ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಕಾರ ಹುಣ್ಣಿಮೆ ವಿಶೇಷ ಎತ್ತುಗಳ ಕರಿ ಹರಿಯುವ ಸಂಭ್ರಮ ಕಾರ್ಯಕ್ರಮ ನೆರವೇರಿಸಲಾಗುತ್ತದೆ ಎಂದು ರೈತ ಈಶಪ್ಪ ಸಬರದ ಮಾತನಾಡಿ ಮುಂಗಾರು ಆರಂಭದ ಮೊದಲ ಹಬ್ಬವೇ ಕಾರ ಹುಣ್ಣಿಮೆ ಆಗಿರುವ ಕಾರಣ, ರೈತರು ಕೃಷಿ ಕಾರ್ಯದ ಜೊತೆಗಾರ ಎತ್ತುಗಳಿಗೆ ನಮಿಸುವ ಹಬ್ಬ ಇದಾಗಿದೆ. ಬೆಳಿಗ್ಗೆಯಿಂದಲೇ ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಸಿಂಗಾರಗೊಳಿಸಿ ಕರಿ ಹರಿಯುವ ದೃಶ್ಯ ರೈತಾಪಿ ವರ್ಗದವರಿಗೆ ರೋಮಾಂಚನವಾಗುತ್ತದೆ.
ಸಂಜೆ ಎತ್ತುಗಳನ್ನು ಓಡಿಸಿ ಕರಿ ಹರಿಯುತ್ತಾರೆ. ಅಲ್ಲಿ ಯಾವ ಬಣ್ಣದ ಎತ್ತು ಮುಂದೆ ಬರುವುದೋ ಆ ಬೆಳೆ ಹುಲುಸು. ಅಂದರೆ ಕೆಂದು ಬಣ್ಣದ ಎತ್ತು ಮುಂದೆ ಬಂದರೆ ಮುಂಗಾರು ಫಸಲು, ಬಿಳಿ ಬಣ್ಣದ ಎತ್ತು ಮುಂದೆ ಬಂದರೆ ಬಿಳಿ ಜೋಳದ ಫಸಲು ಹೆಚ್ಚಿಗೆ ಬೆಳೆಯುತ್ತವೆ ಎನ್ನುವುದು ಕೃಷಿಕರ ನಂಬುಗೆ. ಹಬ್ಬದ ಆಚರಣೆಯಲ್ಲಿ ಮೊದಲು ಕರಿ ಹರೆದ ಎತ್ತಿಗೆ ಬಹುಮಾನ ಮತ್ತು ದ್ವಿತೀಯ ಕರಿ ಹರೆದ ಎತ್ತಿಗೆ ಎರಡನೇ ಬಹುಮಾನ ನೀಡಲಾಗುತ್ತದೆ
ಅಂತೂ ಈ ಕಾರ ಹುಣ್ಣಿವೆ ಎನ್ನುವದು ಜಾನುವಾರುಗಳಿಗಾಗಿ ಹಾಗೂ ಕೃಷಿ ಉಪಕರಣಗಳ ಜೋಪಾನಕ್ಕಾಗಿಯೇ ಮಾಡಿದ ಹಬ್ಬವಾಗಿದೆ ಎಲ್ಲಾ ರೈತಾಪಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೈತನಿಗೆ ಅನ್ನ ನೀಡುವ ಎತ್ತುಗಳ ಸಂಭ್ರಮ ಆಚರಣೆಯಲ್ಲಿ ಭಾಗವಹಿಸಬೇಕೆಂದು ಮಾತನಾಡಿದರು.
ಹಬ್ಬದ ವಿಶೇಷವಾಗಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ ಅವರಿಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ರೈತರಾದ ಹನುಮಂತ ಮರಡಿ, ಬಸಪ್ಪ ಲಾಳಗುಂಡರ್, ಬಸಪ್ಪ ಸಬರದ, ಬಸಪ್ಪ ದಿವಟರ, ಯಲ್ಲಪ್ಪ ಕಲಾಲ್, ರೇವಣಪ್ಪ ಹಟ್ಟಿ, ಶರಣಪ್ಪ ಯತ್ನಟ್ಟಿ ಹಾಗೂ ಇತರರು ಇದ್ದರು.
- ಕರುನಾಡ ಕಂದ



















