ನಾಡು, ನುಡಿಗಾಗಿ ನಿರಂತರ ಶ್ರಮ : ಬಳೆ ಮಲ್ಲಿಕಾರ್ಜುನ
ಬಳ್ಳಾರಿ / ಕಂಪ್ಲಿ : ನಾಡು, ನುಡಿಗಾಗಿ ನಿರಂತರವಾಗಿ ಶ್ರಮಿಸುವ ಜೊತೆಗೆ ಜೀವನವನ್ನೇ ಕನ್ನಡತನಕ್ಕೆ ಮುಡುಪಾಗಿಟ್ಟಿದ್ದೇವೆ ಎಂದು ಕರವೇ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ 4ನೇ ವಾರ್ಡಿನ ಸಂತೆ ಮಾರುಕಟ್ಟೆ ಬಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧ್ಯಕ್ಷ ಅಂಗಡಿ ಶಂಕ್ರಪ್ಪ ಅವರ ಜನ್ಮದಿನದ ಪ್ರಯುಕ್ತ ಅವರ ಸಮ್ಮುಖದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಪೆನ್ನು, ಪೆನ್ಸಿಲ್ ವಿತರಿಸಿ ಮಾತನಾಡಿ, ಇಂದಿನ ಆಧುನಿಕ ಭಾರತದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕವಾಗಿ ಶಿಕ್ಷಣ ಕೊಟ್ಟಾಗ ಮಾತ್ರ ಭವಿಷ್ಯ ಉಜ್ವಲವಾಗುವ ಜೊತೆಗೆ ದೇಶದ ಉತ್ತಮ ನಾಗರಿಕರಾಗಿ ಹೊರ ಹೊಮ್ಮಲು ಸಾಧ್ಯ ಎಂದರು. ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ನಾಡಿನ ನೆಲ, ಜಲ, ಭಾಷೆ ಉಳಿವಿಗಾಗಿ ನಿರಂತವಾಗಿ ಕರವೇ ಪದಾಧಿಕಾರಿಗಳು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಇತ್ತೀಚಿನ ದಿನಮಾನದಲ್ಲಿ ಖಾಸಗಿ ಶಾಲೆಗಳ ಹಾವಳಿಗೆ ಸರ್ಕಾರಿ ಶಾಲೆಗಳ ಶಿಕ್ಷಣ ಕುಂಠಿತವಾಗಿರುವುದು ವಿಪರ್ಯಾಸವಾಗಿದೆ. ಆದ್ದರಿಂದ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟರೆ, ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮುಖ್ಯಗುರು ಈಶ್ವರಪ್ಪ, ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಚಾನಾಳ್ ತಿಪ್ಪಾರೆಡ್ಡಿ, ತಾಲೂಕು ಉಪಾಧ್ಯಕ್ಷರಾದ ವಿ.ಬಿ.ನಾಗರಾಜ, ಅಕ್ಕಿ ಜಿಲಾನ್, ಯುವ ಘಟಕ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ದೊಡ್ಡಮನೆ ಗಣೇಶ, ಕಾರ್ಮಿಕ ಘಟಕ ಆಧ್ಯಕ್ಷ ಪೇಂಟ್ ಬಸವರಾಜ, ವಿದ್ಯಾರ್ಥಿ ಘಟಕ ಅಧ್ಯಕ್ಷ ಮುನ್ನಾ, ಬಳ್ಳಾರಿ ತಾಲೂಕು ಅಧ್ಯಕ್ಷ ಚಾನಾಳ್ ಮಲ್ಲಿಕಾರ್ಜುನ, ಕುರುಗೋಡು ತಾಲೂಕು ಅಧ್ಯಕ್ಷ ಗೆಣಕಿಹಾಳ್ ವಿರೇಶ, ಮೆಟ್ರಿ ಗ್ರಾಮ ಘಟಕ ಅಧ್ಯಕ್ಷ ದೊಡ್ಡಬಸುವ ಮೆಟ್ರಿ, ಮಹಿಳೆ ಘಟಕ ಅಧ್ಯಕ್ಷೆ ಮುಕ್ಕುಂದಿ ಮಮತ, ಉಪಾಧ್ಯಕ್ಷೆ ಹೊನ್ನಳ್ಳಿ ಶ್ರೀದೇವಿ, ಪ್ರಧಾನ ಕಾರ್ಯದರ್ಶಿ ವಿಜಯಲಕ್ಷಿö ಮುಖಂಡರಾದ ಪಿ.ಶಂಭುಲಿಂಗ, ಕಟ್ಟೆ ವಿನಯ, ಗೌಳೇರು ಮಂಜುನಾಥ, ಸಿದ್ದೇಶ, ಸೇರಿದಂತೆ ಪದಾಧಿಕಾರಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















