ಬೆಂಗಳೂರು:ಕಳೆದ ಐದು ತಿಂಗಳ ಹಿಂದೆ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದು ಇಡೀ ನಾಡಿನಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಘಟಕಗಳನ್ನು ಹೊಂದಿರುವ ಕಾನಿಪ ಧ್ವನಿ ಸಂಘಟನೆಯ ರಾಜ್ಯ ಹಾಗೂ ಬೆಂಗಳೂರು ನಗರ ಜಿಲ್ಲಾ ಕಾರ್ಯಾಲಯದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತರು,ಸಾಹಿತಿಗಳು ಹಾಗೂ ಕನ್ನಡ ಚಳುವಳಿ ಹೋರಾಟಗಾರರಾದ ಜಾಣಗೆರೆ ವೆಂಕಟರಾಮಯ್ಯ ನಿನ್ನೆ ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿ ಉದ್ಗಾಟಿಸಿದರು.ಮುಖ್ಯ ಅತಿಥಿಗಳಾಗಿ ಕನ್ನಡ ಕಟ್ಟಾಳು ಹೋರಾಟಗಾರರಾದ ಕ.ರ.ವೇ.ಯ ರಾಜ್ಯಾಧ್ಯಕ್ಷರು ಪ್ರವೀಣ್ ಶೆಟ್ಟಿ,ಮಾಜಿ ಶಾಸಕರಾದ ಡಿ.ಎಸ್.ವೀರಯ್ಯ,ಕರ್ನಾಟಕ ಪ್ರೆಸ್ ಕ್ಲಬ್ ನ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಆಚಾರಿ,ನಾಡಿನ ಹಿರಿಯ ಪತ್ರಕರ್ತರುಗಳಾದ ಲಕ್ಷ್ಮೀಶ್ ಕಾಟುಕುಕ್ಕೆ,ಜಗಳೂರು ಲಕ್ಷ್ಮಣರಾವ್,ಪ್ರಜಾಪ್ರಗತಿ ದಿನಪತ್ರಿಕೆಯ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರಾದ ವಿಜಯ ಪತ್ತಾರ್,ವಿ.ಕೆ.ಪ್ರಾಸಸ್ ನ ಮಾಲಿಕರಾದ ಪ್ರಸನ್ನ ಕುಮಾರ್,ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಶಿವಪ್ರಸಾದ್ ಹಾಗೂ ಬಳ್ಳಾರಿ ಜಿಲ್ಲಾ ವಿಜಿಲೆನ್ಸ್ ಮೆಂಬರಾದ ಕಂದಕೂರು ರಾಮುಡು ಹಾಗೂ ಕಾನಿಪ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಪ್ರ.ಕಾರ್ಯದರ್ಶಿಗಳಾದ ಎನ್.ಕುಮಾರ್ ಉಪಸ್ಥಿತರಿದ್ದು ಉದ್ಘಾಟನಾ ಸಮಾರಂಭಕ್ಕೆ ಮೆರಗನ್ನು ತಂದರು.ಜಾಣಗೆರೆ ವೆಂಕಟರಾಮಯ್ಯನವರು ತಮ್ಮ ಉದ್ಗಾಟನ ಭಾಷಣದಲ್ಲಿ ಬಂಗ್ಲೆಯವರು ದಿಟ್ಟತನದಿಂದ ರಾಜ್ಯ ಸಂಘವನ್ನು ಕಟ್ಟುವತ್ತಾ ಸಾಗಿದ್ದಾರೆ ಅವರಿಗೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ,ಪರ್ಯಾಯ ಸಂಘಟನೆಗಳು ಇದ್ದಾಗ ಮಾತ್ರ ಬೇರೆ ಸಂಘಟನೆಯವರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸುತ್ತಾರೆ ಹಿಂದೆ ಸಂಸ್ಥಾಪಕ ಅಧ್ಯಕ್ಷನಾಗಿ ನಾನು ಕಟ್ಟಿದಂತ ಕರವೇ ಯಲ್ಲಿ ಇಂದಿನ ರಾಜ್ಯ ಮುಖಂಡರು ನನ್ನ ಕುರಿತು ಎಲ್ಲೂ ಪ್ರಸ್ತಾಪ ಮಾಡದಿರುವುದು ನೋವಿನ ಸಂಗತಿ ಆದರೆ ಪ್ರವೀಣ್ ಶೆಟ್ಟಿಯವರು ಮಾತ್ರ ನಾನು ನಾಡಿಗೆ ಹೆಮ್ಮೆಯಿಂದ ಸ್ಥಾಪಿಸಿದಂತ ಕರವೇಯ ಸಂಸ್ಥಾಪಕ ಅಧ್ಯಕ್ಷರೆಂದು ಪ್ರತಿ ಸಮಾರಂಭದಲ್ಲೂ ನೆನೆಯುವುದನ್ನು ಈ ಸಂದರ್ಭದಲ್ಲಿ ಸ್ಮರಿಸುವುದರ ಜೊತೆಗೆ ಧ್ವನಿ ಸಂಘಟನೆಯು ಯಾವುದಕ್ಕೂ ಅಂಜದೆ ನಿರ್ಭಯದಿಂದ ಮಧ್ಯಮ ಹಾಗೂ ಬಡ ಪತ್ರಕರ್ತರಿಗೆ ನೆರಳಿನಂತೆ ಸಾಗಿ ಅವರುಗಳಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳು ಸಿಗುವವರೆಗೂ ಹೋರಾಟ ಸಾಗಲೇಬೇಕೆಂದರು.
