ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಭಿನಂದನೆಗಳು

ಶರಣಪ್ಪ ಗೌರಿಪುರ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರಟಗಿ ತಾಲೂಕ ಸಿದ್ದಾಪುರದಲ್ಲಿ ಸಸಿ ನೆಟ್ಟು , ಗೌರವ ಸನ್ಮಾನಿಸಲಾಯಿತು.

ಕಾರಟಗಿ : ಪ್ರಸ್ತುತ ಆರಾಳ ಶಾಲೆಯಲ್ಲಿನ ಗಮನಾರ್ಹ ಶೈಕ್ಷಣಿಕ ಸಾಧನೆ ಹಾಗೂ ಈ ಹಿಂದಿನ ಸಿದ್ದಾಪುರ ಶಾಲೆಯಲ್ಲಿನ ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಗಳು, ಇಲಾಖೆಯ ವಿನೂತನ‌ ಕಾರ್ಯಕ್ರಮಗಳಲ್ಲಿ ರಾಜ್ಯ ಹಂತದವರೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಸಲ್ಲಿಸಿದ ಸೇವೆ, ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಪರಿಕರಗಳನ್ನು ಬಳಸಿಕೊಂಡು ಪರಿಣಾಮಕಾರಿ ಕಲಿಕೆಗಾಗಿ ಮಾಡಿದ ಪ್ರಾಮಾಣಿಕ ಪ್ರಯತ್ನ, ಕರ್ನಾಟಕ ದರ್ಶನದಂತಹ ಇಲಾಖಾ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶಕರಾಗಿ ನಿರ್ವಹಿಸಿದ ಜವಾಬ್ದಾರಿ, ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳು ರಾಜ್ಯಮಟ್ಟದವರೆಗೆ ಗಮನ ಸೆಳೆಯುವಂತೆ ಸಹೋದ್ಯೋಗಿಗಳ ಸಹಕಾರದಿಂದ ತಾವು ನೀಡಿದ ಮಾರ್ಗದರ್ಶನ, ಸಮುದಾಯದ ಸಹಕಾರದೊಂದಿಗೆ ಶಾಲೆಗಾಗಿ ಸಂಪಾದಿಸಿದ ಸಂಪನ್ಮೂಲಗಳ ಕ್ರೋಢೀಕರಣ, ಪರಿಸರ ಕಾಳಜಿಯುಳ್ಳ ಸ್ಥಳೀಯ ಸಂಘಟನೆಗಳದ ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಸಿದ್ದಾಪುರ, ಶ್ರೀ ರಾಮನಗರ, ಡಣಾಪುರದ ಪರಿಸರ ಪ್ರೇಮಿಗಳೊಂದಿಗೆ ಕಾಯಾ, ವಾಚಾ, ಮನಸಾ ಕೈಜೋಡಿಸಿದ ಪರಿ, ಚಾರಣ ಬಳಗಗಳೊಂದಿಗೆ ಸ್ಥಳೀಯ ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಹಾಗೂ ಪ್ರಸರಣೆಯಲ್ಲಿ ತೋರಿದ ವೃತ್ತಿಪರತೆ, ಸೇವೆಗೆ ಸೇರಿ 20 ವರ್ಷಗಳಾಗುತ್ತಾ ಬಂದಾಗ್ಯೂ ಇನ್ನೂ ಬತ್ತದ ಕ್ರಿಯಾಶೀಲತೆ ಹಾಗೂ ವೃತ್ತಿ ಬದ್ಧತೆ…

ಹೀಗೆ ಹತ್ತು ಹಲವು ವಿಶೇಷತೆಗಳಿಗೆ ಸಂದ ಗೌರವ..ಈ ಪ್ರಶಸ್ತಿ..

ಪ್ರಶಸ್ತಿಯ ಪ್ರತಿಫಲಾಪೇಕ್ಷೆಯೇ ಇಲ್ಲದೇ ಕೈಗೊಂಡ ಈ ಎಲ್ಲಾ ಕಾರ್ಯಗಳು ಸಾರ್ಥಕ್ಯ ಹೊಂದಲು ಹಾಗೂ ಈ ಮುಂದಿನ ಸೇವೆ ಇನ್ನೂ ಹೆಚ್ಚು ಅಭಿಕ್ಷಮತೆಯಿಂದ ಕೂಡಿರಲು ಪ್ರೇರಣೆಯಾಗಲು ಈ ಪ್ರಶಸ್ತಿ.

ಪೋಲಿಸ್ ಹುದ್ದೆ ತ್ಯಜಿಸಿ

ಪೋಲಿಸ್ ಹುದ್ದೆ ತ್ಯಜಿಸಿ ಬಂದಾಗ ಆಗಿರಬಹುದಾದ ಸಣ್ಣ ಬೇಸರ ಮಾಯವಾಗಿಸಲು.

ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಯು ಕೇವಲ ಒಂದೆರಡು ಅಂಕಗಳಲ್ಲಿ ತಪ್ಪಿದಾಗ ಆದ ನೋವಿಗೆ ಮುಲಾಮು ಈ ಪ್ರಶಸ್ತಿ.

ಸೇವಾ ಹಿರಿತನ ಹಾಗೂ ಅರ್ಹತಾದಾಯಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಧ್ಯದಲ್ಲಿಯೇ ಪಿ.ಯು.ಕಾಲೇಜು ಉಪನ್ಯಾಸಕರಾಗಿ ಬಡ್ತಿ ಹೊಂದಲಿರುವ ತಮಗೆ ಗೌರವಪೂರ್ವಕವಾಗಿ ಬೀಳ್ಕೊಡಲು ಈ ಪ್ರಶಸ್ತಿ.

