ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜೀವನದಲ್ಲಿ ಯಶಸ್ವಿಯಾಗಬೇಕಾದರೆ ತಾಳ್ಮೆ, ಶಿಸ್ತು ಮತ್ತು ಕಠಿಣ ಪರಿಶ್ರಮ ಅಗತ್ಯ:ಪ್ರೊ. ಉಮಾಶಂಕರ್

ಕೊಪ್ಪಳ:ಯಶಸ್ವಿ ಎಂದರೆ ಜೀವನದಲ್ಲಿ ಅಂದುಕೊಂಡಿರುವುದನ್ನು ಸಾಧನೆ ಮಾಡುವುದು ಯಶಸ್ವಿ. ನಾವು ಶ್ರಮ ಪಟ್ಟಾಗ ಮಾತ್ರ ನಾವು ಜೀವನದಲ್ಲಿ ಮುಂದೆ ಬರುವುದಕ್ಕೆ ಸಾಧ್ಯ. ಜೀವನದಲ್ಲಿ ಯಶಸ್ವಿ ಆಗಬೇಕಾದರೆ ಶಿಸ್ತು, ಕಠಿಣ ಪರಿಶ್ರಮ ಮತ್ತು ತಾಳ್ಮೆ ಬಹಳ ಅಗತ್ಯ ಎಂದು ಪ್ರೊ.ಉಮಾಶಂಕರ ಹೇಳಿದರು.

ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಬುಧವಾರ ದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜು ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಷಾ ಸಂವಹನ ಕೌಶಲ್ಯ ಗಳ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತು ಬದ್ದ ಜೀವನ ಇರಬೇಕು. ನಮ್ಮ ಜೀವನ ಶೈಲಿ ಅಚ್ಚುಕಟ್ಟಾಗಿ ಇರಬೇಕು. ನಮ್ಮ ಜೀವನ ಶೈಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಆಗಬೇಕು. ಎಲ್ಲರಿಗೂ ಜೀವನ ಮಾಡುವ ರೀತಿ ಗೊತ್ತಿರಬೇಕು. ಜೀವನದಲ್ಲಿ ಕಠಿಣ ಪರಿಶ್ರಮ ಪಡಬೇಕು. ಪರೀಕ್ಷೆಯಲ್ಲಿ ಅನುತ್ತಿರ್ಣ ಆದರೂ ಎದೆ ಗುಂದಬಾರದು. ನಿಮ್ಮ ನಿಮ್ಮ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಬೇಕು.
ನಾವು ಇನ್ನೊಬ್ಬರ ಜೊತೆ ಮಾತನಾಡುವುದಕ್ಕೆ ಭಾಷ ಸಂವಹನ ಕೌಶಲ್ಯ ಬಹಳ ಮುಖ್ಯ. ಕೌಶಲ್ಯಗಳು ನಮಗೆ ಕಲಿಯುವುದರಿಂದ ಬರುತ್ತದೆ ಹೊರತು ಹುಟ್ಟಿನಿಂದಲೇ ಬರುವುದಿಲ್ಲ. ನೀವು ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಬೇಕು. ನೀವು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು.
ನಾವು ಹೆಚ್ಚು ಹೆಚ್ಚು ಸಂವಹನ ಮಾಡುವುದರಿಂದ ಹೆಚ್ಚು ಸಾಮಾನ್ಯ ಜ್ಞಾನ ಬರುತ್ತದೆ.
ಶಿಬಿರಗಳಲ್ಲಿ ಕೇಳುವ ಮನಸು ಇದ್ದರೆ ಮಾತ್ರ ಮಾಹಿತಿಯು ನಮಗೆ ಸಂಪೂರ್ಣವಾಗಿ ತಲುಪತ್ತದೆ. ಇಂಗ್ಲಿಷ್ ಅಂತಾರಷ್ಟ್ರೀಯ ಭಾಷೆಯಾಗಿದೆ. ಆದ್ದರಿಂದ ನೀವು ಅದನ್ನು ಕಲಿಯಬೇಕು. ಇಂದು ಪ್ರತಿ ಸಂಸ್ಥೆ ಯಲ್ಲಿ ಶೇ.70 ರಷ್ಟು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಯುತ್ತದೆ. ನಮಗೆ ಭಾಷೆಗಳ ಕುರಿತು ಪ್ರಾಥಮಿಕ ಜ್ಞಾನ ಇರಬೇಕು. ಎಲ್ಲಾರಿಗೂ ಬರವಣಿಗೆ ಗೊತ್ತಿರಬೇಕು. ಪುಸ್ತಕಗಳನ್ನು ಓದುವುದರಿಂದ ಜೀವನವನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಕೌಶಲ್ಯಗಳು ಜೀವನ ಸಬಲೀಕರಣಕ್ಕೆ ಸಹಾಯವಾಗುತ್ತವೆ. ಆದ್ದರಿಂದ ನೀವು ವಿವಿಧ ಕೌಶಲ್ಯಗಳನ್ನು ಕಲಿಯಿರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿರುವ ಕನ್ನಡ ಉಪನ್ಯಾಸಕ ಶಿವ ಪ್ರಸಾದ್ ಹಾದಿಮನಿ ಮಾತನಾಡಿ ಜೀವನದಲ್ಲಿ ನೈತಿಕತೆ ಮೌಲ್ಯ ಮತ್ತು ಕೌಶಲ್ಯ ಗಳನ್ನು ಅನುಸರಿಸಿದರೆ ಮಾತ್ರ ಸಾಧನೆ ಮಾಡುವುದಕ್ಕೆ ಸಾಧ್ಯ.
ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನಮಗೆ ಮನಸ್ಸು ಇರಬೇಕು.
ಸಿಕ್ಕ ಅವಕಾಶಗಳನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು.
ಅಡೆತಡೆಗಳ ಬಂದರೆ ಹೆದರಬಾರದು.

