ಹನೂರು : ಶ್ರೀ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಇಂದು ಬೆಳಿಗ್ಗೆ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಗವಂತನ ದರ್ಶನ ಪಡೆದ ನಂತರ ಶಾಸಕರು ಪ್ರಾಧಿಕಾರ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಮಲೈ ಮಹದೇಶ್ವರಬೆಟ್ಟದಲ್ಲಿ ನಡೆಯುತ್ತಿರುವ ಸರತಿ ಸಾಲಿನ ಸಂಕೀರ್ಣ ಸುರಂಗ ಮಾರ್ಗದ ಕಾಮಗಾರಿಗಳನ್ನು ತುರ್ತಾಗಿ ಗುಣಮಟ್ಟವನ್ನು ಕಾಯ್ದುಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಾರ್ಮೆಟ್ರೀ ಕಟ್ಟಡ ಹತ್ತಿರ ನೂತನ ಮಾದರಿ ಹೈಟೆಕ್ ಸೌಚಲಯ ಹಾಗೂ ಸ್ಥಾನ ಗೃಹ ಕಟ್ಟಡ ನಿರ್ಮಾಣ ಕಾಮಾರಿ ಪರಿಶೀಲನೆ ನಡೆಸಿದ ಶಾಸಕರು ಸಂಬಂದ ಪಟ್ಟ ಇಂಜಿನೀಯರ್ ಗಳಿಗೆ ಹತ್ತಿರ ಇದ್ದು ಕೆಲಸ ಗುಣಮಟ್ಟದಿಂದ ಕೂಡಿರುವುದಲ್ಲದೆ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಪ್ರಾಧಿಕಾರದ ಉಪಕಾರ್ಯದರ್ಶಿ ಚಂದ್ರಶೇಖರ್ ಲೋಕೋಪಯೋಗಿ ಎಇಇ ಚಿಣ್ಣನ್ನ, ಇಂಜಿನೀಯರ್ ಸಂತೋಷ್, ಪ್ರಾಧಿಕಾರದ ಇಂಜಿನಿಯರ್ ಸೆಲ್ವ ಗಣಪತಿ, ನಾಗೇಂದ್ರ, ಹನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್ ಗೌಡ, ಮುಖಂಡರಾದ ಚಿನ್ನವೆಂಕಟ, ಡಿ.ಆರ್.ಮಾದೇಶ್, ಡಿ.ಕೆ.ರಾಜು, ಗೋಪಾಲ್ ನಾಯಕ, ವಿಜಯ್ ಕುಮಾರ್, ಜಯರಾಮು, ವೆಂಕಟೇಶ್, ಸುರೇಶ, ಅಭಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್




















