ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ

ಪಂಚಾಯತಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಗಡುವು

ಯಾದಗಿರಿ/ ಗುರುಮಠಕಲ್: ತಾಲೂಕಿನ ಚಿನ್ನಾಕಾರ ಗ್ರಾಮ ಪಂಚಾಯತ ಸೇರಿದಂತೆ 18 ಗ್ರಾಮ ಪಂಚಾಯತಿಗಳ ಅಧಿಕಾರಿಗಳ ಪ್ರತಿ ಕೆಲಸಕ್ಕೂ ಲಂಚ ಪಡೆಯುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕ.ರಾ.ಗ್ರಾ.ಪಂ.ಸ.ಮ. ಒಕ್ಕೂಟದ ಅಧ್ಯಕ್ಷ ಸುರೇಶ ಚಿನ್ನಾರಾಠೋಡ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ ಅವರಿಗೆ ಮನವಿ ನೀಡಿದರು.

ತಾಲೂಕ ಪಂಚಾಯತ್ ಆವರಣದಲ್ಲಿ ಮನವಿ ನೀಡಿ ಮಾತನಾಡಿದ ಅವರು, ಗ್ರಾಮ ಪಂಚಾಯತ ಪಿಡಿಓ ಮತ್ತು ಎಲ್ಲಾ ಸಿಬ್ಬಂದಿ ವರ್ಗಾದವರ ಬೇಡಿಕೆ ಮತ್ತು ಲಂಚ ಪಡೆಯುವ ಪ್ರಯುಕ್ತ ಎಲ್ಲಾ ಕಾಮಗಾರಿಗಳು ಕುಂಠಿತವಾಗಿದೆ ಎಂದು ಖಾರವಾಗಿ ಆರೋಪ ಮಾಡಿದರು.

ಚಿನ್ನಕಾರ ಗ್ರಾಮ ಪಂಚಾಯತ್ ನಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯ ವಸತಿ ಯೋಜನೆಯಲ್ಲಿ ಪ್ರತಿ ಮನೆಗೆ 3000 ರೂಪಾಯಿ ಲಂಚದ ಬೇಡಿಕೆಯಿದೆ ರೈತರಿಂದ ಜಮೀನಿನ 9-11 ಮಾಡಲು 12000 ರೂಪಾಯಿ ಲಂಚದ ಬೇಡಿಕೆ.

ಚಿನ್ನಾಕಾರ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 15 ನೇ ಹಣಕಾಸು ಕಾಮಗಾರಿ ಮಾಡಿದರೆ ಪಿಡಿಓ-5% ಹಣ, ಅಧ್ಯಕ್ಷರು-5%ಹಣ, ಎಇ-5%ಹಣ, ಎಇಇ-2%ಹಣ, ಕಂಪ್ಯೂಟರ್ ನಿರ್ವಾಹಕ – 2%ಹಣ, ಅಂದಾಜು ಮಾಡುವವರು 1000 ರೂಪಾಯಿ ಹಣ, GST MB ಮಾಡುವವರು 1000 ರೂಪಾಯಿ, GPS ಮಾಡುವವರು 1000 ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ.
ಯಾವುದೇ ಸಭೆ ಮಾಡದೇ ಚಿನ್ನಕಾರ ಗ್ರಾಮ ಪಂಚಾಯತಿಯಲ್ಲಿ ಒಂದೇ ತಿಂಗಳನಲ್ಲಿ ಸುಮಾರು 5-6 ಲಕ್ಷಗಳು ಬಿಲ್ ಪಾವತಿ ಮಾಡಿದ್ದಾರೆ ಎಂದು ಆರೋಪಿಸಿದರು.

ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿದ ರೈತ ಜನರಿಗೆ (ತಮ್ಮ ಬೋರವೆಲ್ ಮುಖಾಂತರ) 1 ವರ್ಷ ಕಳೆದರೂ ಅವರಿಗೆ ಬಿಲ್ ಪಾವತಿ ಮಾಡಿರುವುದಿಲ್ಲ.
ನರೇಗಾ ಕಾಮಗಾರಿಯ ಕುರಿತು ಯಾವುದೇ ಒಂದು ಪಂಚಾಯತಿಯಲ್ಲಿ ಸಭೆ ಕರೆದಿರುವದಿಲ್ಲ ಹಾಗೂ ಕಾಮಗಾರಿ ಮುಗಿದು 6 ತಿಂಗಳು ಕಳೆದರೂ ಪಾವತಿ ಇಲ್ಲ.

ಚಿನ್ನಕಾರ ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ಸದಸ್ಯರಿಗೆ ಒಂದೇ ತರಹದ ಗೌರವದಿಂದ ನೋಡುವುದಿಲ್ಲ, ಬದಲಾಗಿ ಕೆಲವರಿಗೆ ಏಕವಚನ ಶಬ್ದ ಬಳಕೆ ಮಾಡುತ್ತಿದ್ದಾರೆ.
ಸರಿಯಾಗಿ ಸಮಯಕ್ಕೆ ಗ್ರಾಮ ಪಂಚಾಯತ ಗೌರವಧನ ಪಾವತಿ ಮಾಡುತ್ತಿಲ್ಲ ಎಂದು ಅವರು ಆರೋಪಿಸಿ ಇವುಗಳ ಸುಧಾರಣೆಗೆ ಆಗ್ರಹ ಮಾಡಿ 10 ದಿನಗಳಲ್ಲಿ ಗಡುವು ನೀಡಿದ್ದಾರೆ, ಪ್ರತಿಕ್ರಿಯಿಸದಿದ್ದಲ್ಲಿ ಜಿಲ್ಲಾ ಪಂಚಾಯತ್ ಮುತ್ತಿಗೆ ಹಾಕಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆನಂದ ಭಜಂತ್ರಿ, ಭೀಮರಾಯ, ಹಣಮಂತ, ಆನಂದ ವಿಶ್ವಕರ್ಮ, ನಾರಾಯಣ, ಆನಂದ ಎಂಪಾಡ ಸೇರಿದಂತೆ ವಿವಿಧ ಗ್ರಾಮದ ಸದಸ್ಯರು ಹಾಜರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!