ಬಳ್ಳಾರಿ / ಕಂಪ್ಲಿ : ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಟಿ.ರಾಮು ಅವರ ಸಭಾಧ್ಯಕ್ಷತೆಯಲ್ಲಿ 77 ವಾರ್ಷಿಕ ಮಹಾಜನ ಸಭೆ ಬುಧವಾರ ನಡೆಯಿತು.
ನಂತರ ಮುಖ್ಯ ಕಾರ್ಯನಿರ್ವಾಹಕ ಕೆ.ವಿರೇಶ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 2550 ಜನ ಸದಸ್ಯರೊಂದಿಗೆ ಸುಮಾರು 29 ಲಕ್ಷ 6 ಸಾವಿರ ಶೇರು ಬಂಡವಾಳ ಹೊಂದಿದೆ. ಸುಮಾರು 95 ಲಕ್ಷ 62 ಸಾವಿರ ದುಡಿಯುವ ಬಂಡವಾಳ ಹೊಂದಿದೆ. ಸುಮಾರು 3 ಕೋಟಿ 53 ಲಕ್ಷ 11 ಸಾವಿರ ರಸಗೊಬ್ಬರ ವ್ಯವಹಾರ ನಡೆಸಿದ್ದು, ಸುಮಾರು 19 ಲಕ್ಷ 48 ಸಾವಿರ ವ್ಯಾಪಾರಿ ಲಾಭಗಳಿಸಿದೆ. 2025-26ನೇ ಸಾಲಿನಲ್ಲಿ ಸಂಘವು ಸುಮಾರು 1 ಲಕ್ಷ 32 ಸಾವಿರ ನಿವ್ವಳ ಲಾಭ ಹೊಂದಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬು ಕೈಜೋಡಿಸಬೇಕು ಎಂದರು.
ಇಲ್ಲಿನ ಸೊಸೈಟಿಯ ರಸಗೊಬ್ಬರ ವ್ಯವಹಾರದಲ್ಲಿ ಈ ಹಿಂದೆ ಅವ್ಯವಹಾರ ನಡೆದಿದ್ದು, ಈಗಾಗಲೇ ಪ್ರಕರಣ ಕೋರ್ಟ್ನಲ್ಲಿರುವುದರಿಂದ ಇದರ ಮಾಹಿತಿಯನ್ನು ರೈತರಿಗೆ ನೀಡುವ ಜೊತೆಗೆ ಅವ್ಯವಹಾರ ತನಿಖೆ ನಡೆಸಿ, ಸೂಕ್ತಕ್ರಮದೊಂದಿಗೆ ಅವ್ಯವಹಾರದ ಹಣ ವಸೂಲಾತಿ ಮಾಡಿ, ಸಂಘದ ಅಭಿವೃದ್ಧಿಗೆ ಮುಂದಾಗಬೇಕು. ಸಂಘದ ಪ್ರತಿಯೊಂದು ಅಂಕಿ ಅಂಶಗಳ ಮಾಹಿತಿ ನೀಡಬೇಕು. ಮತ್ತು ಶೇರುದಾರರಿಗೆ ಡಿವಿಡೆಂಟ್ ನೀಡಬೇಕು. ಹೀಗೆ ಹಲವು ಸಮಸ್ಯೆಗಳಿದ್ದು, ಕೂಡಲೇ ಪ್ರಸ್ತುತ ಸಹಕಾರಿ ಸಮಿತಿಯವರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಜವಾಬ್ದಾರಿಯುತವಾಗಿ ಪರಿಹರಿಸಬೇಕು. ಈ ಹಿಂದೆ ನಡೆದ ಅವ್ಯವಹಾರದ ಸಂಬಂಧ ಡಿಆರ್‌ಒಗೆ ದೂರು ನೀಡಿ, ತುರ್ತಾಗಿ ತನಿಖೆಗೆ ಆಗ್ರಹಿಸಿ, ನ್ಯಾಯಸಮ್ಮತವಾಗಿ ಪರಿಶೀಲಿಸಿ, ನ್ಯಾಯಕ್ಕಾಗಿ ಸಭಾಧ್ಯಕ್ಷರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರಾದ ಅಗಳಿ ಪಂಪಾಪತಿ, ಆದೋನಿ ರಂಗಪ್ಪ, ಇಟಗಿ ಬಸವರಾಜಗೌಡ, ಜಿ.ಲಿಂಗನಗೌಡ ಸೇರಿದಂತೆ ಅನೇಕು ರೈತರು ತಿಳಿಸಿದರು.
ಸಂಘದ ಅಧ್ಯಕ್ಷ ಕಡೆಮನೆ ನಾಗರಾಜ ವಾರ್ಷಿಕ ಸಭೆ ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಜಿ.ಅಯ್ಯಮ್ಮ, ಕೆ.ದೊಡ್ಡಬಸಪ್ಪ, ಅಳ್ಳಿ ನಾಗರಾಜ, ಪಿ.ಚೊಕ್ಕರಾವ್, ಅರಳೆ ಮುತ್ತಯ್ಯ, ಹನುಮಂತಪ್ಪ ಕುರುಬರು, ವಿ.ಬಿ.ನಾಗರಾಜ, ಆಂಜನೇಯಲು, ಗೌಡ್ರು ಅಂಜಿನಪ್ಪ, ಕೆ.ಭಾಸ್ಕರ್‌ರೆಡ್ಡಿ, ಕೆ.ರಾಧ, ಹೆಚ್.ಲಿಂಗಪ್ಪ (ಸರ್ಕಾರಿ ನಾಮಿನಿ), ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ವೆಂಕಟರಾಮರಾಜು, ಕೊಟ್ಟೂರು ರಮೇಶ, ಟಿ.ರಮಣಯ್ಯ, ಭಟ್ಟ ಪ್ರಸಾದ್, ಸಿ.ಯಂಕೋಬ ಸೇರಿದಂತೆ ರೈತರು ಹಾಗೂ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















