ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲೋಕಶಾಹಿರ, ಸಾಹಿತ್ಯರತ್ನ ಅಣ್ಣಾಭಾವು ಸಾಠೆರವರ ಜಯಂತಿ ಕಾರ್ಯಕ್ರಮ

ಬಸವಕಲ್ಯಾಣ : ನಗರದ ಈಶ್ವರ ನಗರ ಓಣಿಯ ಮಾಂಗಗಾರುಡಿಗ ಸಮಾಜದ ಯುವಕ ಮಂಡಳಿಯ ವತಿಯಿಂದ ಸಾಹಿತ್ಯ-ಸಾಮ್ರಾಟ, ಲೋಕಶಾಹಿರ್, ಅಣ್ಣಾಭಾವು, ಸಾಹಿತ್ಯರತ್ನ, ಜಹಾದ್ವಿಖ್ಯಾತ್, ಸಂಯುಕ್ತ್ ಮಹಾರಾಷ್ಟ್ರ ಜನಕ್, ಸಂಯುಕ್ತ ಮಹಾರಾಷ್ಟ್ರ ಶಿಲ್ಪಕಾರ್, ಶಿಲ್ಡಿಯಾರ್, ಅಗ್ರಿಣಿ, ದಿಂಜನಾಂಚ ಸ್ಫೂರ್ತಿದಾತಾ ಎಂದು ನಾನಾ ಹೆಸರುಗಳಿಂದ ಹೆಸರುವಾಸಿಯಾದ ಶ್ರೀ ಅಣ್ಣಾಭಾವೂ ಸಾಠೆರವರ ಜಯಂತೋತ್ಸವದ ಹಿನ್ನೆಲೆಯಲ್ಲಿ ಮಾಂಗಗಾರುಡಿಗ ಸಮುದಾಯದ ಹಿರಿಯರು, ಕಿರಿಯರು, ಮಾತೆಯರು, ಮಕ್ಕಳು, ಯುವಕರು, ಯುವತಿಯರು ಎಲ್ಲರೂ ಸೇರಿ ಶ್ರೀ ಅಣ್ಣಾಭಾವು ಸಾಠೆರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಓಣಿಯ ಎಲ್ಲರಿಗೂ ಸಿಹಿ ತಿನಿಸುವ ಮೂಲಕ ವಿನೂತನವಾಗಿ ಜನ್ಮ ದಿನ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ರವಿ ನಾವದ್ಗೇಕರ ಜಿಲ್ಲಾ ಸಹ-ಸಯೋಜಕರು ಭಜರಂಗದಳರವರು ಅಣ್ಣಾಭಾವೋ ಸಾಠೆರವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಸಮಾಜವನ್ನು ಉದ್ದೇಶಿಸಿ ನಮ್ಮಂತ ಸಣ್ಣ, ದೀನದಲಿತ ಸಮುದಾಯದಲ್ಲಿ ಇಂತಹ ಧೀಮಂತ ನಾಯಕರು ಹುಟ್ಟಿದ್ದಾರೆ, ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ, ಅಂದು ಬರೀ ಒಂದೂವರೆ ದಿವಸ ಶಾಲೆ ಕಲಿತು ಇಡೀ ಜಗತ್ತಿಗೆ ಸಾಹಿತ್ಯದೊಂದಿಗೆ, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಅಂದಿನ ಸ್ಥಿತಿಗತಿಗಳ ಬಗ್ಗೆ ಜನಪದ ಲಾವಣಿಗಳು, ಕಾದಂಬರಿಯ ಮತ್ತು ನಾಟಕಗಳ ಮೂಲಕ ಸಮಾಜವನ್ನು ಪ್ರತಿಬಿಂಬಿಸುವ ಪ್ರಯತ್ನ ಅಣ್ಣಾಭಾವು ಸಾಠೆ ರವರದಾಗಿತ್ತು, ಇವತ್ತಿಗೂ ಈ ಪರಿಸರ ನೋಡಿದರೆ ಅಂದು ಅಣ್ಣಾ ಭಾವೋ ಸಾಟೆರವರು ಹೇಳಿದ ಮಾತು ನೆನಪಿಗೆ ಬರುತ್ತೆ, ಭಾರತ ಸ್ವತಂತ್ರ ಪಡೆದಾಗ ಮರುದಿನವೇ ಒಂದು ಘೋಷವಾಕ್ಯವನ್ನ ಅಣ್ಣಾಜೀ ಹಾಕಿದರು ” ಏ ಆಜಾದಿ ಜೋಟಿ ಹೈ, ದೇಶ ಕ್ಕೆ ಜನತಾ ಭೋಕಿ ಹೈ ” ಎನ್ನುವ ಮಾತು ಇವತ್ತಿಗೂ ಜೀವಂತ ಸಾಕ್ಷಿಯಾಗಿದೆ, ಕಾರಣ ಬಡತನದಲ್ಲಿ ಹುಟ್ಟ , ಬೆಂದು, ಬಡತನದಲ್ಲಿ ಸಾಯುವುದು ಹಣೆಬರಹವಾದರೆ, ಅದನ್ನು ಮೀರಿ ಬದಲಾಯಿಸಿದ ಕೀರ್ತಿ ಅಣ್ಣಾ ಭಾವೋ ಸಾಠೆರವರ ಅವರಿಗೆ ಸಲ್ಲುತ್ತದೆ, ಹಾಗಾಗಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮೂಲಭೂತ ಹಕ್ಕು ಹಕ್ಕುಗಳಲ್ಲಿ ಒಂದಾದ ಶಿಕ್ಷಣದ ಹಕ್ಕು ನಮಗೆಲ್ಲ ಉಚಿತ ಮತ್ತು ಕಡ್ಡಾಯವಾಗಿದೆ, ದಯವಿಟ್ಟು ಎಲ್ಲಾ ಸಮಾಜ ಬಾಂಧವರು ತಮ್ಮ ಆರು ವರ್ಷದಿಂದ ಹದಿನಾಲ್ಕು ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸೌಲಭ್ಯಗಳನ್ನು ತೆಗೆದುಕೊಂಡು ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ನೀಡಿ, ಅಂದಾಗ ಮಾತ್ರ ನಾವುಗಳು ಈ ಬಡತನದಿಂದ ಮುಕ್ತವಾಗಲು ಸಾಧ್ಯ, ಹಾಗಾಗಿ ಎಲ್ಲರೂ ತಮ್ಮ ಮಕ್ಕಳನ್ನ ಶಿಕ್ಷಣ ನೀಡಿ ಶಿಕ್ಷಿತರನ್ನಾಗಿ ಮಾಡಬೇಕಾಗಿ ವಿನಂತಿಸಿ ಎಲ್ಲರೂ ಸೇರಿ ಸುಶಕ್ತ ಸಮಾಜ ಕಟ್ಟೋಣ,ನಾವೆಲ್ಲರೂ ಸಮಾಜಮುಖಿಯಾಗಿ ಬದುಕೋಣ ಎಂದು ಜೈ ಘೋಷದೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಓಣಿಯ ಹಿರಿಯರಾದ ಪಂಡಿತ ಉಪಾಧ್ಯಾಯ, ಸುನೀಲ ಸಕಟ,ಸಾವನ ಸಕಟ,ವಿಷ್ಣು, ಸನ್ನಿ,ಗೋರಕ, ಜೀತು,ಹಾಗೂ ಕೃಷ್ಣ ಸಕಟ ಭಾಗಿಯಾಗಿದರು.

ವರದಿ ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!