ಕೊಪ್ಪಳ:ವಿದ್ಯಾರ್ಥಿಗಳು ಕಾಲೇಜು ಕಲಿಕೆಯ ಹಂತದಲ್ಲಿಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಏಕೆಂದರೆ ಪೇಟೆಯಲ್ಲಿ ಖರೀದಿಸಲಾಗದ ನೆಮ್ಮದಿ ಅದರಲ್ಲಿ ದೊರೆಯುತ್ತದೆ ಎಂದು ಉಪನ್ಯಾಸಕ ಸಂತೋಷ ನಾಯಕ ಹೇಳಿದರು.
ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್.ಎಸ್ ಘಟಕವು ಗುರುವಾರದಂದು ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಮೂರನೆಯ ದಿನದ ಕಾರ್ಯಕ್ರಮವನ್ನು ಗ್ರಾಮದ ಮಾರುತೇಶ್ವರ
ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ಮನುಷ್ಯನ ಸಾರ್ಥಕತೆ ಇದೆ. ಬಾಬಾ ಆಮ್ಟೆ, ಮದರ್ ತೆರೇಸಾ ಮತ್ತು ಮಹಾತ್ಮಾ ಜ್ಯೋತಿ ಬಾ ಫುಲೆಯವರು ಸದಾ ಅನುಕರಣೀಯರು. ಹಾಗಾಗಿ ಸಮಾಜ ಸೇವೆಗೆ ಯುವಕರು ಮತ್ತು ಯುವತಿಯರು ಕಂಕಣ ಬದ್ಧರಾಗಿ ನಿಲ್ಲಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ
ಭೂಗೋಳ ಶಾಸ್ತ್ರದ ಉಪನ್ಯಾಸಕ ಡಾ. ಪ್ರಕಾಶ ಹುಲ್ಲೂರು ಮಾತನಾಡಿ ಮನುಷ್ಯ ಸದಾ ಚಲನಶೀಲ ವ್ಯಕ್ತಿಯಾಗಿರಬೇಕು. ಆರೋಗ್ಯ ಕಾಪಾಡಿಕೊಂಡು ಜೀವನ ನಿರ್ವಹಣೆ ಮಾಡಬೇಕು ಇಲ್ಲವೆಂದರೆ ಬದುಕು ದುಸ್ತರವಾಗಬಲ್ಲುದು ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸೆಂಟ್ ಪಾಲ್ ಕಾಲೇಜಿನ ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ಬಸವರಾಜ ಜಿ ಸಂಕನಗೌಡರ್ ಮಾತನಾಡಿ ಕಲಿಕೆಯ ಹಂತದಲ್ಲಿಯೇ ಸೇವಾ ಮನೋಭಾವ ಕಲಿಯಬೇಕು. ನಿಸ್ವಾರ್ಥ ಸೇವೆ ಸಮಾಜಕ್ಕೆ ತಲುಪುತ್ತದೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಡಾ. ನರಸಿಂಹ ಗುಂಜಳ್ಳಿ,
ಭೂಗೋಳ ಶಾಸ್ತ್ರದ ಉಪನ್ಯಾಸಕ ಕಲ್ಲಯ್ಯ ವಿ ಪೂಜಾರ, ಇಂಗ್ಲೀಷ ವಿಷಯದ ಉಪನ್ಯಾಸಕರಾದ ಶಿವಪ್ಪ ಬಡಿಗೇರ, ಎಚ್ ಜಿ ಬೊಮ್ಮನಾಳ ಮತ್ತು ವಿರುಪಾಕ್ಷಪ್ಪ ಮುತ್ತಾಳ ವೇದಿಕೆಯ ಮೇಲೆ ಇದ್ದರು.
ಕಾರ್ಯಕ್ರಮ ನಿರೂಪಣೆ, ಸ್ವಾಗತ ಹಾಗೂ ವಂದನಾರ್ಪಣೆಯನ್ನು ವಿದ್ಯಾರ್ಥಿನಿಯರು ನಡೆಸಿಕೊಟ್ಟರು.




















