ಮಹಾರಾಷ್ಟ್ರ/ ಜತ್ತ : ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಶಾಲೆ, ಸೀಳಿನವಸ್ತಿಯಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಶಾಲಾ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಹಿರಿಯರಾದ ಬಸಣ್ಣಾ ಕಾತ್ರಾಳ ಅವರು ರಿಬ್ಬಿನ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿದ್ದಣ್ಣ ಸೀಳಿನ ಅಧ್ಯಕ್ಷತೆ ವಹಿಸಿದ್ದರು. ಸಂಗಣ್ಣ ಸೀಳಿನ್ ಹಾಗೂ ಪ್ರಕಾಶ್ ಕಾತ್ರಾಳ ಪ್ರತಿಮೆಗೆ ಪೂಜೆ ಸಲ್ಲಿಸಿದರು. ವೇದಿಕೆಯಲ್ಲಿ ಚಂದ್ರಶೇಖರ ತೇಲಿ, ಶುಭಾಷಚಂದ್ರ ಅಂಕಲಗಿ, ಭೀಮರಾಯ ತೇಲಿ, ಸುರೇಶ ಚೌಗುಲೆ, ಇಬ್ರಹಿಂ ಮುಲ್ಲಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭಾಶಯಗಳನ್ನು ಕೋರಿದರು.
ಆರಂಭದಲ್ಲಿ ಹೊಸದಾಗಿ ಪ್ರವೇಶ ಪಡೆದ ಮಕ್ಕಳನ್ನು ವಾದ್ಯ ಮೇಳದೊಂದಿಗೆ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಶೂ ವಿತರಣೆಯು ನಡೆಯಿತು. ಶಾಲೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ರಮೇಶ ಕನಮಡಿ ಎಲ್ಲ ಮಕ್ಕಳಿಗೆ ಉಪಹಾರ ಹಾಗೂ ಸಿಹಿ ವಿತರಿಸಿದರು.
ಪಾಲಕರು, ಗ್ರಾಮದ ಹಿರಿಯರು ಹಾಗೂ ಸಾರ್ವಜನಿಕರು ಈ ಉತ್ಸವದಲ್ಲಿ ಉಪಸ್ಥಿತರಿದ್ದರು.
ಮಲಿಕಜಾನ್ ಶೇಖ ಸ್ವಾಗತಿಸಿದರು. ಗುರುಬಸು ಬಿರಾದಾರ ನಿರೂಪಿಸಿದರೆ ಕಸ್ತೂರಿ ಮಾಂಗ ವಂದಿಸಿದರು.
- ಕರುನಾಡ ಕಂದ




















