ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಿಮಿತ್ತವಾಗಿ ಗ್ರಾಮಕ್ಕೆ ಆಗಮಿಸಿದ ರಥ
ಯಾತ್ರೆಗೆ ಅದ್ದೂರಿ ಸ್ವಾಗತವನ್ನು ಕೋರಿ ಅಂಬೇಡ್ಕರ್ ಪ್ರತಿಮೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಮಾಲಾರ್ಪಣೆ,ಪುಷ್ಪಾರ್ಚನೆ ಮಾಡುವ ಮೂಲಕ ರಥವನ್ನು ಬರಮಾಡಿಕೊಂಡರು.
ಮಕ್ಕಳು ಸಂವಿಧಾನ ಪೀಠಿಕೆಯ ಘೋಷಣೆಗಳನ್ನು ಕೂಗುತ್ತಾ ಆ ಕಾರ್ಯಕ್ರಮಕ್ಕೆ ಮೆರಗು ನೀಡಿ ಕಳಸವನ್ನು ಹೊತ್ತು ಸಾಗಿದರು.
ಗ್ರಾಮಸ್ಥರು ಇದರಲ್ಲಿ ಪಾಲ್ಗೊಂಡು ಸಂವಿಧಾನದ ಬಗ್ಗೆ ರಥಯಾತ್ರೆಯಲ್ಲಿ ತೋರಿಸಿರುವ ಜಾಗೃತಿ ಚಿತ್ರಗಳನ್ನು ವೀಕ್ಷಣೆ ಮಾಡಿದರು ಮತ್ತು ಬಂದಂತಹ ಅಧಿಕಾರಿಗಳು ಸಂವಿಧಾನ ಘೋಷಣೆಗಳನ್ನು ನೆರೆದಿದ್ದ ಜನರಿಗೆ ಓದಿಸಿ ಅವರಿಗೂ ಸಹ ಹೇಳುವಂತೆ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮಕ್ಕೆ ಶ್ರೀ ಎ ಬಿ ಚಂದ್ರಶೇಖರ್ ರವರು ಸಹಾಯಕ ನಿರ್ದೇಶಕರು ಗ್ರೇಟ್2 ಪಿರಿಯಾಪಟ್ಟಣ ಗ್ರಾಮ ಲೆಕ್ಕಾಧಿಕಾರಿ ಪರಶುರಾಮ್ ರವರು,
ಪಂಚಾಯತಿ ಅಧ್ಯಕ್ಷರಾದ ಗೌರಮ್ಮನವರು, ಪಂಚಾಯತಿ ಅಭಿವೃದ್ಧಿ ಅಧ್ಯಕ್ಷರಾದ ಅನಿಲ್ ಕುಮಾರ್ ರವರು,ಕಾರ್ಯದರ್ಶಿಯವರಾದ ಗಣೇಶ್ ರವರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಕಾಂತಾಚಾರ್ ರವರು,ಪ್ರೌಢಶಾಲೆ ಮುಖ್ಯ ಶಿಕ್ಷಕಿಯಾದ ಲತಾ ರವರು,ಗ್ರಾಮ ಪಂಚಾಯತಿ ಎಲ್ಲಾ ಅಧಿಕಾರಿ ವೃಂದದವರು ಗ್ರಂಥಾಲಯ ಮೇಲ್ವಿಚಾರಕರು,ತಾಲೂಕು ಪಂಚಾಯಿತಿ ಅಧಿಕಾರಿ ವರ್ಗದವರು ಗ್ರಾಮಸ್ಥರು ಯುವಕರು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ-ಹೆಚ್.ಆರ್.ಶಂಕರ್,ಹಂಡಿತವಳ್ಳಿ




















