ನಿರಂತರ ಜನ ಸೇವೆಯಲ್ಲಿ ತೊಡಗಿರುವ ಸಂಸ್ಥೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಅಂಗಸಂಸ್ಥೆ ಎಸ್.ಡಿ.ಎಮ್ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಕುಲಪತಿಗಳಾದ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು, ಉಪಕುಲಪತಿಗಳಾದ ಡಾ.ನಿರಂಜನಕುಮಾರ,ಆಡಳಿತ ನಿರ್ದೇಶಕರಾದ ಶ್ರೀ ಸಾಕೇತ ಶೆಟ್ಟಿ,ಪ್ರಾಂಶುಪಾಲರಾದ ಡಾ.ಬಲರಾಮ ಡಿ ನಾಯಕ ಹಾಗೂ ಮಕ್ಕಳ ದಂತ ಚಿಕಿತ್ಸೆ ವಿಭಾಗದ ಮುಖ್ಯಸ್ಥೆಯಾದ ಡಾ.ಶೃತಿ ಬಿ ಪಾಟೀಲ,ಸಿಬ್ಬಂದಿಯವರಾದ ಡಾ.ಪ್ರಿಯಾ ಮೆಹರವಾಡೆ ಹಾಗೂ ತಂಡದ ವತಿಯಿಂದ ಇತ್ತೀಚೆಗೆ ಹುಬ್ಬಳ್ಳಿಯ ಸರಕಾರಿ ಆಸ್ಪತ್ರೆಯೊಂದರಲ್ಲಿ ಅಡಿಕೆ ಮತ್ತು ತಂಬಾಕು ಸೇವನೆಯ ದುಷ್ಪಪರಿಣಾಮದ ಕುರಿತು ತಪಾಸಣೆ ಶಿಬಿರ ಮತ್ತು ಕೊನೆ ಉಸಿರು” ಎಂಬ ಬೀದಿ ನಾಟಕವನ್ನು ಆಯೋಜಿಸಲಾಗಿತ್ತು.
ಉತ್ತರಕರ್ನಾಟಕ ಭಾಗದ ಜನ ಸಾಮಾನ್ಯರಲ್ಲಿ ಹಾಗೂ ಮಕ್ಕಳಲ್ಲಿ ತಂಬಾಕು ಸೇವನೆಯು ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದಾಗುವ ವಿವಿಧ ರೀತಿಯ ಹಾನಿಕಾರಕ ಸಮಸ್ಯೆಗಳೆಂದರೆ ಹಲ್ಲುಗಳ ಮಾಸುತ್ತದೆ, ಹಲ್ಲುಗಳು ಸವಿಯುತ್ತವೆ ಮತ್ತು ವಸಡಿನ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಮುಖದ ಬಣ್ಣ ಚೆಂದ ಹಾಳಾಗುತ್ತದೆ. ಬಾಯಿಯಲ್ಲಿ ಹುಣ್ಣು, ಬಾಯಿಯ ದುರ್ವಾಸನೆ, ಕ್ಯಾನರ ಪೂರ್ವ ಬಾಯಿಯ ಖಾಯಿಲೆಗಳು, ಹೃದಯದ ಖಾಯಿಲೆಗಳು, ಉಬ್ಬಸ, ಬಂಜೆತನ, ಅನ್ನನಾಳದ ಕ್ಯಾನರ ಹಾಗೂ ಶ್ವಾಸಕೋಶದ ಕ್ಯಾನ್ಸರ ಉಂಟಾಗುತ್ತದೆ.
ಈ ವಿಷೇಶ ತಿಳುವಳಿಕೆಯನ್ನು ಜನರಿಗೆ ತಪಾಸಣೆ ಮತ್ತು ಬೀದಿ ನಾಟಕದ ಮೂಲಕ ನೀಡಲಾಯಿತು. ಇದು ಜನರಲ್ಲಿ ಆಸಕ್ತಿ ಮತ್ತು ಜಾಗೃತಿ ಮೂಡಿಸುವದರಲ್ಲಿ ಅತ್ಯಂತ ಯಶಸ್ವಿಯಾಯಿತು.
ವರದಿ:ಯೂಸುಫ್ ಎನ್




















