ಹನೂರು:ಸದಾ ಸಾಮಾಜಿಕ ಕಾರ್ಯವನ್ನು ಮಾಡುತ್ತಾ ಕ್ಷೇತ್ರದ ಜನರ ಜೊತೆಯಲ್ಲಿ ನಾನು ಬೆರೆಯುತ್ತಿದ್ದೇನೆ ಅಲ್ಲದೆ ಮುಂದಿನ ದಿನಗಳಲ್ಲಿ ಕ್ಷೇತ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಮ್ಮದಾಗುತ್ತದೆ ಅದಾದ ನಂತರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡುತ್ತೇನೆ ಎಂದು
ಬಿ ಜೆ ಪಿ ಮುಖಂಡ ನಿಶಾಂತ್ ಶಿವಮೂರ್ತಿ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಮಹಾಮನೆಯಲ್ಲಿ ಹಲವು ಗ್ರಾಮಗಳಾದ
ಬುದುಬಾಳು,ಬೈರನತ್ತ ಗ್ರಾಮದ ಆದಿಜಾಂಬವ ಸಮುದಾಯದ ಯುವಕರು ಆಗಮಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ನಮ್ಮ ಪಕ್ಷದ ಸಿದ್ದಾಂತಕ್ಕೆ ಒಪ್ಪಿ ಸೇರ್ಪಡೆಯಾದರು ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಪೊನ್ನಾಚಿ ಮಹಾದೇವಸ್ವಾಮಿ,ಪಾಳ್ಯ ರಾಚಪ್ಪ,ಸೇರಿದಂತೆ ಹಲವರು ಹಾಜರಿದ್ದರು.
ವರದಿ-ಉಸ್ಮಾನ್ ಖಾನ್