ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಮ್ಮೂರ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ೩೬೨ ನೆಯ ಶಿವಾನುಭವ ಗೋಷ್ಠಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಹಾಶಿವಶರಣೆ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುದರ್ಶಿ ಅಂಗವಾಗಿ ೩೬೨ ನೆಯ ಶಿವಾನುಭವ ಗೋಷ್ಠಿ ಜರುಗಿತು.”ಸತ್ಯ ಮೇವ ಜಯತೆ” ಈ ಚಿಂತನ ವಿಷಯ ಕುರಿತು ಶಿವಾನುಭವ ಗೋಷ್ಟಿಯಲ್ಲಿ ಹರ್ಷಾನಂದ ಗುರೂಜಿ ಅವರು ಮಾತನಾಡಿ ಸತ್ಯ ನಿಷ್ಠೆಯಿಂದ ಬಾಳುವದನ್ನು ಕಲಿಯಬೇಕು,ಮೋಸ,ವಂಚನೆಯಿಂದ ದೂರವಿದ್ದು ಧರ್ಮದ ಹಾದಿಯಲ್ಲಿ ಸಾಗಬೇಕು ಎಂದರು.ಪರಸರ ರಕ್ಷಣೆ ನಮ್ಮೆಲ್ಲರ ಹೊಣೆ,ಪರಿಸರ ದಿನಾಚರಣೆ ನಿಮಿತ್ತವಾಗಿ ಆಚರಣೆ ಮಾಡಲಾರದೆ, ನಮ್ಮ ಮಕ್ಕಳ ಹುಟ್ಟು ಹಬ್ಬ,ಜವಳ,ಮದುವೆ ಇತರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಿಡಮರಗಳನ್ನು ಬೆಳೆಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡಾಗ ಪರಿಸರ ಉಳಿಯುವದಕ್ಕೆ ಸಾಧ್ಯವಾಗುತ್ತದೆ ಎಂದು ಶ್ರೀ ಭೀಮಾಂಬಿಕಾ ಶಿವಾನುಭವ ಸೇವಾ ಸಮಿತಿಯ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆಧ್ಯಾತ್ಮ ಚಿಂತನೆಯಿಂದ,ಸತ್ಸಂಗದಿಂದ ನಾವು ಹತ್ತಿರವಿದ್ದಾಗ ನಮ್ಮಲ್ಲಿರುವ ಆಸೆ ದೂರಾಸೆಗಳು ದೂರವಾಗಿ ನೆಮ್ಮದಿ ಸಿಗಲು ಸಾಧ್ಯ ಎಂದು ಸಮಾಜ ಸೇವಕ ಬಸವರಾಜ ಬೂದಿಹಾಳ ಅವರು ಮಾತನಾಡಿದರು.ಧರ್ಮ ದೇವತೆಯ ಶಕ್ತಿ ಅಪಾರವಾದದು,ಈ ತಾಯಿಯ ಪವಾಡಗಳಿಂದ ಭಕ್ತರು ತಮ್ಮ ಕಷ್ಟಗಳನ್ನು ದೂರಮಾಡಿಕೊಂಡಿದ್ದಾರೆ ಶ್ರೀ ಭೀಮಾಂಬಿಕಾ ದೇವಿಯನ್ನು ಸದಾ ಸ್ಮರಣೆ ಮಾಡಿ ಮುಕ್ತಿ ಪಡೆಯಬೇಕು ಎಂದು ಕೊಟ್ರೇಶ ಶ್ರೀಗಿರಿ ಅವರು ಹೇಳಿದರು.ಭಕ್ತಿಯಿಂದ ಸೇವೆ ಸಲ್ಲಿಸುವ ಮನೋಭಾವನೆ ಭಕ್ತರಲ್ಲಿ ಇದ್ದಾಗ ಮಠ ಮಂದಿರಗಳು ಬೆಳೆಯುವಕ್ಕೆ ಸಾಧ್ಯವಾಗುತ್ತದೆ ಎಂದು ಮುಖಂಡ ಹುಲಗಪ್ಪ ಬಂಡಿವಡ್ಡರ ಅವರು ಮಾತನಾಡಿದರು.
ಶ್ರೀ ಮಠದ ಒಡಯರಾದ ಹನುಮಂತಪ್ಪಜ್ಜ ಧರ್ಮರ, ಶರಣಯ್ಯ.ಗು.ಹಿರೇಮಠ ಸಾನಿದ್ಯ ವಹಿಸಿದ್ದರು. ಪ್ರಾರಂಭದಲ್ಲಿ ನವಜೀವನ ಸಮಿತಿ ಸದಸ್ಯರು ಶ್ರೀ ಮಂಜುನಾಥ ಸ್ವಾಮಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿಯಿಂದ ಭಜನೆಮಾಡಿ ಪ್ರಾರ್ಥನೆ ಸಲ್ಲಿಸಿದರು.ಈ ವೇಳೆ ಬಸಪ್ಪ ಡಗ್ಗಿ,ಈರಪ್ಪ ರಾವಣಕಿ,ಶರಣೆಗೌಡ ದಮ್ಮೂರ,ರುದ್ರಪ್ಪ ಹರಿಜನ,ಭೀಮಣ್ಣ ಚಿಕ್ಕಗೌಡ್ರ, ಭೀಮಣ್ಣ ಜರಕುಂಟಿ,ಗಣೇಶ ನಿಡಗುಂದಿ,ಸಂಗೀತ ಬಳಗದ ನೀಲಕಂಠಪ್ಪ ರೋಡ್ಡರ,ಕಳಕಪ್ಪ ಹಡಪದ , ಯಮನೂರಪ್ಪ ಹಳ್ಳಿಕೇರಿ ಸೇರಿದಂತೆ ಇತರರು ಭಾಗವಹಿಸಿದ್ದರು ನಂತರ ಭಕ್ತರಿಂದ ಅನ್ನ ಸಂತರ್ಪಣೆ ಜರುಗಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!