ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಹದ್ದೂರ್ ಬಂಡೆ ಕೋಟೆಗೆ ಚಾರಣ

ಕೊಪ್ಪಳ:
ಚಾರಣ (Trekking) ಎಂದರೆ ಪ್ರಕೃತಿಯ ಮಡಿಲಲ್ಲಿ ಸಾಗುವ ದೈಹಿಕ ಚಟುವಟಿಕೆ. ಇದು ಬೆಟ್ಟ-ಗುಡ್ಡಗಳನ್ನು ಹತ್ತುವುದು, ಕಾಡು ಮತ್ತು ನದಿ ಪಾತ್ರಗಳಲ್ಲಿ ನಡಿಗೆಯ ಮೂಲಕ ಸಾಗುವ ಒಂದು ಸಾಹಸಮಯ ಹವ್ಯಾಸವಾಗಿದೆ.
ಚಾರಣವು ಒಂದು ಹವ್ಯಾಸವಾಗಿದ್ದು ಇದರಲ್ಲಿ ಕಾಡುಗಳಲ್ಲಿ ಸಂಚರಿಸುವುದು. ಪ್ರಕೃತಿಯ ಚೆಲುವನ್ನು ಸವಿಯಲು ಇದು ಒಂದು ಉತ್ತಮ ಅವಕಾಶ. ಚಾರಣವು ಧೈರ್ಯ, ಸಾಹಸ, ಆತ್ಮಸ್ಥೈರ್ಯ, ನಾಯಕತ್ವ, ಸಂಘಟನೆಯ ಕೌಶಲ್ಯ, ಸೂಕ್ತ ಯೋಜನೆ, ಮಾನಸಿಕ ಸ್ಥಿತಿ ಮುಂತಾದವುಗಳನ್ನು ಬೆಳೆಸುವಲ್ಲಿ ಒಂದು ಉತ್ತಮ ಹವ್ಯಾಸವಾಗಿದೆ. ಒಟ್ಟಾರೆ
ಚಾರಣವು ಒಂದು ಆರೋಗ್ಯಕರ ಚಟುವಟಿಕೆ ಮತ್ತು ಹೆಚ್ಚಿನ ಶ್ರಮದ ನಡಿಗೆಯಾಗಿದೆ.
ಚಾರಣದಿಂದ ಆರೋಗ್ಯ ವೃದ್ಧಿಯಾಗುತ್ತದೆ.
ನಿಯಮಿತವಾಗಿ ಚಾರಣ ಮಾಡುವುದರಿಂದ ಆರೋಗ್ಯಕ್ಕೆ ಉತ್ತಮ ಕೊಡುಗೆ ದೊರೆಯುತ್ತದೆ. ದೀರ್ಘಕಾಲದ ನಡುಗೆ, ಬೆಟ್ಟ ಏರುವಿಕೆ, ಶುದ್ದಗಾಳಿಯ ಸೇವನೆ ಇವೆಲ್ಲವೂ ದೇಹಾರೋಗ್ಯದ ಮೇಲೆ ಉತ್ತಮ ಪರಿಣಾಮ ಬಿರುತ್ತದೆ.
ಇದಲ್ಲದೇ ಚಾರಣದಿಂದ ಲೋಕಜ್ಞಾನ ಹೆಚ್ಚಾಗುತ್ತದೆ. ಹೊಸ ಹೊಸ ಸ್ಥಳಗಳ ಮಾಹಿತಿ ಗೊತ್ತಾಗುತ್ತದೆ. ಸ್ಥಳಗಳ ಕುರಿತು ಸಾಂಸ್ಕೃತಿಕ ಮತ್ತು ಸಾಮಾಜಿಕ ಮಾಹಿತಿ ತಿಳಿಯುತ್ತದೆ. ಈ ಉದ್ದೇಶ ದಿಂದ
ಕೊಪ್ಪಳ- ಭಾಗ್ಯನಗರದ ಅಡವಿ ಆಂಜಿನೇಯ ದೇವಸ್ಥಾನದ ಹತ್ತಿರ ಆಂಜಿನೇಯ ಬಡಾವಣೆ ವಾಕಿಂಗ್ ಗೆಳೆಯರ ಬಳಗದಿಂದ ರವಿವಾರ ಬಹದ್ದೂರ್ ಬಂಡೆ ಕೋಟೆಗೆ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳದಿಂದ 4 ಕಿ. ಮೀ. ಅಂತರದಲ್ಲಿರುವ ಕೋಟೆ ಗ್ರಾಮದ ಬೆಟ್ಟದ ಮೇಲೆ ನಿರ್ಮಾಣಗೊಂಡಿರುವ ಬಹದ್ದೂರ್ ಬಂಡೆ ಕೋಟೆ.
