ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಥಣಿ ಪುರಸಭೆಯಲ್ಲಿ ಹೊಲಿಗೆ ಯಂತ್ರ ಹಾಗೂ ಯು.ಪಿಎಸ್ ಬ್ಯಾಟರಿ ವಿತರಣೆ ಕಾರ್ಯಕ್ರಮ

ಬೆಳಗಾವಿ/ ಅಥಣಿ : ದಿನಾಂಕ 23/ 06 /2025 ರಂದು ಬೆಳಿಗ್ಗೆ 10:30 ಕ್ಕೆ ಅಥಣಿಯ ಪುರಸಭೆ ಸಭಾಭವನದಲ್ಲಿ 2021 ಮತ್ತು 2022ನೇ ಸಾಲಿನ 15 ನೇ ಹಣಕಾಸಿ ಯೋಜನೆ ಅಡಿಯಲ್ಲಿ ಆಟೋ ಟಿಪ್ಪರ್, ಸ್ವಚ್ಛ ಭಾರತ ಮಿಷನ್ 1.0 ಯೋಜನೆ ಅಡಿಯಲ್ಲಿ 1 ಸ್ಕಿಡ್ ಲೋಡರ್, ಸ್ವಚ್ಛ ಭಾರತ್ ಮಿಷನ್ 1.0 ಯೋಜನೆ ಅಡಿಯಲ್ಲಿ 2 ಟ್ರ್ಯಾಕ್ಟರ್, ಮತ್ತು 2022-23 ನೇ ಸಾಲಿನ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಆಯ್ಕೆಯಾದ 206 ಹೊಲಿಗೆ ಯಂತ್ರದ ಫಲಾನುಭವಿಗಳಿಗೆ, ಹಾಗೂ 53 ಇನ್ವರ್ಟರ್ ಫಲಾನುಭವಿಗಳಿಗೆ, ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಅವರು ವಿತರಣೆ ಮಾಡಿದರು.

ಇದೇ ವೇಳೆ ಮಾತನಾಡಿದ ಶಾಸಕರು ಅಥಣಿ ಪಟ್ಟಣ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಪಟ್ಟಣ ಇನ್ನೂ ಸುಂದರವಾಗಿ ಕಾಣಲು ಎಲ್ಲಾ ಪುರಸಭೆ ಸದಸ್ಯರು ಕೈ ಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಅಥಣಿ ತಾಲೂಕಿನ ಸೌಂದರ್ಯಕ್ಕೆ ತಾಲೂಕಿನ ಡಿವೈಡರ್ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ಮರಗಳನ್ನು ನೆಟ್ಟು ಬೆಳೆಸಿ ಮೀರಜ್ ರಸ್ತೆ ಹಾಗೂ ವಿಜಯಪುರ ರಸ್ತೆಯಲ್ಲಿ ಸ್ವಾಗತ ದ್ವಾರಗಳನ್ನು ನಿರ್ಮಿಸೋಣ ತಾಲೂಕಿನ ಅಭಿವೃದ್ಧಿ ಕಾರ್ಯಕ್ಕೆ ತಾವೆಲ್ಲರೂ ಕೈ ಜೋಡಿಸಬೇಕಿದೆ ಎಂದರು. ಸ್ವತಃ
ನಾನು ಕೂಡಾ 50 ಮರಗಳನ್ನು ಕೊಡುತ್ತೇನೆ ಎಂದು ಲಕ್ಷ್ಮಣ್ ಸವದಿ ಅವರು ಹೇಳಿದರು ಮತ್ತು ನಮ್ಮ ಶಿಕ್ಷಣ ಇಲಾಖೆಯ ನಮ್ಮ ಕ್ಷೇತ್ರದ ಸುಮಾರು 25 ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಿ ಒಬ್ಬ ವಿದ್ಯಾರ್ಥಿಗೆ ಒಂದು ಸಸಿಯನ್ನು ಕೊಟ್ಟು ಆ ವಿದ್ಯಾರ್ಥಿಯ ಶಾಲೆಯಲ್ಲಿ ನಾಲ್ಕು ಅಥವಾ ಐದು ವರ್ಷ ವಿದ್ಯಾಭ್ಯಾಸ ಮುಗಿಯುವವರೆಗೆ ಆ ಗಿಡಕ್ಕೆ ವಿದ್ಯಾರ್ಥಿ ಹೆಸರು ಹಾಕಿ ಮತ್ತು ಬೋರ್ಡ್ ಹಾಕಿ ಈ ವರ್ಷದ ಮೊದಲನೇ ಹಂತಕ್ಕೆ 25 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಅಥಣಿ ಪುರಸಭೆ ಸರ್ವ ಸದಸ್ಯರಿಂದ ಶಾಸಕರಿಗೆ ಸತ್ಕಾರ ಮಾಡಲಾಯಿತು.

ಈ ಸಮಾರಂಭದಲ್ಲಿ ಅಥಣಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಬುಟಾಳಿ, ಉಪಾಧ್ಯಕ್ಷರಾದ ಶ್ರೀಮತಿ ಭುವನೇಶ್ವರಿ ಯಂಕಚ್ಚಿ, ಪುರಸಭೆ ಮುಖ್ಯಾಧಿಕಾರಿಗಳಾದ ಶ್ರೀ ಅಶೋಕ ಗುಡಿಮನಿ ಪುರಸಭೆ ಸದಸ್ಯರಾದ ಕಲ್ಲೇಶ್ ಮಡ್ಡಿ , ದತ್ತ ವಾಸ್ಟರ್, ಸಂತೋಷ್ ಸಾವಡಕರ, ಸರ್ವ ಸದಸ್ಯರು, ಹಾಗೂ ಪುರಸಭೆ ಸಿಬ್ಬಂದಿ ವರ್ಗದವರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

ವರದಿಗಾರ ವಿಠ್ಠಲ ಖೋಕಾಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!