ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಹುಜನ ಸಮಾಜ ಪಕ್ಷದಿಂದ ನೂತನ ಪದಾಧಿಕಾರಿಗಳ ಆಯ್ಕೆ

ಚಾಮರಾಜನಗರ :ಹನೂರು ವಿಧಾನ ಸಭಾ ಕ್ಷೇತ್ರಕ್ಕೆ ಬಹುಜನ ಸಮಾಜ ಪಕ್ಷದಿಂದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಆದೇಶ ಹೊರಡಿಸಲಾಯಿತು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಗಣ್ಯರ ವಸತಿ ಗೃಹದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳು ಆಯ್ಕೆ ಬಹುಜನ ಸಮಾಜ ಪಕ್ಷದ ಚಾಮರಾಜನಗರ ಜಿಲ್ಲಾಧ್ಯಕ್ಷರು ಬಾ.ಮ ಕೃಷ್ಣ ಮೂರ್ತಿ ನೇತೃತ್ವದಲ್ಲಿ ನಡೆಯಿತು.

ನಂತರ ಮಾತನಾಡಿದ ಅವರು ಬಹುಜನ ಸಮಾಜದ ಉದ್ದಾರಕ್ಕಾಗಿ ಪ್ರಾರಂಭವಾದ ಬಹುಜನ ಪಕ್ಷದಲ್ಲಿ ಪದಾಧಿಕಾರಿಗಳು ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ, ನಾವು ಯಾವುದೇ ರಾಜಕೀಯ ಹಿನ್ನಲೆವುಳ್ಳ ಮನೆತನದಿಂದ ಬಂದಿಲ್ಲ ಆದ್ರೂ ನಾವು ಇಂದು ಸಮಾಜದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡಿರುವುದು ಬಹುಜನ ಪಾರ್ಟಿಯಿಂದ ಹಾಗೂ ಅಂಬೇಡ್ಕರ್ ರವರ ಶಕ್ತಿಯಿಂದಾಯಾಗಿದೆ,
ಬಹುಜನ ಪಕ್ಷದಲ್ಲಿ ಅಂಬೇಡ್ಕರರ ಆಶಯಗಳು ಇದ್ದು ನಾವೆಲ್ಲ ಅವರ ಆಶಾಯದಂತೆ ಪಕ್ಷವನ್ನು ಸಂಘಟನೆ ಮಾಡಬೇಕು ಪಕ್ಷಕ್ಕೆ ಯಾವುದೇ ಮುಜಾಗರ ಉಂಟಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಇಂದು ಸಮಾಜದಲ್ಲಿ ಅಂಬೇಡ್ಕರ್ ಹೆಸರು ಭಾವಚಿತ್ರಕ್ಕೆ ಕೊಡುವ ಮಹತ್ವವನ್ನು ಅವರ ಆಶಯ ತತ್ವ ಸಿದ್ದಂತಾಗಳು ರಾಜಕೀಯದ ನಿಲುವುಗಳಿಗೆ ಕೊಡುತ್ತಿಲ್ಲ ಇದ್ದರಿಂದ ನಾವು ಇನ್ನೂ ಕೂಡಾ ಇತರರಿಗೆ ಗುಲಾಮರಾಗಿ ಅಧಿಕಾರದಿಂದ ಹಿಂದೆ ಉಳಿದಿದ್ದೇವೆ ಎಂದರು.

ಕಾನ್ಸಿರಾಮಜಿ ಅಂಬೇಡ್ಕರ್ ರವರ ಆಶಯವನ್ನು ತಿಳಿದುಕೊಂಡು ಅವರ ಮಾರ್ಗದಲ್ಲಿ ನಡೆದು ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಅಧಿಕಾರ ಮಾಡಿದ್ದರು ಇದು ಎಲ್ಲರು ತಿಳಿದುಕೊಂಡು ಅವರ ಮಾರ್ಗ ಅನುಸರಿಸಿದ್ದರೆ ಖಂಡಿತ ನಾವು ಅಧಿಕಾರ ಮಾಡಬಹುದು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಮಾಡಿ ಶುಭ ಕೋರಿದರು.

ಆಯ್ಕೆಯಾವರು

ಹನೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ರಾಜಣ್ಣ ತೆಳ್ಳನೂರು, ಉಪಾಧ್ಯಕ್ಷರಾಗಿ ಮಹೇಶ್ ಪಾಳ್ಯ, ರಾಜಣ್ಣ ಚಿಕ್ಕಮಲಾಪುರ, ಖಜಾಂಜಿ ಮಲ್ಲು ಕಾಮಗೆರೆ, ಸಂಯೋಜರಾಗಿ ಪ್ರಭು ಸಿಂಗನಲ್ಲೂರು, ಪ್ರಧಾನ ಕಾರ್ಯದರ್ಶಿ ಬಸವಲಿಂಗಪ್ಪ ಲೋಕ್ಕನಹಳ್ಳಿ, ಕಚೇರಿ ಕಾರ್ಯದರ್ಶಿ ವಸಂತ್ ಕುಮಾರ್, ಹನೂರು ಪಟ್ಟಣದ ಅಧ್ಯಕ್ಷರಾಗಿ ಅಜಿತ್ ಕುಮಾರ್, ಜಿಲ್ಲಾ ಉಸ್ತುವಾರಿಯಾಗಿ ಪುಟ್ಟಸ್ವಾಮಿ ಸಿಂಗನಲ್ಲೂರು ಆಯ್ಕೆಯಾದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಬ್ಯಾಡ್ಲ ಮೂಡ ಬಸವಣ್ಣ, ಜಿಲ್ಲಾ ಉಸ್ತುವಾರಿ ಪುಟ್ಟಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಅಮಚವಾಡಿ ಪ್ರಕಾಶ್, ಕೊಳ್ಳೇಗಾಲ ಮಣಿ ಹಾಗೂ ಇನ್ನಿತರರು ಇದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!