ಕಲಬುರಗಿ/ ಚಿತ್ತಾಪುರ: ಪಟ್ಟಣದ ಯರಗಲ್ ರಸ್ತೆಯಲ್ಲಿರುವ ವಿದ್ಯಾನಿಕೇತನ ಪ್ರೌಢ ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಚಿತ್ತಾಪುರ ಹಾಗೂ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಚಿತ್ತಾಪುರ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಉಚಿತ ಯೋಗ ಶಿಬಿರವನ್ನು ಪ್ರಾರಂಭ ಮಾಡಲಾಯಿತು.
ನಂತರ ಪತಂಜಲಿ ಯೋಗ ಸಮಿತಿ ತಾಲೂಕು ಅಧ್ಯಕ್ಷ ವೀರಣ್ಣ ಶಿಲ್ಪಿ ಅವರು ಮಾತನಾಡಿ, ಜೂ.17ರಿಂದ 21ರ ವರೆಗೆ ಬೆಳಗ್ಗೆ 6 ಗಂಟೆಯಿಂದ 7 ಗಂಟೆಯ ವರೆಗೆ (ಶಿಷ್ಟಾಚಾರದ ಪ್ರಕಾರ) ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ವಿದ್ಯಾನಿಕೇತನ ಶಾಲೆಯ ಮಕ್ಕಳ ಜೊತೆಗೆ, ಚಿತ್ತಾಪುರದ ಯೋಗಾಸಕ್ತರು, ಯೋಗ ಸಾಧಕರು ಮತ್ತು ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಸನದಲ್ಲಿ ಪಾಲ್ಗೋಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿ ಸುವರ್ಣ ಶಿಲ್ಪಿ, ಪದಾಧಿಕಾರಿಗಳಾದ ಜಗನ್ನಾಥ ಮಂಗಲಗಿ, ಮಲ್ಲಣ್ಣ ಮಾಸ್ಟರ್ ಮೂಡಬುಳ, ಸಂಘಟನಾ ಕಾರ್ಯದರ್ಶಿ ಅಕ್ಕಮಹಾದೇವಿ ದೇಸಾಯಿ, ರಾಜು ಶಿರ್ಪಾ, ಮಲ್ಲಿಕಾರ್ಜುನ್, ಮುನಿಯಪ್ಪ ಕಡಬೂರ ಹಾಗೂ ಶಾಲೆಯ ಮುಖ್ಯ ಗುರು ರಮೇಶ ಯಾದವಾಡ, ದೈಹಿಕ ಶಿಕ್ಷಕರು ಸೇರಿದಂತೆ ಇತರರು ಇದ್ದರು.
ವರದಿ ಮೊಹಮ್ಮದ್ ಅಲಿ ಚಿತ್ತಾಪುರ



















