ವಿಜಯನಗರ ಜಿಲ್ಲೆ ಕೊಟ್ಟೂರು;ಪಟ್ಟಣದ ವಾಲ್ಮೀಕಿ ನಗರ ಕೆಳಗೇರಿ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಕರ್ನಾಟಕ ಜನಪರ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಸಲಾಯಿತು
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಅಧ್ಯಕ್ಷ ನಗರುಲ್ ನರಸಿಂಹಪ್ಪ ನವರು ನಮ್ಮ ಸಂಘಟನೆ ನೊಂದವರ ಮತ್ತು ಬಡವರ ಹಿತ ರಕ್ಷಣೆ ಕಾಪಾಡುವ ಉದ್ದೇಶ ವಾಗಿದೆ ಇಲ್ಲಿ ಯಾವುದೇ ಜಾತಿ ಮತ ಭೇದ ಭಾವ ಮಾಡದೆ ಸರ್ವರಿಗೂ ಸಮಾನ ಅವಕಾಶ ಇದೆ ನಮ್ಮ ಸಂಘದ ಪ್ರತಿ ಸದಸ್ಯರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ವಸತಿ ಯನ್ನು ಕಲ್ಪಿಸಿಕೊಡಲು ಸದಾ ಸಿದ್ದರಿದ್ದೇವೆ ಎಂದು ಹೇಳಿದರು
ವಿಜಯ ನಗರ ಜಿಲ್ಲಾಧ್ಯಕ್ಷರನ್ನಾಗಿ. ಸಣ್ಣ ಪವಡಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ. ಶಿವರಾಜ್ ಕೆ, ಕಾರ್ಯದರ್ಶಿ ಸಿದ್ದಿಕ್, ಕೊಟ್ಟೂರು ತಾಲೂಕು ಅಧ್ಯಕ್ಷರನ್ನಾಗಿ ತಸ್ಲಿಂ ಬಾನು, ಆಯ್ಕೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳ ಉಪಸ್ಥಿತರಿದ್ದರು




















