ಕೊಪ್ಪಳ : ಗ್ರಾಮೀಣ ಜನರಿಗೆ ಶಿಕ್ಷಣ, ಸ್ವಚ್ಛತೆ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸಬೇಕು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಹೇಳಿದರು.
ತಾಲ್ಲೂಕಿನ ಲೇಬಗೆರೆ ಗ್ರಾಮದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್. ಎಸ್ ನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭಾರತೀಯ ಗ್ರಾಮಗಳು ಸುಧಾರಣೆ ಆಗಬೇಕು, ನಿಮ್ಮಲ್ಲಿ ನಾವು ಎಂಬ ಮನೋಭಾವನೆ ಇರಬೇಕು ಸಮಾಜದಲ್ಲಿ ಕುಟುಂಬಗಳು ಯಾಕೆ ಬದಲಾವಣೆ ಆಗತ್ತವೆ ಅಂತ ವಿಚಾರ ಮಾಡಬೇಕು. ಗ್ರಾಮೀಣ ಜನರಿಗೆ ಅರಿವು ಮೂಡಿಸಬೇಕು. ಈ ರೀತಿಯ ಶಿಬಿರಗಳಿಂದ ವಿಭಿನ್ನ ವಿಚಾರಗಳನ್ನು ಕಲಿತಿದ್ದೀರಿ. ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರಕಾರಿ ಸೌಲಭ್ಯಗಳನ್ನು ಉಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ಬಿ. ಜಿ ಕರಿಗಾರ ಅವರು ಮಾತನಾಡುತ್ತ ಸಿಕ್ಕ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳಬೇಕು, ಮಹಿಳೆಯರು ಉನ್ನತ ಶಿಕ್ಷಣ ಪಡೆಯಬೇಕು, ಒಬ್ಬ ಹೆಣ್ಣುಮಕ್ಕಳು ಶಾಲೆ ಕಲಿತರೆ ಇಡೀ ಒಂದು ಶಾಲೆ ತೆರೆದಂತೆ, ನೀವು ಉತ್ತಮವಾದ ಶಿಕ್ಷಣ ಕಲಿತರೆ ಅದು ಮುಂದೆ ನಿಮ್ಮ ಮಕ್ಕಳಿಗೆ ಅನುಕೂಲ ಆಗುತ್ತದೆ. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಶಿಕ್ಷಣ ಹೆಚ್ಚು ಕಲಿತವರು ತಮ್ಮ ತಂದೆ ತಾಯಿಯವರನ್ನು ವೃದ್ಧ ಆಶ್ರಮಕ್ಕೆ ಸೇರಿಸುತ್ತಿದ್ದಾರೆ. ವಿದ್ಯಾ ಕಡಿಮೆ ಇದ್ದಾಗ ಮಾನವೀಯತೆ ಹೆಚ್ಚು ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಶ್ರೀ ಶಿವಪ್ರಸಾದ್ ಹಾದಿಮನಿ ಅವರು ಮಾತನಾಡುತ್ತಾ ಎಲ್ಲರೂ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಿಮ್ಮಲ್ಲಿರುವ ಕ್ರಿಯಾಶೀಲತೆ ಯನ್ನು ಬಳಸಿಕೊಳ್ಳಬೇಕು. ಎಲ್ಲರು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ನಾಯಕತ್ವ, ಕ್ರಿಯಾಶೀಲತೆಯಂತಹ ಗುಣಗಳು ಈ ರೀತಿಯ ಎನ್. ಎಸ್. ಎಸ್. ಶಿಬಿರಗಳ ಮೂಲಕ ಬರುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಶ್ರೀ ಕಲ್ಲಯ್ಯ ಪೂಜಾರ್ ಅವರು ಮಾತನಾಡುತ್ತಾ ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತದೆ ಅದನ್ನು ಹೊರಗಡೆ ತರಬೇಕು ನೀವು ಚೆನ್ನಾಗಿ ಓದಬೇಕು ಸೌಲಭ್ಯಗಳನ್ನು ಉಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಒಂದು ಬಾರಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿ ಜೀವನವನ್ನು ಯಶಸ್ವಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಬಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಮ್ಮ ಮಹದೇವಪ್ಪ ಕುರಿ, ಕಾಲೇಜಿನ ಉಪನ್ಯಾಸಕ ಡಾ. ನರಸಿಂಹ, ಶಿವಪ್ಪ ಬಾಡಿಗೆರ್, ಕಾರ್ಯಕ್ರಮವನ್ನು ನಾಗರತ್ನ ನಿರೂಪಿಸಿದರು, ಖಾಜಾಬಿ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಮಲ್ಲಮ್ಮ ಸ್ವಾಗತಿಸಿದರು. ಖಾಜಾಬಿ ವಂದಿಸಿದರು.
- ಕರುನಾಡ ಕಂದ



















