನು ಶ್ರೀ ಲೋಕೇಶ್ ದೊಡ್ಮನಿ ಮತ್ತು ಶ್ರೀ ವಿಶ್ವನಾಥ್ ರೆಡ್ಡಿ, ಅಸಿಸ್ಟೆಂಟ್ ಮ್ಯಾನೇಜರ್‌ಗಳು ನಡೆಸಿಕೊಟ್ಟರು. ಮುಂದಿನ ಪೀಳಿಗೆಗಾಗಿ ಎನರ್ಜಿ ಕ್ಲಬ್‌ನ ಮಹತ್ವ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಭವಿಷ್ಯದ ಕುರಿತು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಲ್ಲಪ್ಪ ತಳವಾರ್ ಮತ್ತು ಶ್ರೀ ರಂಗೂಜಿ, ಉಪನ್ಯಾಸಕರು, ಡಯಟ್ ಯಾದಗಿರಿ ಅವರು ಸಹ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!