ಪ್ರಶಸ್ತಿಗಳು ಪ್ರೇರಣೆಯೊಂದಿಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ. ಆ ಜವಾಬ್ದಾರಿಯನ್ನು ನಿಭಾಯಿಸುವ ಹೆಚ್ಚಿನ ಶಕ್ತಿಯನ್ನು ಆ ಸೃಷ್ಟಿಕರ್ತ ತಮಗೆ ದಯಪಾಲಿಸಲಿ…
ತಮ್ಮ ಸೇವೆ-ಸಾಧನೆಗಳು ಹೀಗೆಯೇ ಮುಂದುವರೆಯಲಿ.
ಮೊಹಮ್ಮದ್ ರಫೀಕ್ ಜಾಗಿರ್ದಾರ್… ಸಿದ್ದಾಪುರ ಗೆ ಸೇರಿ 20 ವರ್ಷಗಳಾಗುತ್ತ ಬಂದಾಗ್ಯೂ ಇನ್ನೂ ಬತ್ತದ ಕ್ರಿಯಾಶೀಲತೆ ಹಾಗೂ ವೃತ್ತಿ ಬದ್ಧತೆ…

ಹೀಗೆ ಹತ್ತು ಹಲವು ವಿಶೇಷತೆಗಳಿಗೆ ಸಂದ ಗೌರವ..ಈ ಪ್ರಶಸ್ತಿ..

ಪ್ರಶಸ್ತಿಯ ಪ್ರತಿಫಲಾಪೇಕ್ಷೆಯೇ ಇಲ್ಲದೇ ಕೈಗೊಂಡ ಈ ಎಲ್ಲಾ ಕಾರ್ಯಗಳು ಸಾರ್ಥಕ್ಯ ಹೊಂದಲು ಹಾಗೂ ಈ ಮುಂದಿನ ಸೇವೆ ಇನ್ನೂ ಹೆಚ್ಚು ಅಭಿಕ್ಷಮತೆಯಿಂದ ಕೂಡಿರಲು ಪ್ರೇರಣೆಯಾಗಲು ಈ ಪ್ರಶಸ್ತಿ..

ಪೋಲಿಸ್ ಹುದ್ದೆ ತ್ಯಜಿಸಿ

ಪೋಲಿಸ್ ಹುದ್ದೆ ತ್ಯಜಿಸಿ ಬಂದಾಗ ಆಗಿರಬಹುದಾದ ಸಣ್ಣ ಬೇಸರ ಮಾಯವಾಗಿಸಲು..

ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಯು ಕೇವಲ ಒಂದೆರಡು ಅಂಕಗಳಲ್ಲಿ ತಪ್ಪಿದಾಗ ಆದ ನೋವಿಗೆ ಮುಲಾಮು ಈ ಪ್ರಶಸ್ತಿ.

ಸೇವಾ ಹಿರಿತನ ಹಾಗೂ ಅರ್ಹತಾದಾಯಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಧ್ಯದಲ್ಲಿಯೇ ಪಿ.ಯು.ಕಾಲೇಜು ಉಪನ್ಯಾಸಕರಾಗಿ ಬಡ್ತಿ ಹೊಂದಲಿರುವ ತಮಗೆ ಗೌರವಪೂರ್ವಕವಾಗಿ ಬೀಳ್ಕೊಡಲು ಈ ಪ್ರಶಸ್ತಿ.

ಪ್ರಶಸ್ತಿಗಳು ಪ್ರೇರಣೆಯೊಂದಿಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ. ಆ ಜವಾಬ್ದಾರಿಯನ್ನು ನಿಭಾಯಿಸುವ ಹೆಚ್ಚಿನ ಶಕ್ತಿಯನ್ನು ಆ ಸೃಷ್ಟಿಕರ್ತ ತಮಗೆ ದಯಪಾಲಿಸಲಿ…
ತಮ್ಮ ಸೇವೆ-ಸಾಧನೆಗಳು ಹೀಗೆಯೇ ಮುಂದುವರೆಯಲಿ.
ಮೊಹಮ್ಮದ್ ರಫೀಕ್ ಜಾಗಿರ್ದಾರ್ ಸಿದ್ದಾಪುರ .

ಈ ವೇಳೆಯಲ್ಲಿ ಈ ಭಾನುವಾರದ ಹಸಿರು ಸೇವೆಗೈಯಲ್ಲಿ ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ತಂಡಗಳಾದ ಸಿದ್ದಾಪುರ. ಶ್ರೀರಾಮ ನಗರ. ಡಣಾಪುರ ತಂಡಗಳ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಆತ್ಮೀಯ ಸ್ನೇಹಿತರಾದ ಶರಣಪ್ಪ ಗೌರಿಪುರ ಪರಿಸರ ಪ್ರೇಮಿಗಳು ಇವರಿಗೆ ಸನ್ಮಾನಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಸಿರು ಬಳಗದ ಸದಸ್ಯರಾದ ಮಹಮ್ಮದ್ ರಫಿಕ್ ಹನುಮೇಶ್ ಡಣಾಪುರ ಗದ್ದಪ್ಪ ಜಿ ಕುರಿ ಚನ್ನಬಸವನಗೌಡ ನಾಗರಾಜ ಭೋವಿ ಬಸವರಾಜ ಡಣಾಪುರ ಅಯ್ಯನಗೌಡ ಕೆ ಬಸವರಾಜ ಗುಂಡದ ಅರುಣ್ ಕುಮಾರ್ ಗವಿಸಿದ್ದ ನಿರುಪಾದಿ ಶ್ರೀನಿವಾಸ್ ಆಕಾಶ ಉಪಸ್ಥಿತಿರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!