ಇನ್ನೊಬ್ಬ ಅತಿಥಿಯಾಗಿರುವ ಇತಿಹಾಸ ವಿಭಾಗದ ಉಪನ್ಯಾಸಕ ಜಂಬವ್ವ
ಮಾತನಾಡಿ ಶಿಬಿರಗಳಿಂದ ಜೀವನದ ಕೌಶಲ್ಯಗಳನ್ನು ಕಲಿಯುತ್ತಾರೆ.

ಕನ್ನಡ ವಿಭಾಗದ ಉಪನ್ಯಾಸಕ ಡಾ. ಮಂಜಪ್ಪ ಅವರು ಮಾತನಾಡಿ ಶಿಬಿರಗಳಲ್ಲಿ ಭೌತಿಕ ಮತ್ತು ಬೌದ್ಧಿಕವಾಗಿ ಕಲಿಯುತ್ತಾರೆ. ನಿಮ್ಮಲ್ಲಿರುವ ಸೃಜನಶೀಲತೆಯನ್ನು ಬೆಳಸಿಕೊಳ್ಳಬೇಕು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಗ್ಲಿಷ್ ವಿಭಾಗದ ಉಪನ್ಯಾಸಕ ಶಿವಪ್ಪ ಬಡಿಗೇರ ವಹಿಸಿ ಮಾತನಾಡಿ ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಸಂಪರ್ಕ ಸುಲಭವಾಗುತ್ತದೆ. ಬಾಷೆಗೂ ಬದುಕುಗೆ ಸಂಬಂಧ ಇದೆ. ಬದುಕು ಅಭಿವೃದ್ಧಿಯಾದರೆ ಮಾತ್ರ ಭಾಷೆ ಬೆಳೆಯುತ್ತದೆ. ಕೌಶಲ್ಯಗಳನ್ನು ಉಪಯೋಗಿಸಿಕೊಳ್ಳಬೇಕು.
ಬುದ್ದಿ ಎಲ್ಲರಿಗೂ ಬರುವುದಿಲ್ಲ. ಜ್ಞಾನವು ನಿರಂತರ ಅಧ್ಯಯನದಿಂದ ಬರುತ್ತದೆ ಎಂದರು. ಎಲ್ಲರೂ ಸಂದರ್ಭಕ್ಕೆ ತಕ್ಕಂತೆ ವರ್ತನೆ ಮಾಡಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ನರಸಿಂಹ, ಶಿವಪ್ರಸಾದು ಹಾದಿಮನಿ, ಡಾ. ಮಂಜಪ್ಪ, ಡಾ. ಸೂರಪ್ಪ, ಜಂಬವ್ವ, ವಿದ್ಯಾ ಜಂಗಿನ, ಕಲ್ಯಯ್ಯ ಪೂಜಾರ್, ಎಚ್. ಜಿ. ಬೊಮ್ಮನಾಳು ಇದ್ದರು.
ವಿಜಯಕ್ಷ್ಮಿ ಸ್ವಾಗಸಿದರು. ದ್ರಾಕ್ಷಿಯಿಣಿ ನಿರೂಪಿಸಿದರು. ಸುಮಂಗಲ ವಂದಿಸಿದರು. ಗಾಯತ್ರಿ, ಹಂಪಮ್ಮ ಪ್ರಾರ್ಥಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!