ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಂಜಾರ, ಭೋವಿ, ಕೊರಚ, ಕೊರಮ ಜನಾಂಗದವರಿಗೆ ಶೇಕಡಾ 6% ರಷ್ಟು ಮೀಸಲಾತಿ ಕಲ್ಪಿಸುವಂತೆ ಕೋರಿ ಮನವಿ ಸಲ್ಲಿಕೆ

ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಗಮಿಸಿದ ಡಾ. ಜಿ.ಪರಮೇಶ್ವರ್ ಗೃಹ ಸಚಿವರು, ಹೆಚ್. ಕೆ.ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಕರ್ನಾಟಕ ಸರಕಾರ ಇವರಿಗೆ ಪರಿಶಿಷ್ಟ ಪಂಗಡದ ಅವೈಜ್ಞಾನಿಕ ಒಳ ಮೀಸಲಾತಿಯನ್ನು ರದ್ದು ಪಡಿಸಬೇಕು, ಇಲ್ಲವೇ ನಮ್ಮ ಬಂಜಾರ,ಭೋವಿ, ಕೊರಚ,ಕೊರಮ ಜನಾಂಗದವರಿಗೆ ಶೇಕಡಾ 6% ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಸುರೇಶ ಬಳೂಟಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋರ ಸೇನಾ ಕರ್ನಾಟಕ ಪತ್ರಿಕೆಯೊಂದಿಗೆ ಮಾತನಾಡಿ ಸಮಸ್ತ ಬಂಜಾರ, ಭೋವಿ,ಕೊರಚ, ಕೊರಮ ಸಮಾಜದ ಸರ್ವ ನಾಗರಿಗರು ತಮ್ಮ ಸರಕಾರ ಪರಿಶಿಷ್ಟ ಪಂಗಡದಲ್ಲಿ ಒಳ ಮೀಸಲಾತಿ ಮಾಡುತ್ತಿರುವದು ಸರಿಯಷ್ಟೆ. ಆದರೆ ಇದನ್ನು ಮಾಡುವಾಗ ನ್ಯಾ.ನಾಗಮೋಹನ ದಾಸ್ ವರದಿ ತಯಾರಿಸಲು ಜಾತಿ ಗಣತಿ ಕಾರ್ಯವನ್ನು ಮಾಡಿರುತ್ತಿರಿ.ಇದು ಸಮರ್ಪಕವಾಗಿ, ವೈಜ್ಞಾನಿಕವಾಗಿ ನ್ಯಾಯವಾಗಿ ನಡೆದಿರುವುದಿಲ್ಲ, ನಮ್ಮ ಜನಾಂಗದವರು ಅನಕ್ಷರಸ್ಥರು ಮುಗ್ಧರು ಇರುವದರಿಂದ ಹಾಗೂ ನಮ್ಮ ಹತ್ತಿರ ಸರಿಯಾದ ದಾಖಲೆಗಳು ಇಲ್ಲದೇ ಇರುವದರಿಂದ ನಮ್ಮ ಜನಾಂಗಗಳ ನೋಂದಣಿ ಸರಿಯಾಗಿ ಆಗಿರುವುದಿಲ್ಲ. ಈ ಸಮಯದಲ್ಲಿ ಕೆಲವೊಂದಿಷ್ಟು ಜನ ಹೊಟ್ಟೆ ಪಾಡಿಗಾಗಿ ದುಡಿಯಲು ಗುಳೆ ಹೋಗಿರುವುದರಿಂದ ಈ ಜಾತಿಗಣತಿಯಿಂದ ಹೊರಗುಳಿದಿದ್ದಾರೆ. ಆದ ಕಾರಣ ಈ ಒಳ ಮೀಸಲಾತಿಯನ್ನು ಇಲ್ಲಿಗೆ ಬಿಡುವದು ಸೂಕ್ತವೆಂದು ನಮ್ಮ ಅಭಿಪ್ರಾಯ ಹಾಗೊಂದು ವೇಳೆ ಮಾಡಲೇಬೇಕೆಂಬ ಇಚ್ಛೆ ನಿಮಗಿದ್ದರೆ ಒಳಮೀಸಲಾತಿಯಲ್ಲಿ ನಮ್ಮ ಈ ನಾಲ್ಕು ಸಮಾಜಗಳಿಗೆ ಶೇಕಡಾ 6% ರಷ್ಟನ್ನು ನೀಡಿದರೆ ನಮಗೆ ಅನುಕೂಲವಾಗುತ್ತದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ನಮಗೆ ಉಪಕಾರ ಮಾಡುತ್ತೀರೆಂದು ತಮ್ಮಲ್ಲಿ ಕಳಕಳಿಯ ವಿನಂತಿ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮೇಘರಾಜ ಬಳಿಗೇರಿ, ಯಮನೂರಪ್ಪ ಕಟ್ಟಿಮನಿ, ಪ್ರಕಾಶ ಬಳಿಗೇರಿ, ಹನಮಂತ ಚವ್ಹಾಣ, ಪ್ರಾಣೇಶ ನಾಯಕ,ರಾಘವೇಂದ್ರ ಬಳಗೇರಿ, ಲಿಂಬಣ್ಣ ನಾಯಕ,ಚೇತನ ಬಳಿಗೇರಿ,ದಿಲೀಪ ಕಾರಭಾರಿ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!