ಈ ಕೋಟೆಯಲ್ಲಿ 5 ಶಾಸನಗಳಿವೆ. ಹೈದರಾಲಿಯ ಕಿಲ್ಲೆದಾರ ಶೇಖ್ ಮಹ್ಮದ್ ನು 1782 ರಲ್ಲಿ ಈ ಕೋಟೆಯನ್ನು ಕಟ್ಟಿಸಿ ಅದಕ್ಕೆ ಹೈದರಾಲಿಯ ಬಿರುದಾದ ಬಹದ್ದೂರ್ ಎಂಬ ಹೆಸರನಲ್ಲಿ ಕರೆದನು. ಇವನೇ ಟಿಪ್ಪು ಸುಲ್ತಾನ್ ಕಾಲದಲ್ಲಿ 1783 ರಲ್ಲಿ ಕೋಟೆಯನ್ನು ದುರಸ್ಥಿಗೊಳಿಸಿ ಬಾಗಿಲುಗಳನ್ನು ಕಟ್ಟಿಸಿದನು. 1786 ರಲ್ಲಿ ಮರಾಠರು ಮತ್ತು ಹೈದರಾಬಾದ್ ನಿಜಾಮರು ಒಗ್ಗೂಡಿ ಈ ಕೋಟೆಯನ್ನು ವಶಪಡಿಸಿಕೊಂಡರು. 1791 ರಲ್ಲಿ ಇದು ಬ್ರಿಟಿಷ್ ಕ್ಯಾಪ್ಟನ್ ಅಂಡ್ರು ರೀಡ್ಸ್ ವಶವಾಯಿತು. ಈ ಕೋಟೆಯಲ್ಲಿ ಚೌಡೇಶ್ವರ, ಹನುಮಂತ, ಈಶ್ವರ ದೇವಾಲಯಗಳು ಇವೆ.
ಈ ಕೋಟೆಯು ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಹಾಗೂ ಹಳೆಯ ವಾಸ್ತುಶಿಲ್ಪವನ್ನು ಹೊಂದಿದೆ. ಕೊಪ್ಪಳ ಸ್ವಾತಂತ್ರ್ಯ ಹೋರಾಟದ ಹೆಗ್ಗುರುತು ಈ ಕೋಟೆಗೆ ಇದೆ. ಇಂತಹ ಐತಿಹಾಸಿಕ ಸ್ಥಳಕ್ಕೆ ಹಮ್ಮಿಕೊಂಡಿರುವ
ಈ ಚಾರಣದಲ್ಲಿ ವಾಕಿಂಗ್ ಗೆಳೆಯರ ಬಳಗದ ಬಸವರಾಜ ಹಳ್ಳಿಕೇರಿ, ಗೋಣೆಪ್ಪ ವಾಣಿ, ಮಂಜುನಾಥ ತಿಮ್ಮಲಾಪುರ, ಪ್ರಕಾಶ್ ತಗಡಿನಮನಿ, ಸಿದ್ದಪ್ಪ ಭಾಷಿಂಗದಾರ, ಯಮುನ ನಾಯಕ, ವಿದ್ಯಾದರ, ಚೇತನ್ ಕುಮಾರ, ಶಿವಾನಂದ, ಅವಿನಾಶ್, ಕಳಕಯ್ಯ, ಸದಾಶಿವ, ಯೋಗೇಂದ್ರನಾಥ ಅಲವಂಡಿ ಎಂ.ಎ. ಗೌಡಪ್ಪ, ನಾಗರಾಜ್ ಕಂಬಳಿ, ನರಸಿಂಹ, ಅಮರೇಶ್, ಸಿದ್ದಲಿಂಗಯ್ಯ ಹಿರೇಮಠ ಹಾಗೂ ಇತರರು ಪಾಲ್ಗೊಂಡಿದ್ದರು.
ಇಂತಹ ಉತ್ತಮವಾದ ಕೋಟೆಗೆ ನೀವು ಒಮ್ಮೆ ಭೇಟಿ ನೀಡಿ.

  • ಡಾ. ನರಸಿಂಹ ಗುಂಜಹಳ್ಳಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!