ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕ ಆಸ್ಪತ್ರೆ ಆವರಣದಲ್ಲಿರುವ ಆಸ್ಪತ್ರೆ ಕ್ಯಾಂಟೀನ್ ಮೇಲೆ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ನರೇಂದ್ರ ಪವಾರ್ ಅವರು ಧಿಡೀರ್ ಭೇಟಿ ನೀಡಿ, ಕ್ಯಾಂಟೀನ್ ನ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಕ್ಯಾಂಟೀನ್ ಹಾಗೂ ಆವರಣದಲ್ಲಿ ಸರಿಯಾದ ಸ್ವಚ್ಛತೆ ವಾಗಿಟ್ಟುಕೊಳ್ಳದಿರುವುದು,ಅಡುಗೆ ಕೋಣೆಯಲ್ಲಿ ಟೆಸ್ಟಿಂಗ್ ಪೌಡರ್ ಹಾಗೂ ಕಲರ್ ಮೇಕಿಂಗ್ ಡಬ್ಬಿ ಇಟ್ಟಿರುವುದು ,ಕ್ಯಾಂಟೀನ್ ನಲ್ಲಿ ಕುಟುಂಬ ಸಮೇತ ವಾಸ್ತವ್ಯ ಮಾಡುತ್ತಿರುವುದು, ನಿಷೇಧ ವಿದ್ದರೂ ಕ್ಯಾಂಟೀನ್ ನಲ್ಲಿ ಎರಡು ಶ್ವಾನ ಹಾಗೂ ಬೆಕ್ಕುಗಳನ್ನು ಸಾಕುತ್ತಿರುವ ಕುರಿತು, ಮತ್ತು ಆಸ್ಪತ್ರೆಗೆ ಬರುವ ಹೊರರೋಗಿಗಳು, ಮತ್ತು ರೋಗಿಗಳ ಸಂಬಂಧಿಕರಿಗೆ ಮತ್ತು ಆಸ್ಪತ್ರೆಯ ಡ ವರ್ಗದ ಸಿಬ್ಬಂದಿಗಳಿಗೆ ಕ್ಯಾಂಟೀನ್ ನಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವ ಕುರಿತು ದಾಳಿ ನಡೆಸಿ ನೋಟಿಸ್ ಜಾರಿ ಮಾಡಿದ್ದಾರೆ.ದಾಳಿ ವೇಳೆ ಆಡಳಿತ ವೈದ್ಯಾಧಿಕಾರಿಯಾದ ನರೇಂದ್ರ ಪವಾರ್.ತಾಲೂಕ ಆರೋಗ್ಯಾಧಿಕಾರಿಯಾದ ಭರತ್ ಡಿ ಟಿ ,ಸಹಾಯಕ ಆಡಳಿತಾಧಿಕಾರಿ ಉಮೇಶ್ ಪುದಲೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯಾದ ಶ್ರೀಶೈಲ್ ಪಟ್ಟಣ ಶೆಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿಯಾದ ಅಶೋಕ್ ಎ, ಪ್ರಸಾದ್ , ಪ್ರಥಮ ದರ್ಜೆ ಸಹಾಯಕರಾದ ಶ್ರೀ ಶೈಲ ಹಂಚಿನಮನಿ,ದ್ವಿತೀಯ ದರ್ಜೆ ಸಹಾಯಕರಾದ ವಿನಾಯಕ ಗುಂಡೆಂಗಡಿ ಉಪಸ್ಥಿತರಿದ್ದರು.




