ಕರವೇ ರಾಜ್ಯಧ್ಯಕ್ಷರಾದ ಪ್ರವೀಣ್ ಶೆಟ್ಟಿಯವರು ಮಾತನಾಡಿ ಬಂಗ್ಲೆ ನಮ್ಮ ಸಂಘಟನೆಯಲ್ಲಿ ಅನೇಕ ವರ್ಷಗಳ ಕಾಲ ಕನ್ನಡದ ನಾಡು ನುಡಿಗಾಗಿ ಈ ಹಿಂದೆ ದುಡಿದಿದ್ದಾರೆ ಪವಿತ್ರವಾದ ಮಾಧ್ಯಮದ ರಾಜ್ಯ ಕಛೇರಿ ಉದ್ಘಾಟನೆಯನ್ನು ಒಬ್ಬ ಒಳ್ಳೆಯ ವ್ಯಕ್ತಿಯಾದ ಜಾಣಗೆರೆ ಯವರ ಮೂಲಕ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಬಂಗ್ಲೆಯವರು ಪತ್ರಕರ್ತರ ಪರ ಮಾಡುವ ಯಾವುದೇ ಹೋರಾಟಕ್ಕೂ ನಮ್ಮ ಕರವೇ ಸಂಘಟನೆಯಿಂದ ರಾಜ್ಯಾಧ್ಯಂತ ಬೆಂಬಲವಿರುತ್ತದೆ ಎಂದರು ಕಾರ್ಯಕ್ರಮದ ನಿರೂಪಣೆಯನ್ನು ಮೌರ್ಯ ಪೂಜಾರ್ ನಿರ್ವಹಿಸಿದಂತ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಅನೇಕ ಮಹಿಳಾ ಪತ್ರಕರ್ತರು,ಸಂಪಾದಕರು,ಹಿತೈಷಿಗಳು ಹಾಗೂ ಬೇರೆ ಜಿಲ್ಲೆಗಳಿಂದ ಜಿಲ್ಲಾಧ್ಯಕ್ಷರುಗಳು ಸದಸ್ಯರುಗಳು ಆಗಮಿಸಿ ಕಾರ್ಯಕ್ರಮದ ಯಶಸ್ವಿಯಲ್ಲಿ ಪಾಲ್ಗೊಂಡರು.





















One Response
ಸಂಭಾವಿತರು, ಪರಿಪೂರ್ಣ ವ್ಯಕ್ತಿತ್ವದ ಜಾಣಗೆರೆಯವರ ಕನ್ನಡ ಸೇವೆ ನೆನೆಯದೆ ಕನ್ನಡ ಕಾರ್ಯಕ್ರಮಗಳು ಪೂರ್ಣವಲ್ಲ. ಅವರೂ ಒಂದು ರೀತಿ ಎಲೆ ಮರೆ ಫಲವಾದಂತಾಗಿದೆ. ಆದರೆ ವಿಷಯ ತಿಳುದವರಾದರೂ ಸ್ಮರಿಸುವುದೆ ಅವರಿಗೆ ತೋರುವ ಗೌರವ.
ವೆಂಕಣ್ಣ
(ವೈ.ಪಿ.ವೆಂಕಟಪತಿ)
ಕೃಷ್ಣಾಪುರ