ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ-ಕುರುಮಯ್ಯ ಮತ್ತು ಅಂಕುಶ ದೊಡ್ಡಿ ಕಾದಂಬರಿಯಲ್ಲಿ ಸ್ತ್ರೀ ಶೋಷಣೆಯ ನೆಲೆಗಳು.ಡಾ.ಮುಮ್ತಾಜ್ ಬೇಗಂ ಅವರ
ಮಾರ್ಮಿಕ ಮಾತುಗಳು
ಕೊಪ್ಪಳ:ಮಹಿಳಾ ಪದವೀ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಕನ್ನಡ ವಿಭಾಗದಿಂದ ಕುರುಮಯ್ಯ ಮತ್ತು ಅಂಕುಶ ದೊಡ್ಡಿ ಕಾದಂಬರಿಯಲ್ಲಿ, ಸ್ತ್ರೀ ಶೋಷಣೆಯ ನೆಲೆಗಳು. ಎಂಬ ವಿಷಯದ ಬಗ್ಗೆ ಗಂಗಾವತಿಯ ಕೊಲ್ಲಿ ನಾಗೇಶ್ವರ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ, ಸಹಾಯಕ ಪ್ರಾಧ್ಯಾಪಕಿ,ಡಾ.ಮುಮ್ತಾಜ್ ಬೇಗಂ ಅವರು ಕಾದಂಬರಿ ಯಲ್ಲಿ ಚಿತ್ರಿತವಾದ ಸ್ತ್ರೀ ಪಾತ್ರಗಳನ್ನು,ಆ ಪಾತ್ರ ಗಳು ಅನುಭವಿಸುವ ಶೋಷಣೆಯ ಮುಖಗಳನ್ನು ಸಮರ್ಥ ವಾಗಿ ವಿಶ್ಲೇಷಿಸುವ ಮೂಲಕ ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಮತ್ತು ಹವ್ಯಾಸಗಳನ್ನು ಮೂಡಿಸುವ ಪ್ರಯತ್ನ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಬಸವಶ್ರೀ ಅವರು ಪ್ರಾರ್ಥಿಸಿದರು.ಕನ್ನಡ ವಿಭಾಗದ ಉಪನ್ಯಾಸಕ,ಡಾ.ಮಂಜಪ್ಪ ಸಿ.
ಅವರು ಸರ್ವರನ್ನೂ ಸ್ವಾಗತಿಸಿದರು, ಪ್ರಾಸ್ತಾವಿಕ ನುಡಿಗಳನ್ನು ವಿಭಾಗದ ಮುಖ್ಯಸ್ಥರಾದ ಡಾ.ಹುಲಿಗೆಮ್ಮ.ಬಿ.ಅವರು ನೆರವೇರಿಸಿದರು.ಕನ್ನಡ ವಿಭಾಗದ ಮತ್ತೊಬ್ಬ ಉಪನ್ಯಾಸಕರಾದ ಡಾ.ಸೂರಪ್ಪ,ವೈ.ಪಿ.ಅವರು ವಿಶೇಷ ಉಪನ್ಯಾಸ ನೀಡಲು ಬಂದ ಡಾ.ಮುಮ್ತಾಜ್ ಬೇಗಂ ಅವರ ಸಾಹಿತ್ಯ ಸಾಧನೆಗಳ ಬಗ್ಗೆ, ಮಾತಾಡಿ ,ಅವರ ಪರಿಚಯ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಗಣಪತಿ ಕೆ.ಲಮಾಣಿಯವರು , ವಿದ್ಯಾರ್ಥಿನಿಯರು, ಸಾಹಿತ್ಯ ನನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು,ಎಂದು ಅಧ್ಯಕ್ಷೀಯ ಭಾಷಣ ದಲ್ಲಿ
ಮಾತನಾಡಿದರು..
ಕಾರ್ಯಕ್ರಮವನ್ನು ಸಾಲಿಯಾ ಬೇಗಂ, ಎಂಬ ವಿದ್ಯಾರ್ಥಿನಿ ನಿರೂಪಿಸಿದರೆ, ಕನ್ನಡ ವಿಭಾಗದ ಉಪನ್ಯಾಸಕರಾದ ಶಿವಪ್ರಸಾದ್ ಹಾದಿಮನಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ವರದಿ:ಶಿವಪ್ರಸಾದ್ ಹಾದಿಮನಿ, ಕೊಪ್ಪಳ.




















