ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಂಕೋಲಾದಲ್ಲಿ ಪೊಲೀಸರ ಕಣ್ತಪ್ಪಿಸಿ ಮತ್ತೆ ಎತ್ತುತ್ತಿರುವ ಅಕ್ರಮ ಮಟ್ಕಾ ದಂಧೆ.

ಉತ್ತರ ಕನ್ನಡ: ಅಂಕೋಲಾ ತಾಲೂಕಿನಲ್ಲಿ ಕಳೆದ ಸುಮಾರು ದಿನಗಳಿಂದ ಮತ್ತೆ ನಾಯಿಕೊಡೆಗಳಂತೆ ಮಟ್ಕಾ ದಂಧೆ ತಲೆ ಎತ್ತಿದೆ..! . ಪೊಲೀಸರ ಕಣ್ತಪ್ಪಿಸಿ ಬುಕ್ಕಿಗಳು ತೆರೆ ಮರೆಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಹೌದು, ಇಷ್ಟು ದಿನಗಳಿಂದ ನಿಶ್ಯಬ್ಧವಾಗಿದ್ದ ಮಟ್ಕಾ ದಂಧೆ ಕೆಲ ದಿನಗಳಿಂದ ನಿಧಾನವಾಗಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಹಾಗೂ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಪುನರಾರಂಭಗೊಂಡಿದೆ. ಎಷ್ಟೋ ಗಂಡಸರ ಈ ದುಶ್ಚಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದರು. ಆದರೆ ಈ ಮಟ್ಕಾ ಎನ್ನುವ ರಾಕ್ಷಸ ಚಟಕ್ಕೆ ಮುಕ್ತಿ ಕೊಡುವವರು ಯಾರೂ ಇಲ್ಲ ಎನ್ನುವಂತೆ ಮಟ್ಕಾ ಬುಕ್ಕಿಗಳು ಪುನಃ ಈ ಅಕ್ರಮ ದಂಧೆಯನ್ನು ಶುರುಮಾಡಿದ್ದಾರೆ.
ಎಷ್ಟೇ ದಕ್ಷ ಅಧಿಕಾರಿಗಳು ಬಂದರೂ ಸಹ ಈ ಮಟ್ಕಾ ದಂಧೆಗೆ ಶಾಶ್ವತ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಸತ್ಯ ಎನ್ನುವಂತೆ, ಕೆಲ ದಿನಗಳಿಂದ ಇತಿಹಾಸ ಮರುಕಳಿಸುತ್ತಿದೆ, ಅಂದರೆ ಈ ಲೂಟಿ ಅಕ್ರಮ ದಂಧೆ ಮತ್ತೆ ತಾಲೂಕಿನ ಹಲವೆಡೆ ಯಾರ ಹಂಗಿಲ್ಲದೆ ತಲೆ ಎತ್ತಿದೆ. ಪೊಲೀಸರ ಗಮನಕ್ಕೆ ಬಾರದೆ ನಡೆಯುತ್ತಿದೆ. ಪೊಲೀಸರು ಇನ್ಮುಂದೆ ಎಚ್ಚೆತ್ತು ಈ ಅಕ್ರಮ ದಂಧೆಗೆ ಹಾಗೂ ಬುಕ್ಕಿಗಳಿಗೆ ಯಾವ ರೀತಿ ಕೊನೆಗಾಣಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

ವರದಿ – ಸಂದೇಶ್ ನಾಯ್ಕ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!